ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ

Published : May 08, 2022, 04:59 PM IST
ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ

ಸಾರಾಂಶ

* ಕೊಂಚ ತಣ್ಣಗಾಗಿದ್ದ ಧರ್ಮ ದಂಗಲ್ ಮತ್ತೆ ಶುರು * ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ * ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ 

ಬೆಂಗಳೂರು, (ಮೇ.08): ಕೊಂಚ ತಣ್ಣಗಾಗಿದ್ದ ಧರ್ಮ ದಂಗಲ್ ಮತ್ತೆ ಶುರುವಾಗಿದೆ.  ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಶ್ರೀರಾಮಸೇನೆ ಕರೆಕೊಟ್ಟಿದೆ. 

 ಮಸೀದಿಗಳಿಗೆ ಮೈಕ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಿಂದುತ್ವ ಪರ ಸಂಘಟನೆಗಳು ಕರ್ನಾಟಕದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆಗಳು ಮತ್ತೊಂದು ಮಜಲಿಗೆ ಮುಟ್ಟಿವೆ. 

ಈ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯದ ಎಲ್ಲಾ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ನಡೆಸಲಾಗುವುದು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ದೇವರ ಹಾಡುಗಳನ್ನು ಪ್ಲೇ ಮಾಡಲಾಗುವುದು. ಸದ್ಯಕ್ಕೆ ಮಸೀದಿಗಳ ಎದುರು ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ. ಒಂದು ವೇಳೆ ಸರ್ಕಾರ ನಮ್ಮ ಒತ್ತಡಕ್ಕೆ ಮಣಿಯದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೆಗೆದುಕೊಂಡ ಕ್ರಮದ ಮಾದರಿಯಲ್ಲಿಯೇ ಇಲ್ಲಿಯೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಉಲ್ಲಂಘನೆಯಾಗುವುದನ್ನು ತಡೆಯಬೇಕು. ಈ ಬೆಳವಣಿಗೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲ ಎಂದರು.

ಮಂದಿರದಲ್ಲಿ ಮೊಳಗಿದ ಧ್ವನಿವರ್ಧಕ, ಆಸುಪಾಸಿನ ಜನರಿಂದ ದಾಳಿ, ಥಳಿತಕ್ಕೆ ಓರ್ವ ಬಲಿ!

ನಾವು ಆಜಾನ್ ಮಾದರಿಯಲ್ಲಿ ದಿನಕ್ಕೆ ಐದು ಸಲ ದೇವರನಾಮ ಹಾಕುವುದಿಲ್ಲ. ಕೇವಲ ಬೆಳಗ್ಗೆ 5 ಗಂಟೆಗೆ ಮಾತ್ರ ಸುಪ್ರಭಾತಗಳನ್ನು ಹಾಕುತ್ತೇವೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿದಿನ ದೇವಾಲಯಗಳಲ್ಲಿ ಬೆಳಿಗೆ 5ರಿಂದ 6ರವರೆಗೆ ಒಂದು ಗಂಟೆಗಳ ಕಾಲ ದೇವಸ್ಥಾನ ಸಮಿತಿ, ಕಾರ್ಯಕರ್ತರು ಮತ್ತು ಭಕ್ತರು ಸುಪ್ರಭಾತ ಸೇವೆ, ಭಜನೆ ಮಾಡುತ್ತಾರೆ. ನಾನು ಮೈಸೂರಿನಲ್ಲಿ ನಡೆಯುವ ಸುಪ್ರಭಾತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ. ಪೊಲೀಸರು ಮೊದಲು ಮಸೀದಿಗೆ ಹೋಗಲಿ, ಆಮೇಲೆ ನಮ್ಮ ಬಳಿ ಬರಲಿ. ಪೊಲೀಸರು ನಮ್ಮ ಅಭಿಯಾನಕ್ಕೆ ತೊಂದರೆ ಕೊಡಬಾರದು. ನಮ್ಮ ಆಂದೋಲನಕ್ಕೆ ಬೆದರಿಕೆ ಹಾಕುವ ಅಥವಾ ಹತ್ತಿಕ್ಕುವ ಕೆಲಸ ಮಾಡಬಾರದು. ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಧರ್ಮ ಸಂಘರ್ಷ ನಿಲ್ಲಬೇಕಂದ್ರೆ ರಾಜಕಾರಣಿಗಳು ಮೌನವಾಗಿರಬೇಕು
ಧಾರವಾಡ, (ಮೇ.08): ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ರಂಭಾಪುರಿ ಜಗದ್ಗುರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ರಾಜಕಾರಣಿಗಳು ಮೌನವಾಗಿರಬೇಕು. ಅವರು ಮೌನವಾದರೆ ಎಲ್ಲವೂ ಪರಿಹಾರ ಆಗುತ್ತದೆ ಎಂದು ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಹೇಳಿದ್ದಾರೆ.

