ತುಮಕೂರು: ಬೃಹತ್ ಸಂಖ್ಯೆಯ ಮುಖಂಡರು ಕೈನತ್ತ! ಬಿಜೆಪಿ-ಜೆಡಿಎಸ್‌ಗೆ ಕಾದಿದ್ಯಾ ಶಾಕ್?

By Ravi Janekal  |  First Published Sep 18, 2023, 2:11 PM IST

ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುವುದರಿಂದ ಅಲ್ಲಿರುವಂತಹ ಸಾಕಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆನ್‌ನತ್ತ ಮುಖ ಮಾಡಿದ್ದಾರೆ ಎಂದು ಗುಬ್ಬಿ ಶಾಸಕ ಸ್ಪೋಟಕ ಹೇಳಿಕೆ ನೀಡಿದ್ದಾರೆ.


ತುಮಕೂರು (ಸೆ.18): ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುವುದರಿಂದ ಅಲ್ಲಿರುವಂತಹ ಸಾಕಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆನ್‌ನತ್ತ ಮುಖ ಮಾಡಿದ್ದಾರೆ ಎಂದು ಗುಬ್ಬಿ ಶಾಸಕ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಚಿಕ್ಕೊನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ₹99 ಲಕ್ಷ ಅನುದಾನದಲ್ಲಿ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೊಡ್ಡ ಮಟ್ಟದ ನಾಯಕರಿಂದ ತಳ ಮಟ್ಟದ ನಾಯಕರೂ ಸದಸ್ಯದಲ್ಲೇ ಕಾಂಗ್ರೆಸ್ ಗೆ ಬರಲಿದ್ದಾರೆ ಎಂದರು. 

Latest Videos

undefined

 

ಪರಮೇಶ್ವರ್‌ಗೆ ಸಿಎಂ ಸ್ಥಾನ ಕೊಡಲಿ ಎಂಬುದು ನಮ್ಮ ಆಸೆ: ಗುಬ್ಬಿ ಶಾಸಕ ಶ್ರೀನಿವಾಸ್‌

ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಯಾರೆಲ್ಲಾ ಕಾಂಗ್ರೆಸ್‌ಗೆ ಬರಲಿದ್ದಾರೆ ಅನ್ನೋದು ನಿಮಗೆ ಗೊತ್ತಾಗುತ್ತೆ. ನಾನು ಆ ಬಗ್ಗೆ ಈಗ ಹೇಳಲ್ಲ ಎನ್ನುವ ಮೂಲಕ ನಮ್ಮ  ಸಂಪರ್ಕದಲ್ಲಿರುವ ಜೆಡಿಎಸ್ ಪಕ್ಷ ತೊರೆಯುವ ಹೆಸರು ಬಿಟ್ಟ ಕೊಡದೆ ರಹಸ್ಯವಾಗಿಟ್ಟ ಶಾಸಕ ಶ್ರೀನಿವಾಸ್.

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲ:

ಡಿಸಿಎಂ ವಿಚಾರದ ಬಗ್ಗೆ ಸಚಿವ ಕೆ.ಎನ್. ರಾಜಣ್ಣರವರು ಕೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದೆಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಮಾಧ್ಯಮದವರೇ ಏನೇನೋ ಸೃಷ್ಟಿ ಮಾಡಿರಬೇಕು ಬಿಟ್ಟರೆ ಬೇರೇನೂ ಇಲ್ಲ. ನಮ್ಮ ಪಕ್ಷ ಉತ್ತಮ ಆಡಳಿತ, ಅಭಿವೃದ್ಧಿ ಪರವಾಗಿ ಯೋಚನೆ ಮಾಡುತ್ತಿದೆ ಬಿಟ್ಟರೆ ಬೇರೆ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. 

Karnataka Politics : ಜೆಡಿಎಸ್‌ಗೆ ಗುಬ್ಬಿ ಶಾಸಕ ರಾಜಿನಾಮೆ!

click me!