ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ವೇಳೆ ಸೀಟಿಗಾಗಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡ ಹಾಗೂ ಮಾರಾಮಾರಿ ನಡೆದಿ ಘಟನೆ ನಡೆದಿದೆ.
ಮೈಸೂರು (ಜೂ.20): ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಪ್ರಸಿದ್ಧವಾದ ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ವೇಳೆ ಸೀಟಿಗಾಗಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡ ಹಾಗೂ ಮಾರಾಮಾರಿ ನಡೆದಿ ಘಟನೆ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಮಾರಮಾರಿ ನಡೆಸಿದ್ದಾರೆ. ಮೈಸೂರು ಸಿಟಿ ಬಸ್ ನಲ್ಲಿ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಮಹಿಳೆಯರ ಬಡಿದಾಟದ ವಿಡಿಯೋ ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗುತ್ತಿದೆ. ಮೈಸೂರು ಸಿಟಿ ಬಸ್ ಸ್ಟ್ಯಾಂಡ್ ನಿಂದ ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದ ಬಸ್ ನಲ್ಲಿ ಘಟನೆ ನಡೆದಿದೆ. ಮಹೊಳೆಯೊಬ್ಬಳು ಬಸ್ ಹೊರಗಿನಿಂದ ತನ್ನ ದುಪ್ಪಟ ಹಾಕಿ ಸೀಟ್ ರಿಸರ್ವ್ ಮಾಡಿದ್ದಳು. ಆದರೆ, ಮಹಿಳೆ ಪ್ರಯಾಸಪಟ್ಟು ಬಸ್ ಹತ್ತಿ ಬಂದಾಗ ಸೀಟಿನಲ್ಲಿ ಬೇರೆ ಮಹಿಳೆ ಕುಳಿತಿದ್ದಳು. ಈ ವಿಚಾರವಾಗಿ ಶುರುವಾದ ಮಾತಿನ ಚಟಾಪಟಿ, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ, ಇವರೊಂದಿಗೆ ಬಂದಿದ್ದ ಮಹಿಳೆಯರು ಕೂಡ ತಮ್ಮ ಸಹಚರರಿಗೆ ಬೆಂಬಲ ನೀಡಲು ಕೈ-ಕೈ ಮಿಲಾಯಿಸಿದ್ದಾರೆ.
ಮಹಿಳೆಯರ 'ಶಕ್ತಿ'ಗೆ ಮುರಿದುಬಿದ್ದ ಬಸ್ ಡೋರ್: ಕಂಡಕ್ಟರ್ ಪರದಾಟ
ಜಗಳ ತಡೆಯಲು ಬಂದ ಯುವಕನ ಮೇಲೂ ಹಲ್ಲೆ: ಇನ್ನು ಗಲಾಟೆಯ ವೇಳೆ ಜಗಳವನ್ನು ತಡೆಯಲು ಮುಂದಾದ ಯುವಕ ಮೇಲೂ ಮಹಿಳೆಯರು ಮುಗಿಬಿದ್ದು ಹಲ್ಲೆ ಮಾಡಿದ್ದಾರೆ, ಮಹಿಳೆಯರ ಜಗಳದ ನಡುವೆ ಮೂಗು ತೂರಿಸಿಕೊಂಡು ಮಧ್ಯದಲ್ಲಿ ಬಂದು ಜಗಳ ನಿಲ್ಲಿಸಲು ಮಹಿಳೆಯರ ಕೈ ಹಿಡಿದುಕೊಂಡು ಜಗಳ ನಿಲ್ಲಿಸಲು ಮುಂದಾಗಿದ್ದಾನೆ. ಆಗ, ನಮ್ಮ ಕೈಯನ್ನೇ ಮುಟ್ಟುತ್ತೀಯ, ನಮ್ಮ ಮೇಲೆ ಹಲ್ಲೆ ಮಾಡ್ತೀಯಾ ಎಂದು ಯುವಕನ ಕೆನ್ನೆ, ತಲೆ ಸೇರಿ ವಿವಿಧೆಡೆ ಮೂರ್ನಾಲ್ಕು ಮಹಿಳೆಯರು ಸೇರಿ ಯುವಕನ ಮೇಲೂ ಹಲ್ಲೆ ಮಾಡಿದ್ದಾರೆ. ಇದಾದ ನಂತರ ಮಹಿಳೆಯರ ಜಗಳದಿಂದ ಯುವಕ ಹಿಂದಕ್ಕೆ ಸರಿದಿದ್ದಾನೆ.
