ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ -2024ಕ್ಕೆ ಹಿನ್ನೆಡೆ; ಕೆ.ಎನ್. ರಾಜಣ್ಣಗೆ ಮುಖಭಂಗ

By Sathish Kumar KHFirst Published Feb 21, 2024, 7:45 PM IST
Highlights

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮಂಡಿಸಿದ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ - 2024 ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಭಾರಿ ಹಿನ್ನಡೆ ಉಂಟಾಗಿದೆ.

ವಿಧಾನ ಪರಿಷತ್ (ಫೆ.21): ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರಗೊಂಡ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ - 2024 ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಪರಿಶೀಲನಾ ಸಮಿತಿ ರಚಿಸುವಂತೆ ಮೇಲ್ಮನೆ ಸದಸ್ಯರು ಆಗ್ರಹಿಸಿದ್ದಾರೆ. ಇದರ ನಡುವೆಯೂ ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕವನ್ನು ಮತಕ್ಕೆ ಹಾಕಲಾಗಿದ್ದು, ಸರ್ಕಾರದ ಸಹಕಾರಿ ಮಸೂದೆಗೆ ಹಿನ್ನಡೆ ಉಂಟಾಗಿದೆ. ಈ ಮೂಲಕ ಕೆ.ಎನ್. ರಾಜಣ್ಣ ಕನಸಿನ ಕಾಯ್ದೆಗೆ ಗಾರ್ಭಾವಸ್ಥೆಯಲ್ಲಿಯೇ ಹೊಡೆತ ಬಿದ್ದಿದೆ.

ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ -2024ದ ಕುರಿತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಚರ್ಚೆ ಆರಂಭಿಸುತ್ತಾರೆ. ಈ ವೇಳೆ ಮೇಲ್ಮನೆಯಲ್ಲಿ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತದೆ. ಆರಂಭದಲ್ಲಿ ಬಿಜೆಪಿ ನಾಯಕರು ಪರಿಶೀಲನಾ ಸಮಿತಿ ರಚನೆ ಮಾಡಿದ ಬಳಿಕ ವಿಧೇಯಕ ಮಂಡನೆ ಮಾಡುವಂತೆ ಬಿಜೆಪಿ-ಜೆಡಿಎಸ್ ಪಟ್ಟು ಹಿಡಿದವು. ಆದರೆ, ಕಾಂಗ್ರೆಸ್‌ ನಾಯಕರು ಪರಿಶೀಲನಾ ಸಮಿತಿ ಬೇಕಿಲ್ಲ ಬಿಲ್ ಪಾಸ್ ಮಾಡಿ ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಹಕಾರಿ ಸಚಿವ ರಾಜಣ್ಣ ಅವರು, ಕೆಳಮನೆಯಲ್ಲಿ ಬಿಲ್ ಪಾಸ್ ಆಗಿದೆ. ಇಲ್ಲಿಯೂ ಪಾಸ್ ಮಾಡಿ ಎಂದು ಮನವಿ ಮಾಡದ್ದಾರೆ. ಇದಕ್ಕೊಪ್ಪದ ಬಿಜೆಪಿ ಮಸೂದೆಯನ್ನು ಮತಕ್ಕೆ ಹಾಕುವಂತೆ ಪಟ್ಟು ಹಿಡಿದರು.

