ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಮಂಡ್ಯದಲ್ಲಿ ರಾಜಕೀಯ ಪ್ರವೇಶ ಬಗ್ಗೆ ಸುಳಿವನ್ನು ನೀಡಿದ್ದಾರೆ.
ಮಂಡ್ಯ (ಫೆ.21): ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಿ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹಲವರು ರಾಜಕೀಯ ಪ್ರವೇಶದ ಬಗ್ಗೆ ಹೇಳುತ್ತಿದ್ದಾರೆ. ನಾನು ಕೂಡ ಅದೇ ಆಲೋಚನೆಯಲ್ಲಿದ್ದೀನಿ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದರೆ ಹೇಳುತ್ತೇನೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ.
ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕು ಅಥವಾ ಲೋಕಸಭೆಗೆ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಿ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ ಎಂದು ಹೇಳಿದರು.
undefined
ಡಿಕೆಸು ವಿರುದ್ಧ ಮಂಜುನಾಥ್ ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ
ಆದರೆ, ನಾನು ಮುಂದಿನ ದಿನಗಳಲ್ಲಿ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದರೆ ಹೇಳುತ್ತೇನೆ. ನಾನು ಈಗಲೂ ಅದೇ ಆಲೋಚನೆಯಲ್ಲಿಯೇ ಇದ್ದೀನಿ. ಲೋಕಸಭೆ ಪ್ರವೇಶ ಮಾಡುವುದು ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೆ ಬೇರೆ, ರಾಜಕೀಯವೇ ಬೇರೆ ಎಂಬುದು ನನ್ನ ಅರ್ಥವಾಗಿದೆ. ಸದ್ಯ ನಾನು ಕೂಡ ಇದೇ ಆಲೋಚನೆಯಲ್ಲಿ ಇದ್ದೀನಿ. ನಾನು ಆರೋಗ್ಯ ಕ್ಷೇತ್ರದಲ್ಲಿ ಮಾಡಿರೋದು ಜನ ಸೇವೆ. ರಾಷ್ಟ್ರ ಮಟ್ಟದಲ್ಲಿ ಜನ ಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳ್ತಾರೆ. ನಾಳೆ ಮೈಸೂರಿಗೆ ಹೋಗ್ತಾ ಇದೀನಿ. ನಾನು ಹೋದ ಕಡೆಗೆಲ್ಲಾ ಜನರು ನೀವು ಎಲ್ಲಿ ನಿಲ್ಲುತ್ತೀರಾ ಎಂದು ಕೇಳುತ್ತಾರೆ ಎಂದು ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆ ಮೇಲೆ ಸರ್ಕಾರದ ತನಿಖೆ: ಜಯದೇವ ಸಂಸ್ಥೆ ಮೇಲೆ ಸರ್ಕಾರದಿಂದ ತನಿಖೆಗೆ ಚಿಂತನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇಡೀ ರಾಷ್ಟ್ರದಲ್ಲಿ ಜಯದೇವ ಸಂಸ್ಥೆ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳಿಸಿದ್ದೇವೆ. ಈ ಸರ್ಕಾರ ಹಾಗೂ ಹಿಂದಿನ ಸರ್ಕಾರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ತನಿಖೆ ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ, ಆದರೂ ನನಗೆ ಸಂತೋಷ. ಕೇಂದ್ರ ಆರೋಗ್ಯ ಸ್ಥಾಯಿ ಸಮಿತಿಯೇ ನಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರ್ಯವೈಖರಿ, ನಿರ್ವಹಣೆ ನೋಡಿ ಈ ಆಸ್ಪತ್ರೆಯ ಮಾಲೀಕರು ಯಾರು ಎಂದಿದ್ದರು. ಸರ್ಕಾರಕ್ಕೆ ಈ ಸಂಸ್ಥೆ ಶೋಕೇಸ್ ಆಗಿದೆ ಎಂದಿದ್ಧರು. ಜಯದೇವ ರೀತಿ ಸರ್ಕಾರಿ ಸಂಸ್ಥೆಗಳನ್ನ ಯಾಕೆ ಅಭಿವೃದ್ದಿ ಮಾಡಬಾರದು ಎಂದು ಸರ್ಕಾರವೇ ತಿಳಿಸಿತ್ತು ಎಂಬುದನ್ನು ನೆನಪು ಮಾಡಿಕೊಂಡರು.
ಕರ್ನಾಟಕದ 30 ಕಾನೂನುಗಳ ನಿಷ್ಕ್ರಿಯ ವಿಧೇಯಕ, ಪೊಲೀಸರ ವರ್ಗಾವಣೆ 2 ವರ್ಷಕ್ಕೆ ವಿಸ್ತರಣೆ ಮಸೂದೆಗಳಿಗೆ ಅಂಗೀಕಾರ
ಜನರ ಸೇವೆ ಬಗ್ಗೆ ಆಲೋಚಿಸಲೂ ಸಮಯ ಸಿಗ್ತಿಲ್ಲ: ಮಾಜಿ ಪ್ರಧಾನಿ ದೇವೇಗೌಡರ ಪುತ್ರಿ ಅನುಸೂಯ ಅವರು ತಮ್ಮ ಪತಿ ಡಾ.ಸಿ.ಎನ್. ಮಂಜುನಾಥ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ, ನಾನು ರಾಜಕೀಯದವರ ಮನೆಯಲ್ಲಿ ಹುಟ್ಟಿದ್ದೀನಿ. ನಾನು ಹುಟ್ಟಿದ ಒಂದೆ ವರ್ಷದಲ್ಲಿ ತಂದೆ ದೇವೇಗೌಡರು ಶಾಸಕರಾಗಿದ್ದರು. ನಾನೂ ರಾಜಕೀಯದಲ್ಲಿನ ಏಳು-ಬೀಳು ನೋಡಿದ್ದೇನೆ. ಮಂಜುನಾಥ್ ಜನರ ಸೇವೆ ಮಾಡಿದ್ದಾರೆ. ನೆಮ್ಮದಿಯಾಗಿ ಆ ಸೇವೆಯನ್ನ ಮಾಡಿದ್ದೇವೆ ಎಂದು ಆಲೋಚಿಸಲು ಸಮಯ ಸಿಗುತ್ತಿಲ್ಲ. ಸಂತೋಷವಾಗಿ ಆ ವಿಚಾರ ಆಸ್ವಾದಿಸಲು ಆಗ್ತಿಲ್ಲ ಎಂದು ಹೇಳಿದರು.