Karnataka Sahitya Academy Awards: ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Kannadaprabha News   | Kannada Prabha
Published : Oct 10, 2025, 12:23 PM IST
Shudra Srinivas literary award

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದೆ. ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್‌ ಸೇರಿ ಐವರು ಗೌರವ ಪ್ರಶಸ್ತಿಗೆ ಹಾಗೂ ಡಾ.ಸಬಿತಾ ಬನ್ನಾಡಿ, ಡಾ.ಕೆ.ವೈ.ನಾರಾಯಣಸ್ವಾಮಿ ಸೇರಿ ಹತ್ತು ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ.

ಬೆಂಗಳೂರು (ಅ.10) : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ ಮತ್ತು ವರ್ಷದ ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್‌ ಸೇರಿ ಐವರು ವರ್ಷದ ಗೌರವ ಪ್ರಶಸ್ತಿಗೆ ಮತ್ತು ಡಾ.ಸಬಿತಾ ಬನ್ನಾಡಿ, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಮಮತಾ ಸಾಗರ ಸೇರಿ 10 ಮಂದಿ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಅವರು, ಡಾ.ಎಂ.ಬಸವಣ್ಣ (ಚಾಮರಾಜನಗರ), ಶೂದ್ರ ಶ್ರೀನಿವಾಸ್‌ (ಬೆಂಗಳೂರು), ಪ್ರತಿಭಾ ನಂದಕುಮಾರ್‌ (ಬೆಂಗಳೂರು), ಡಾ.ಡಿ.ಬಿ.ನಾಯಕ್‌ (ಕಲಬುರಗಿ) ಮತ್ತು ಡಾ.ವಿಶ್ವನಾಥ್‌ ಕಾರ್ನಾಡ್‌ (ಮುಂಬಯಿ) ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 50 ಸಾವಿರ ರು.ನಗದು, ಪ್ರಶಸ್ತಿ ಫಲಕ, ಫಲತಾಂಬೂಲ ಒಳಗೊಂಡಿದೆ ಎಂದು ತಿಳಿಸಿದರು.

ಸಾಹಿತ್ಯಶ್ರೀ ಪ್ರಶಸ್ತಿ:

2024ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಡಾ.ಬಿ.ಎಂ.ಪುಟ್ಟಯ್ಯ- ಚಿಕ್ಕಮಗಳೂರು, ಡಾ.ಕೆ.ವೈ.ನಾರಾಯಣಸ್ವಾಮಿ- ಬೆಂಗಳೂರು, ಪದ್ಮಾಲಯ ನಾಗರಾಜ್‌- ಕೋಲಾರ, ಡಾ.ಬಿ.ಯು.ಸುಮಾ- ತುಮಕೂರು, ಡಾ.ಮಮತಾ ಸಾಗರ- ಶಿವಮೊಗ್ಗ, ಡಾ.ಸಬಿತಾ ಬನ್ನಾಡಿ-ಉಡುಪಿ, ಅಬ್ದುಲ್‌ ಹೈ ತೋರಣಗಲ್‌- ಬಳ್ಳಾರಿ, ಡಾ.ಗುರುಲಿಂಗಪ್ಪ ದಬಾಲೆ- ಅಕ್ಕಲಕೋಟೆ, ಡಾ.ಎಚ್‌.ಎಸ್‌.ಅನುಪಮಾ- ಉತ್ತರ ಕನ್ನಡ ಮತ್ತು ಡಾ.ಅರಮೇಶ್‌ ಯತಗಲ್‌- ರಾಯಚೂರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರು. ನಗದು, ಪ್ರಶಸ್ತಿ ಫಲಕ, ಫಲತಾಂಬೂಲವನ್ನು ಒಳಗೊಂಡಿದೆ.

