ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವದ ಸಂಭ್ರಮ

Published : Oct 13, 2024, 03:38 PM ISTUpdated : Oct 13, 2024, 03:52 PM IST
ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವದ ಸಂಭ್ರಮ

ಸಾರಾಂಶ

ಶೃಂಗೇರಿಯ ಶಾರದಾ ಪೀಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಜಯದಶಮಿಯ ಮರುದಿನ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಕಿರಿಯ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಶ್ರೀಪಾದರು ರತ್ನಖಚಿತ ಕಿರೀಟ ಧರಿಸಿ, ರಾಜಪೋಷಾಕಿನೊಂದಿಗೆ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿದರು.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.13): ಶಂಕರಾಚಾರ್ಯರಿಂದ ಸ್ಥಾಪನೆಗೊಂಡ ಚಿಕ್ಕಮಗಳೂರಿನ  ಶೃಂಗೇರಿಯ ಶ್ರೀ ಶಾರದಾಂಬೆಯ ಸನ್ನಿದಿಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವಿಜಯ ದಶಮಿಯ ಮರುದಿನವಾದ ನಿನ್ನೆ ಕ್ಷೇತ್ರದಲ್ಲಿ ರಥೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವಗಳು ನೆರವೇರಿತು. ಶ್ರೀಶಾರದಾ ಮಠದ ಕಿರಿಯ ಜಗದ್ಗುರುಗಳಾದ ವಿಧುಶೇಖರ ಭಾರತೀ ತೀರ್ಥ ಶ್ರೀಪಾದರಿಗೆ ರತ್ನ ಖಚಿತವಾದ ಕಿರೀಟವನ್ನು ತೊಡಿಸಿ, ರಾಜಪೋಷಾಕಿನೊಂದಿಗೆ. ರತ್ನ ಕಚಿತವಾದ ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯನ್ನು ಮಾಡಲಾಯಿತು.

ವಿಜಯದಶಮಿ ಮರುದಿನ ನಡೆಯುವ ರಥೋತ್ಸವ: ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದಲ್ಲಿ ನಡೆದುಕೊಂಡು ಬಂದಿರುವ ನವರಾತ್ರಿ ಉತ್ಸವ ಇಂದು ಜಗದ್ಗುರುಗಳಾದ ವಿಧುಶೇಖರ ಭಾರತೀ ತೀರ್ಥ  ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ, ಶಾರದಾಂಬಾ ರಥೋತ್ಸವದ ಮೂಲಕ ಸಂಪನ್ನವಾಯಿತು. ನವರಾತ್ರಿ ಉತ್ಸವದ ದಿನಗಳಲ್ಲಿ ತನ್ನದೇ ಆದ ವಿಶಿಷ್ಯ ತೆ ಹೊಂದಿರುವ ಶೃಂಗೇರಿ ಶಾರದಾ ಪೀಠದಲ್ಲಿ ಇಂದು ನಡೆದ ರಥೋತ್ಸವ ಹಾಗು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಭಾರೀ ಮಹತ್ವನ್ನು ಪಡೆದುಕೊಂಡಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 25ರ ಸಂಭ್ರಮ: ಹುಲಿ, ಆನೆಗಳ ಎಷ್ಟಿದೆ ಗೊತ್ತಾ?

ವಿಶೇಷ ಪೋಷಾಕು, ರತ್ನಖಚಿತ ಕಿರೀಟ ಧಾರಣೆ ಮಾಡಿದ ಶ್ರೀಗಳು ಸ್ವರ್ಣ ಪಲ್ಲಕ್ಕಿಯನ್ನು ಏರಿದ ಬಳಿಕ ಮಠದ ಸಂಪ್ರದಾಯ, ಬಿರುದು ಬಾವಲಿ, ಜಾನಪದ ನೃತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಬಿಂಬಿಸುವ ಸ್ಥಬ್ದ ಚಿತ್ರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಾಗಿತ್ತು.ವಿಜಯದಶಮಿ ಮರು ದಿನ ಶೃಂಗೇರಿಯಲ್ಲಿ ರಥೋತ್ಸವ, ಹಗಲು ದರ್ಬಾರ್ ನಡೆಯಿತು. 

ರಾಜಬೀದಿಗಳಲ್ಲಿ ಸಂಚರಿಸಿದ ಉತ್ಸವ : ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವ ಹಾಗು ಶ್ರೀಗಳ ಪಲ್ಲಕ್ಕಿ ಉತ್ಸವ ಒಂದೇ ಸಂದರ್ಭದಲ್ಲಿ ನಡೆಯುವುದು ಇನ್ನೊಂದು ವಿಶೇಷವಾಗಿದೆ. ಹೀಗಾಗಿ ಈ ಸಂಭ್ರಮದ ಕ್ಷಣಗಳನ್ನು ಸಾಕ್ಷೀಕರಿಸಲು ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸೇರಿದ್ರು.ಪಲ್ಲಕ್ಕಿ ಉತ್ಸವಶೃಂಗೇರಿಯ ರಾಜಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಗಜ, ಅಶ್ವ ,ಭಜನಾ ಕಾರ್ಯಕ್ರಮ, ಹೋಳಿ ನೃತ್ಯ, ಹುಲಿ ಕುಣಿತ , ಶಾರದೆ, ಮೊಸರುಕುಡಿಕೆ ಹೊಡೆಯುವ , ಮಹಿಷಸಮರದ ಟ್ಯಾಬ್ಲೋ ,ಅಡಿಕೆ ಬಂದಿರುವ ಕೊಳೆರೋಗ, ಚುಕ್ಕೆರೋಗ ಟ್ಯಾಬ್ಲೋಗಳು ಎಲ್ಲರ ಗಮನ ಸೇಳೆಯಿತು.

ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಪುಟಾಣಿಗಳಿಗೆ ಗೊಂಬೆ ನೋಡೋದೇ ಸಂತಸ!

ಪಲ್ಲಕ್ಕಿ ಉತ್ಸವದ ಬಳಿಕ ಶ್ರೀಗಳು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಹಗಲು ದಬಾರ್ ನಡೆಸಿದ್ರು.ಒಟ್ಟಾರೆ  ಶ್ರೀ ಶಾರದಾ ಪೀಠದಲ್ಲಿ ನಡೆದ ರಥೋತ್ಸವ ಮತ್ತು ಕಿರಿಯ ಜಗದ್ಗುರುಗಳಾದ ವಿಧುಶೇಖರ ಭಾರತೀ ತೀರ್ಥ ಶ್ರೀಗಳ ಅಡ್ಡ  ಪಲ್ಲಕ್ಕಿ  ಉತ್ಸವದೊಂದಿಗೆ ಶೃಂಗೇರಿ ಕಳೆದ ಹತ್ತು ದಿನ ಕಾಲ ನಡೆದ ಈ ಭಾರೀಯ  ನವರಾತ್ರಿ ಉತ್ಸವ ಸಂಪನ್ನಗೊಂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!