ರಾಜ್ಯದಲ್ಲಿ ಧರ್ಮದ ವಿಷಯದಲ್ಲಿ ಕೆಲ ರಾಜಕೀಯ ಶಕ್ತಿಗಳು ನುಸುಳಿವೆ. ಇದರಿಂದ ಧರ್ಮದ ಘನತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮುಂಚೆ ಇಂಥ ಧರ್ಮ ಸಂಘರ್ಷಗಳು ಇರಲಿಲ್ಲ. ತಮ್ಮ ತಮ್ಮ ಧರ್ಮ ಕಾಪಾಡಿಕೊಂಡಿದ್ದರು. ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತಾ ಭಾವವಿತ್ತು. ಈಗ ರಾಜಕೀಯ ಶಕ್ತಿಯ ಪ್ರಚೋದನೆಯಾಗುತ್ತಿದೆ. ಇದರಿಂದ ಇಂಥ ಸಮಸ್ಯೆ ಆಗಿದೆ. ಯಾವುದೇ ಸಮುದಾಯ ಪ್ರಚೋದನೆಗೆ ಒಳಗಾಗಬಾರದು ಎಂದರು.

ಬಾಳೆಹೊನ್ನೂರ ಧರ್ಮಪೀಠ ಮಾನವ ಧರ್ಮಕ್ಕೆ ಜಯ ಎಂದು ಹೇಳುತ್ತ ಬಂದಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿ ಹೇಳುತ್ತಿದೆ. ಐಕ್ಯತೆ ಬೆಳೆಸುವ ಕೆಲಸ ಬಾಳೆಹೊನ್ನೂರ ಧರ್ಮಪೀಠ ಮಾಡಿದೆ. ಆದರೆ ಇತ್ತೀಚಿನ ಬೆಳವಣಿಗೆ ಬಹಳ ಬೇಸರ ತರಿಸಿದೆ. ಜನ ರಾಜಕಾರಣಿಗಳ ಮಾತಿಗೆ ಎಷ್ಟು ಬೇಕೋ ಅಷ್ಟೇ ಬೆಲೆ ಕೊಡಬೇಕು. ಧರ್ಮ ಸಹಿಷ್ಣುತೆ ಕಾಪಾಡಿಕೊಂಡು ಹೋಗಬೇಕು. ಒಬ್ಬರು ಒಂದು ಹೇಳಿದರೆ ಮತ್ತೊಬ್ಬರು ಇನ್ನೊಂದು ಹೇಳುತ್ತಾರೆ. ಹೀಗಾಗಿ ರಾಜಕಾರಣಿಗಳು ಮೌನವಾಗಿರಬೇಕು. ಅವರು ಮೌನವಾದರೆ ಈ ಸಮಸ್ಯೆ ತಾನೇ ಪರಿಹಾರ ಆಗುತ್ತದೆ ಎಂದು ರಂಭಾಪುರಿ ಜಗದ್ಗುರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