19 ತಿಂಗಳ ಬಳಿಕ 1-5ನೇ ತರಗತಿಗೆ ಶಾಲೆ ಆರಂಭದ ಸುಳಿವು: ಯಾವಾಗ? ಇಲ್ಲಿದೆ ಮಾಹಿತಿ

By Suvarna News  |  First Published Sep 28, 2021, 1:15 PM IST

* ಶಾಲಾ ಕಲಿಕೆಯಿಂದ ವಂಚಿತ ರಾಗಿರುವ 1ರಿಂದ 5ನೇ ತರಗತಿ ವಿದ್ಯಾರ್ಥಿಗಳು

* ಅಕ್ಟೋಬರ್ 21ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ

* ಮೂರನೇ ಅಲೆ ಆರಂಭದ ಯಾವುದೇ ಲಕ್ಷಣಗಳು ಕಂಡುಬರದಿದ್ದರೆ ಶಾಲೆ ಆರಂಭ


ಬೆಂಗಳೂರು(ಸೆ.28): ರಾಜ್ಯದಲ್ಲಿ ಕಳೆದ 19 ತಿಂಗಳಿಂದ ಶಾಲಾ ಕಲಿಕೆಯಿಂದ ವಂಚಿತ ರಾಗಿರುವ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 21ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ(Karnataka Govt) ಚಿಂತನೆ ನಡೆಸಿದೆ.

ಹೇಗಿದ್ದರೂ ಸೆಪ್ಟಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ. ಅಕ್ಟೋಬರ್ 10 ರಿಂದ ಮಧ್ಯಂತರ ಅಥವಾ ದಸರಾ ರಜೆ ಆರಂಭವಾಗಲಿದ್ದು ಅಕ್ಟೋಬರ್ 20ಕ್ಕೆ ಮುಗಿಯಲಿದೆ.

ಆನಂತರ ಕೂಡ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ(Covid 19 Third Wave) ಆರಂಭದ ಯಾವುದೇ ಲಕ್ಷಣಗಳು ಕಂಡುಬರದಿದ್ದರೆ ರಜೆ ಮುಗಿದ ಕೂಡಲೇ 1ರಿಂದ 5ನೇ ತರಗತಿ ಆರಂಭಿ ಸುವುದು ಸರ್ಕಾರದ ಆಲೋಚನೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Tap to resize

Latest Videos

ಈ ಮೂಲಗಳ ಪ್ರಕಾರ ಶಾಲೆ ಆರಂಭಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಗಳು ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸಂಘಟನೆಗಳು, ಶಿಕ್ಷಕರು, ಪೋಷಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆಯಲಿದ್ದಾರೆ. ಈಗಾಗಲೇ ಆ ಕಾರ್ಯವನ್ನು ಶಿಕ್ಷಣ ಇಲಾಖೆ ನೂತನ ಆಯುಕ್ತ ವಿಶಾಲ್ ಆರಂಭಿಸಿದ್ದಾರೆ.

ರುಪ್ಸಾ ಜತೆ ಆಯುಕ್ತರ ಸಭೆ:

ಈ ಮಧ್ಯೆ, 1ರಿಂದ 5ನೇ ತರಗತಿಗಳನ್ನು ಆರಂಭಿಸುವ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನೂತನ ಆಯುಕ್ತ ವಿಶಾಲ್ ಖಾಸಗಿ ಶಾಲಾ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಪೋಷಕ ಸಂಘಟನೆಗಳ ಅಭಿಪ್ರಾಯ, ಸಲಹೆ ಪಡೆಯು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸೋಮವಾರ ಸೋಮವಾರ ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ರುಪ್ಸಾ) ಪದಾಧಿಕಾರಿಗಳ ಸಭೆ ನಡೆಸಿದರು.

ಕೋವಿಡ್ ತಹಬದಿಯಲ್ಲಿರುವುದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಆರಂಭಿಸಿರುವಂತೆ ನಮ್ಮ ರಾಜ್ಯದಲ್ಲೂ ಆದಷ್ಟು ಬೇಗ 1ರಿಂದ 5ನೇ ತರಗತಿಗಳನ್ನು ಆರಂಭಿಸಬೇಕೆಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮತ್ತಿತರ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯುಕ್ತರು, ಅ.20ಕ್ಕೆ ಮಧ್ಯಂತರ ರಜೆ ಮುಗಿಯ ಲಿದ್ದು ಆ ಬಳಿಕ 1ರಿಂದ 5ನೇ ತರಗತಿ ಆರಂಭಿಸಲು ಕ್ರಮ ವಹಿಸಲಾಗುತ್ತದೆ. ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು ಎಂದು ಸಭೆ ಬಳಿಕ ಸುದ್ದಿಗಾರರಿಗೆ ತಾಳಿಕಟ್ಟೆ ತಿಳಿಸಿದರು

click me!