ಶಾಶ್ವತ ಪರಿಹಾರ ಮಾಡಿಕೊಡಿ ಸ್ವಾಮಿ ಅಂತ ಸವದಿ ಕಾಲಿಗೆರಗಿದ ಮಹಿಳೆಯರು!

By Suvarna News  |  First Published May 8, 2022, 4:39 PM IST

ಶಾಶ್ವತ ಪರಿಹಾರ  ನೀಡುವಂತೆ ನೆರೆ ಸಂತ್ರಸ್ಥರು ಮಾಜಿ ಡಿಸಿಎಂ ಸವದಿ ಕಾಲಿಗೆರಗಿ ಬೇಡಿಕೊಂಡಿದ್ದಾರೆ. 2019ರಲ್ಲಿ ರಲ್ಲಿ ಬಂದ ಭಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಸದ್ಯ ಶೆಡ್ ನಲ್ಲಿ ವಾಸವಿರೋ ಜನರು ಮಾಜಿ ಡಿಸಿಎಂ‌ ಅವರ ಕಾಲಿಗೆರಗಿ ಶಾಶ್ವತ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.


ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಮೇ. 8): ತಗಡಿನ ಶೆಡ್ ನಿರ್ಮಾಣ ಮಾಡಿಕೊಂಡು ಅದರಲ್ಲೆ ವಾಸವಿರೋ ಜನ. ಇನ್ನೊಂದು ಕಡೆ ನೆರೆ ಸಂತ್ರಸ್ಥರಿಗಾಗಿಯೇ ಗುರುತಿಸಿರುವ ಜಾಗದಲ್ಲಿ ಬೆಳೆದು ನಿಂತಿರುವ ಗಿಡಗಂಟಿ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಸತ್ತಿ (Satti) ಗ್ರಾಮದಲ್ಲಿ. 

ಗ್ರಾಮದ ಪಕ್ಕದಲ್ಲಿಯೇ ಹರಿದಿರುವ ಬೃಹತ್ ಕೃಷ್ಣಾ ನದಿಯಿಂದ (Krishna river) ಪ್ರತಿವರ್ಷ ಮಳೆಗಾಲದಲ್ಲಿ ಗ್ರಾಮಕ್ಕೆ ಅಪಾಯ ತಪ್ಪಿದ್ದಲ್ಲ.. 2019, 20, 2021 ರಲ್ಲಿ ಸತತ ಮೂರು ವರ್ಷಗಳ ಕಾಲ ಈ ಗ್ರಾಮಕ್ಕೆ ನೆರೆ ಸಮಸ್ಯೆ ಕಾಡಿದ್ದು ಜನ ಮನೆ ಕಳೆದುಕೊಂಡು ಸಧ್ಯ ತಗಡಿನ ಶೆಡ್ ನಲ್ಲಿಯೇ ವಾಸಗಾಗಿದ್ದಾರೆ. 

Tap to resize

Latest Videos

ಮೊನ್ನೆಯಷ್ಟೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು( lakshman savadi) ಖಾಸಗಿ ಕಾರ್ಯಕ್ರಮದ ನಿಮಿತ್ತ ಇದೆ ಸತ್ತಿ ಗ್ರಾಮಕ್ಕೆ ಭೇಟಿ ‌ನೀಡಿದ್ರು ಈ ಸಮಯದಲ್ಲಿ ಮಹಿಳೆಯರು ಸವದಿಯವರ  ಕಾಲಿಗೆರಗಿ ನಮಗೆ ಶಾಶ್ವತ ಪರಿಹಾರ ಮಾಡಿಕೊಡಿ ಸ್ವಾಮಿ ಅಂತ ಗೋಗರೆದಿದ್ದಾರೆ.  ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ ಹಾಗೂ ರಾಯಭಾಗ ತಾಲೂಕಿನ ಕೆಲವು ನದಿ ತೀರದ ಗ್ರಾಮಗಳಿಗೆ ಸತತ ನೆರೆ ಬರುತ್ತಿದ್ದು ಮನೆ ಕಳೆದುಕೊಂಡ ಜನರಿಗೆ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಶಾಶ್ವತ ಪರಿಹಾರ ನೀಡುತ್ತಿಲ್ಲ‌. ಮನೆ ಕಳೆದುಕೊಂಡ  ಸಂತ್ರಸ್ಥರಿಗಾಗಿಯೇ ಪ್ರತ್ಯೇಕ ಆರ್ ಸಿ ಸೆಂಟರ್ ಗುರುತಿಸಿ ಅಲ್ಲಿ ವಿದ್ಯುತ್ ಕಂಬ ಹಾಕಿಸಿ ಎಲ್ಲವನ್ನೂ ಸಜ್ಜುಗೊಳಿಸಲಾಗಿದೆ ಆದರೆ ಜಿಲ್ಲಾಡಳಿತದಿಂದ ಇನ್ನೂ ಸಂತ್ರಸ್ಥರಿಗೆ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಇದೆ ತಗಡಿನ ಶೆಡ್ ನಲ್ಲಿಯೇ ಸಂತ್ರಸ್ಥರು ವಾಸವಿರಬೇಕಾದ ಅನಿವಾರ್ಯತೆ ಎದುರಾಗಿದೆ..

CHHATRAPATI SHIVAJI JAYANTI ಬೆಳಗಾವಿಯಲ್ಲಿ ಸತತ 12 ಗಂಟೆಗಳ ಕಾಲ ಅದ್ಧೂರಿ ಮೆರವಣಿಗೆ!

ಪದೇ ಪದೇ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದು ಶಾಶ್ವತ ಪರಿಹಾರ ಮತ್ತು ಶಿಫ್ಟಿಂಗ್ ಗಾಗಿ ಜನಪ್ರತಿನಿಧಿಗಳ ಕಾಲಿಗೆರಗಿ ಬೇಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಜನಪ್ರತಿನಿಧಿಗಳು ಜನರಿಗೆ ಶಾಶ್ವತ ಪರಿಹಾರ ಒದಗಿಸುವತ್ತ ಗಮನಹರಿಸಬೇಕಿದೆ.

click me!