ಕರ್ನಾಟಕದ 30 ಕಾನೂನುಗಳ ನಿಷ್ಕ್ರಿಯ ವಿಧೇಯಕ, ಪೊಲೀಸರ ವರ್ಗಾವಣೆ 2 ವರ್ಷಕ್ಕೆ ವಿಸ್ತರಣೆ ಮಸೂದೆಗಳಿಗೆ ಅಂಗೀಕಾರ

ಪರಿಶೀಲನಾ ಸಮಿತಿಗೆ ವಿಧೇಯಕ ಹಾಕುವಂತೆ ಬಿಜೆಪಿ- ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಅವರು ವಿರೋಧ ಪಕ್ಷದವರ ಅಭಿಪ್ರಾಯದಂತೆ ಮಸೂದೆಯನ್ನು ಮತಕ್ಕೆ ಹಾಕಿದರು. ಪ್ರಸ್ತಾವನೆ ಪರವಾಗಿ ಇರುವವರು ಎದ್ದು ನಿಂತು ಸೂಚಿಸಬೇಕು ಎಂದ ಉಪಸಭಾಪತಿ‌ ಹೇಳಿದರು. ಈ ವೇಳೆ ವಿಧೇಯಕವನ್ನು ಪರಿಶೀಲನಾ‌ ಸಮಿತಿಗೆ ಹಾಕುವ ಪ್ರಸ್ತಾವನೆ ಪರವಾಗಿ ಬಿಜೆಪಿ- ಜೆಡಿಎಸ್  ಸದಸ್ಯರ 33 ಮತಗಳು ಚಲಾವಣೆ ಆದವು. ವಿಧೇಯಕವನ್ನು ಪರಿಶೀಲನಾ‌ ಸಮಿತಿ ಹಾಕುವ ಪ್ರಸ್ತಾವನೆ ವಿರೋಧವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ 21ಮತಗಳು ಚಲಾವಣೆ ಆದವು. ಹೀಗಾಗಿ, ಕರ್ನಾಟಕ  ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕ-2024 ಅನ್ನ ಉಪಸಭಾಪತಿ ಪ್ರಾಣೇಶ್ ಅವರು  ಪರಿಶೀಲನಾ ಸಮಿತಿಗೆ ಹಾಕಿದರು.

ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು: 
2024ನೇ ಸಾಲಿನ ಕರ್ನಾಟಕ ಸೌಹಾರ್ದ ಸರ್ಕಾರಿ ಅಧಿನಿಯಮ (ತಿದ್ದುಪಡಿ) ವಿಧೇಯಕದ ಬಗ್ಗೆ ಮಾತನಾಡಿದ ಪರಿಷತ್ ಸದಸ್ಯ ಭೊಜೇಗೌಡ ಅವರು, ಕೃಷಿ ಬದುಕು ಯುವಕರಿಂದ ಮಾಯ ಆಗುತ್ತಿದೆ. ಸಹಕಾರ ಕ್ಷೇತ್ರ ಅಂದರೆ ರೈತರ ಜೀವನಾಡಿ ಇದ್ದಂತೆ. ಒನ್ ಟೈಮ್ ನಷ್ಟವನ್ನು ಭರಿಸುವ ಕೆಲಸ ಸರ್ಕಾರವೇ ಮಾಡ್ತಿದೆ. ಹೀಗಾಗಿ ಕೋ-ಆಪರೇಟ್ ಸೊಸೈಟಿ ತನ್ನ ಕಾಲ ಮೇಲೆ ನಿಂತಿದೆ. ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದರೆ ಸಹಕಾರ ಬ್ಯಾಂಕ್ ಸ್ವತಃ ಬಲದಿಂದ ನಿಲ್ಲಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 500 ಕೋಟಿ ರೂ. ವ್ಯವಹಾರ ಮಾಡುವ ಸಹಕಾರ ಬ್ಯಾಂಕ್ ಸಹ ಇದೆ. ಸಾಕಷ್ಟು ಸಲ ಮಾತನಾಡುತ್ತೇವೆ ರಾಜಕೀಯ ಹಸ್ತಕ್ಷೇಪ ಸಲ್ಲದು ಅಂತೀವಿ. ಯಡಿಯೂರಪ್ಪ ಸರ್ಕಾರದ ಕಾಲದಲ್ಲಿ ಸಹಕಾರ ಬ್ಯಾಂಕ್ ನಲ್ಲಿ ಹಸ್ತಕ್ಷೇಪ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲೂ ಸರ್ಕಾರದ ಹಸ್ತಕ್ಷೇಪ ಆಗಿತ್ತು. ಸೊಸೈಟಿ ಕಟ್ಟಿ ಹಣಕಾಸು ಚನ್ನಾಗಿದೆ ಎಂಬ ಸಂದರ್ಭದಲ್ಲಿ ಯಾವ ರೀತಿಯಾಗಿ ಸರ್ಕಾರ ನಡೆಸಿಕೊಳ್ಳಲಿದೆ ಅಂತ ನೋಡಬೇಕು ಎಂದರು.