ಮೂಕ ಪ್ರೇಕ್ಷಕನಾಗಿದ್ದ ಕಂಡಕ್ಟರ್: ಇನ್ನು ಮಹಿಳೆಯರು ಬಸ್ ಸೀಟಿಗಾಗಿ ಮಾರಾಮಾರಿ ನಡೆಸಿ ಹೊಡೆದಾಡುತ್ತಿದ್ದರೂ ಪಕ್ಕದಲ್ಲಿಯೇ ಟಿಕೆಟ್ ಕೊಡಲು ಬಂದಿದ್ದ ಬಸ್ ಕಂಡಕ್ಟರ್ ಕೂಡ ಜಗಳ ತಡೆಯಲು ಮುಂದಾಗದೇ ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಇಬ್ಬರೂ ಜಗಳ ಮಾಡಿಕೊಂಡು ಕಂಡಕ್ಟರ್ ಮೇಲೆಯೇ ಬಿದ್ದಿದ್ದಾರೆ. ನಂತರ, ಯುವಕರು ಹಾಗೂ ಬಸ್‌ನಲ್ಲಿದ್ದ ಇತರೆ ಮಹಿಳೆಯರು ಜಗಳವನ್ನು ನಿಲ್ಲಿಸುವಂತೆ ಕಂಡಕ್ಟರ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ನಂತರ, ನಿರ್ವಾಹಕ ಜಗಳ ಮಾಡಿದಲ್ಲಿ ಇಬ್ಬರನ್ನೂ ಕೆಳಗೆ ಇಳಿಸುವುದಾಗಿ ಹೇಳಿದ ನಂತರ ಜಗಳ ನಿಲ್ಲಿಸಿದ ಮಹಿಳೆಯರು ಬೇರೆ ಬೇರೆ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡಿದರು.
ಬಸ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಮಳವಳ್ಳಿಯಲ್ಲಿ ಬಾಗಿಲು ಮುರಿತ, ಮಂಡ್ಯದಲ್ಲಿ ವ್ಯಕ್ತಿ ಬಿದ್ದು ಸಾವು
ಕಿಟಕಿಯಿಂದ ಬಸ್ ಹತ್ತಿದ್ದ ಅಜ್ಜಿಯ ವೀಡಿಯೋ ವೈರಲ್: ಕಳೆದ ಮೂರು ದಿನಗಳ ಹಿಂದೆ ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ನಲ್ಲಿ ಮಹಿಳೆಯೊಬ್ಬರು ಬಸ್‌ನ್ನು ಕಿಟಕಿಯಿಂದಲೇ ಹತ್ತಿದ್ದರ. ಇದನ್ನು ನೋಡಿದ್ದ ಅಜ್ಜಿಯೂ ಕೂಡ ಮತ್ತೊಬ್ಬ ಮಹಿಳಯ ಸಹಾಯದಿಂದ ಕಿಟಕಿಯಿಂದಲೇ ಬಸ್ ಹತ್ತಿ ಸೀಟು ಹಿಡಿದು ಕುಳಿತಿದ್ದರು. ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯ ಬಸ್ ಪ್ರಯಾಣ ಹೆಚ್ಚಾಗಿದೆ. ಅದರಲ್ಲಿಯೂ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯ ಪ್ರಯಾಣ ಹೆಚ್ಚಾಗಿದೆ.
ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ.. pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555)