2023ನೇ ಸಾಲಿನ ವರ್ಷದ ಅತ್ಯುತ್ತಮ ಕೃತಿ ಪ್ರಶಸ್ತಿ:

ಡಾ.ವಿ.ಎ.ಲಕ್ಷ್ಮಣ- ಕಾಯಿನ್‌ ಬೂತ್‌ (ಕಾವ್ಯ), ಡಾ.ಬಿ.ಎಂ.ಗುರುನಾಥ್‌- ನಕ್ಷತ್ರ ತಬ್ಬಿ ಮಲಗಿದ ಹೊತ್ತು (ನವ ಕವಿಗಳ ಪ್ರಥಮ ಸಂಕಲನ), ಗಂಗಪ್ಪ ತಳವಾರ್‌-ಧಾವತಿ (ಕಾದಂಬರಿ), ಮಾಧವಿ ಭಂಡಾರಿ ಕೆರೆಕೋಣ- ಗುಲಾಬಿ ಕಂಪಿನ ರಸ್ತೆ (ಸಣ್ಣಕತೆ), ಡಾ.ಸಾಸ್ವೇಹಳ್ಳಿ ಸತೀಶ್‌- ಏಸೂರು ಕೊಟ್ಟರೂ ಈಸೂರು ಕೊಡೆವು (ನಾಟಕ), ಸರಸ್ವತಿ ಭೋಸಲೆ- ಕಾಡತಾವ ನೆನಪ (ಲಲಿತ ಪ್ರಬಂಧ), ಡಾ.ಡಿ.ವಿ.ಗುರುಪ್ರಸಾದ್‌- ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು (ಪ್ರವಾಸ ಸಾಹಿತ್ಯ), ಡಾ.ಸಿ.ಚಂದ್ರಪ್ಪ- ಅಶೋಕ ಸತ್ಯ- ಅಹಿಂಸೆಯ ಮಹಾಶಯ (ಜೀವನ ಚರಿತ್ರೆ/ ಆತ್ಮಕಥೆ), ರಂಗನಾಥ ಕಂಟನಕುಂಟೆ- ಓದಿನ ಒಕ್ಕಲು (ಸಾಹಿತ್ಯ ವಿಮರ್ಶೆ), ಮತ್ತೂರು ಸುಬ್ಬಣ್ಣ- ಮುತ್ತಳ್ಳಿಯ ಅಜ್ಜಿ ಕಥೆಗಳು (ಮಕ್ಕಳ ಸಾಹಿತ್ಯ), ಡಾ.ಎಚ್‌.ಎಸ್‌.ಮೋಹನ್‌- ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ ಮತ್ತು ಇತರ ವೈದ್ಯಕೀಯ ಲೇಖನಗಳು (ವಿಜ್ಞಾನ ಸಾಹಿತ್ಯ ), ಡಾ.ಪ್ರಕಾಶ ಭಟ್‌- ಹಳ್ಳಿಗಳನ್ನು ಕಟ್ಟುವ ಕಷ್ಟಸುಖ (ಮಾನವಿಕ), ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ- ಕಾಡುಗೊಲ್ಲ ಬುಡಕಟ್ಟು (ಸಂಶೋಧನೆ), ಡಾ.ಜೆ.ಪಿ.ದೊಡ್ಡಮನಿ- ಡಾ.ಬಾಬಾ ಸಾಹೇಬ ಅಂಬೇಡ್ಕರ (ಅನುವಾದ 1), ದೇವು ಪತ್ತಾರ- ಈಶಾನ್ಯೆ ಒಡಲು (ಅಂಕಣ ಬರಹ/ವೈಚಾರಿಕ ಬರಹ), ಸತೀಶ್‌ ತಿಪಟೂರು- ಮಣ್ಣಿನ ಬಂಡಿಯಲ್ಲಿ ಫುಕುವೋಕಾ (ಸಂಕೀರ್ಣ), ಗೋವಿಂದರಾಜು ಎಂ.ಕಲ್ಲೂರು- ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು (ಲೇಖಕರ ಮೊದಲ ಸ್ವತಂತ್ರ ಕೃತಿ) ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಪ್ರಶಸ್ತಿ ತಲಾ 25 ಸಾವಿರ ರು.ನಗದು, ಪ್ರಶಸ್ತಿ ಫಲಕ, ಫಲತಾಂಬೂಲ ಒಳಗೊಂಡಿದೆ.