ರಾಜಕೀಯ ಹಸ್ತಕ್ಷೇಪ ಆಗಿ ಸಹಕಾರಿ ಬ್ಯಾಂಕುಗಳು ಮೇಲೆ ಸಮಸ್ಯೆ ಆಗಲಿದೆ. ಕೃಷಿ ಲಾಭದಾಯಕ ಎಂದು ನಾವು ತೋರಿಸುತ್ತೇವೆ. ಇವತ್ತು ಭತ್ತ ಬೆಳೆಯೋಕೆ ಆಗ್ತಿಲ್ಲ. 100ರಲ್ಲಿ 90% ಜನರು ಭತ್ತ ಬೆಳೆಯುತ್ತಿಲ್ಲ. ಇದು ಮುಂದಿನ ಪೀಳಿಗೆಗೆ ತುಂಬಾ ಕಷ್ಟದಾಯಕವಾಗಲಿದೆ. ಈಗಾಗಲೇ ಪರಿಷತ್ ಲ್ಲಿ ಬಿಲ್ ಮಂಡನೆಯಾಗಿದೆ. ಹೀಗಾಗಿ ಪರಿಷತ್ ನಲ್ಲಿ ಒಂದು ಸಮಿತಿ ರಚನೆ ಮಾಡಿ. ಇನ್ನಷ್ಟು ವಿಧೇಯಕದಲ್ಲಿ ತಿದ್ದುಪಡಿ ಮಾಡಿ. ಇದರಿಂದ ಸಹಕಾರ ಬ್ಯಾಂಕ್ ಗಳಿಗೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಭೊಜೇಗೌಡ ಹೇಳಿದ್ದರು.

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್; 135 ಸೀಟುಗಳಿದ್ದರೂ ಸರ್ಕಾರಕ್ಕೆ ಕುತ್ತು ಬಂತಾ?

ಸಹಕಾರಿ ಬಿಲ್‌ನಲ್ಲಿ ಬದಲಾವಣೆ ಆಗಬೇಕು: 
ಸಹಕಾರಿ ಮುಟ್ಟದ ಯಾವುದೇ ಕ್ಷೇತ್ರ ಇಲ್ಲ. ಗಾಂಧೀಜಿ ಗ್ರಾಮ ಸ್ವರಾಜ್ಯ ಕನಸು ಕಂಡಿದ್ದರು. ಸಹಕಾರಿ ಪ್ರತಿಯೊಬ್ಬರಿಗೂ ಮುಟ್ಟುವ ಕ್ಷೇತ್ರವಾಗಿದೆ. ಸಾಮಾನ್ಯವಾಗಿ ಮೇಲ್ಮನೆಯಲ್ಲಿ ಯಾವುದೇ ಬಿಲ್ ವಿರೋಧ ಮಾಡಲ್ಲ. ಆದರೆ ಈ ಬಿಲ್ ನಲ್ಲಿ ಬದಲಾವಣೆ ಆಗಬೇಕು. ಹೀಗಾಗಿ, ಈ ಬಿಲ್ ಗಳನ್ನು ಮತ್ತೆ ಪರಿಶೀಲನಾ ಸಮಿತಿಗೆ ಕಳುಹಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಆಗ್ರಹಿಸಿದ್ದರು.

click me!