Asianet Suvarna News Asianet Suvarna News

Father of the Year 2023 ಆಯ್ಕೆ ಮಾಡಿದ ನೆಟ್ಟಿಗರು: ನಿಮ್ಮ ಆಯ್ಕೆಯೂ ಇವರೇನಾ ನೋಡಿ...!

ಮನೆಯಲ್ಲಿ ಹಠಮಾರಿ ಪುಟ್ಟ ಮಗಳಿಗೆ ಜುಟ್ಟು ಹಾಕಲು ಅಪ್ಪ ಮಾಡಿದ ಐಡಿಯಾವನ್ನು ನೋಡಿದ ನೆಟ್ಟಿಗರು ಇವರನ್ನು ಫಾದರ್ ಆಫ್‌ ದಿ ಇಯರ್‌ ಎಂದು ಆಯ್ಕೆ ಮಾಡಿದ್ದಾರೆ.

Vacuum Cleaner hair style viral video seen Netizens Chosen 2023 Father of the Year sat
Author
First Published Oct 7, 2023, 1:01 PM IST

Viral video: ಅಪ್ಪ ಹಾಗೂ ಮಕ್ಕಳ ಹಲವು ವೀಡಿಯೋಗಳನ್ನು ನೀವು ನೋಡಿರುತ್ತೀರಿ. ಇನ್ನು ಮಕ್ಕಳಿಗೆ ಅಪ್ಪನೇ ಸೂಪರ್‌ ಹೀರೋ, ಮೊದಲ ಹೀರೋ ಎಂದು ಹೇಳುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಯಾರೇ ತಲೆ ಬಾಚಿದರೂ ಕಿಟಾರನೇ ಕಿರುಚುತ್ತಾ ಅಳುವ ಮಗಳ ತಲೆಗೆ ಜುಟ್ಟು ಹಾಕಲು ಮಾಡಿ ಅಪ್ಪ ಮಾಡಿದ ಐಡಿಯಾವನ್ನು ನೋಡಿದ ನೆಟ್ಟಿಗರು ನಿವೇ 2023 ಡ್ಯಾಡಿ ಆಫ್‌ ದಿ ಇಯರ್‌ (Daddy of the year) ಎಂದು ಪ್ರಶಂಸೆ ಮಾಡಿದ್ದಾರೆ.

ಇಂದಿನ ಸಾಮಾಜಿಕ ಜಾಲತಾಣದಲ್ಲಿ ನಾವು ಅಪ್ಪ- ಮಕ್ಕಳ ಮುದ್ದಾದ ವಿಡಿಯೋಗಳನ್ನು ನೋಡಿರುತ್ತೇವೆ. ಇನ್ನು ತುಂಬಾ ಕ್ಯೂಟ್‌ ಆಗಿರುವ ಮಕ್ಕಳ ವಿಡಿಯೋ ಮನಸ್ಸು ಖುಷಿಯಾಗಿ ನಮಗೆ ಅರಿವಿಲ್ಲದೇ ಲೈಕ್‌ ಕೂಡ ಮಾಡಿರುತ್ತೇವೆ. ಇನ್ನು ಮಕ್ಕಳು ಮಾಡುವ ಕೀಟಲೆಗಳಂತೂ ನಾವು ನೋಡಿ ಬಿಕ್ಕಿ ಬಿಕ್ಕಿ ನಕ್ಕಿರುತ್ತೇವೆ. ಅದೇ ರೀತಿ ಮಕ್ಕಳು ಮನೆಯಲ್ಲಿ ಮಾಡುವ ಕೆಲವು ಆಟದಿಂದ ಮನೆಯ ವಸ್ತುಗಳು ಹಾಳಾಗಿ ಮನೆಯವರು ಪೇಚಿಗೆ ಸಿಲುಕಿದ ಘಟನೆಗಳೂ ಸಾಕಷ್ಟಿರುತ್ತವೆ. ಇದನ್ನು ದಿನನಿತ್ಯ ಜೀವನದಲ್ಲಿ ನಾವು ಕೂಡ ಅನುಭವಿಸಿರುತ್ತೇನೆ.

Seetha Raama: ಶಾಂತಮ್ಮನ ವಠಾರ ಯಾರಿಗೆ ಸಿಗುತ್ತೆ, ಲಾಯರ್ ರುದ್ರಪ್ರತಾಪ್‌ ಅಥವಾ ಭಾರ್ಗವಿ ದೇಸಾಯಿ?