2023ನೇ ಸಾಲಿನ ದತ್ತಿ ಸಾಹಿತ್ಯ ಬಹುಮಾನ:

ಡಾ.ಲತಾ ಗುತ್ತಿ- ಚದುರಂಗ (ಕಾದಂಬರಿ- ಚದುರಂಗ ದತ್ತಿ ಬಹುಮಾನ), ಸುಮಾ ರಮೇಶ್‌- ಹಚ್ಚೆ ದಿನ್‌-ಬೆಚ್ಚಿನ ನಗೆಯೊಂದಿಗೆ (ಲಲಿತ ಪ್ರಬಂಧ- ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ), ರೂಪ ಹಾಸನ- ಮಹಾಸಂಗ್ರಾಮಿ ಎಸ್‌.ಆರ್‌.ಹಿರೇಮಠ (ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿ), ಡಾ.ಕಾತ್ಯಾಯಿನಿ ಕುಂಜಿಬೆಟ್ಟು- ಇರವಿನ ಅರಿವು (ಸಾಹಿತ್ಯ ವಿಮರ್ಶೆ- ಪಿ.ಶ್ರೀನಿವಾಸರಾವ್‌ ದತ್ತಿ), ಟಿ.ಜಿ.ಪುಷ್ಪಲತಾ- ಕೇದಿಗೆ (ಕಾವ್ಯ ಹಸ್ತಪ್ರತಿ- ಚಿ.ಶ್ರೀನಿವಾಸರಾಜು ದತ್ತಿ), ಸುಗತ ಶ್ರೀನಿವಾಸರಾಜು- ಎಚ್‌.ಡಿ.ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು (ಅನುವಾದ 1- ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಅಬ್ಬೂರು ಪ್ರಕಾಶ್‌- ಕಣ್ಣ ಕನ್ನಡಿಯಲ್ಲಿ (ಲೇಖಕರ ಮೊದಲ ಸ್ವತಂತ್ರ ಕೃತಿ- ಮಧುರಚೆನ್ನ ದತ್ತಿ), ಸುದೇಶ ದೊಡ್ಡಪಾಳ್ಯ- ಈಶಾನ್ಯದ ದಿಕ್ಕಿನಿಂದ (ವೈಚಾರಿಕ/ ಅಂಕಣ ಬರಹ- ಬಿ.ವಿ.ವೀರಭದ್ರಪ್ಪ ದತ್ತಿ), ಸುಕನ್ಯಾ ಕನಾರಹಳ್ಳಿ- ಲವ್‌ ಆ್ಯಂಡ್‌ ವಾಟರ್‌ ಪ್ಲೋ ಟುಗೆದರ್‌ (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ- ಅಮೆರಿಕನ್ನಡ ದತ್ತಿನಿಧಿ) ಕೃತಿಗಳು ಆಯ್ಕೆಯಾಗಿವೆ ಎಂದು ಮುಕುಂದರಾಜ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರದಾ-ಬೇಡ್ತಿ ನದಿ ಜೋಡಣೆ: ಭುಗಿಲೆದ್ದ ಜಲ ಸಂಘರ್ಷ, ಪರವಾಗಿ ನಿಂತ ಬಸವರಾಜ್ ಬೊಮ್ಮಾಯಿ
Karnataka News Live: Ramanagara - ರಾಮನೂರಿನ ರಾಮೋತ್ಸವದಲ್ಲಿ 450ಕ್ಕೂ ಹೆಚ್ಚು ಗ್ರಾಮದೇವತೆಗಳ ಅಪೂರ್ವ ಸಂಗಮ