ಇಲ್ಲೊಂದು ವೈರಲ್‌ ವಿಡಿಯೋದಲ್ಲಿ ಪುಟ್ಟ ಮಗು ಮನೆಯ ಯಾರೊಬ್ಬರಿಂದಲೂ ತಲೆ ಬಾಚಿಸಿಕೊಳ್ಳದೇ, ಜುಟ್ಟು ಹಾಕಿಸಿಕೊಳ್ಳದೇ ಹಠ ಮಾಡುತ್ತಿರುತ್ತಾಳೆ. ಇವಳಿಗೆ ಅಪ್ಪನೆಂದರೆ ತುಸು ಹೆಚ್ಚಾಗಿ ಪ್ರೀತಿಪಾತ್ರರಾಗಿರುತ್ತಾರೆ. ಆಗ, ಅಪ್ಪನೇ ಕರೆದು ತಾನೊಂದು ಮ್ಯಾಜಿಕ್‌ ಮಾಡುವುದಾಗಿ ತಿಳಿಸಿದ್ದಾರೆ. ಮಗಳು ಹೋಗಿ ಅಪ್ಪನ ಮುಂದೆ ನಿಂತಿದ್ದಾಳೆ. ಆಗ ಅಪ್ಪ ವ್ಯಾಕ್ಯೂಮ್‌ ಕ್ಲೀನರ್‌ (Vacuum Cleaner) ಪೈಪ್‌ನ ತುದಿಯಲ್ಲಿ ರಬ್ಬರ್‌ ಹಾಕಿ ನಂತರ ಮಗಳ ತಲೆಗೆ ಹಿಡಿಯುತ್ತಾನೆ. ಮಗಳ ತಲೆಯ ಎಲ್ಲ ಕೂದಲುಗಳನ್ನು ವ್ಯಾಕ್ಯೂಮ್‌ ಕ್ಲೀನರ್‌ ಒಳಗೆ ಎಳೆದುಕೊಳ್ಳುತ್ತದೆ. ಕೂಡಲೇ ವ್ಯಾಕ್ಯೂಮ್‌ ಕ್ಲೀನರ್‌ ನ ಪೈಪ್‌ಗೆ ಹಾಕಿದ್ದ ರಬ್ಬರ್‌ ಬ್ಯಾಂಡ್‌ ಅನ್ನು ಮಗಳ ಕೂದಲಿಗೆ ಹಾಕಿದ್ದಾರೆ. ನಂತರ, ವ್ಯಾಕ್ಯೂಮ್‌ ಕ್ಲೀನರ್‌ ತೆಗೆದರೆ ಗುಡ್‌ ನ್ಯೂಸ್. ಮಗಳ ತಲೆಗೆ ನಾವು ಬಾಚಿಣಿಕೆಯಿಂದ ಬಾಕಿ ಜುಟ್ಟು ಹಾಕಿದರೂ ಅಷ್ಟು ಚೆಂದವಾಗಿ ಬರುತ್ತದೆಯೋ ಇಲ್ಲವೋ, ಅಷ್ಟು ನೀಟಾಗಿ ಮಗಳ ತಲೆಗೆ ಜುಟ್ಟು ಹಾಕಲಾಗಿತ್ತು. 

17 ಸಾವಿರ ಜನರಿಂದ ಶೇರಿಂಗ್: ಅಪ್ಪ ವ್ಯಾಕ್ಯೂಮ್‌ ಕ್ಲೀನರ್‌ ಬಳಸಿ ಸುಲಭವಾಗಿ, ಯಾವುದೇ ನೋವುಂಟು ಮಾಡದೇ ತನ್ನ ತಲೆಯ ಮೇಲೆ ಜುಟ್ಟು ಹಾಕಿರುವುದನ್ನು ಕನ್ನಡಿಯನ್ನು ನೋಡಿದ ಮಗಳು ಅಚ್ಚರಿಯಿಂದ ಖುಷಿಪಟ್ಟಿದ್ದಾಳೆ. ಇನ್ನು ಪಕ್ಕದಲ್ಲಿ ಕುಳಿತ ಅಮ್ಮ ನಂತರ ಜುಟ್ಟು ಸರಿಪಡಿಸಿ ಅವರೂ ಕೂಡ ಮಗಳ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಈ ವೈರಲ್‌ ವೀಡಿಯೋವನ್ನು ಟರ್ಕಿಯ ಮ್ಯೂಸಿಕ್‌ ಟೀಚರ್‌ ಫಿಜೆನ್‌ (@TheFigen_)ಎನ್ನುವವರು ಕಳೆದ 15 ಗಂಟೆಗಳ ಹಿಂದೆ ಸಾಮಾಜಿಕ ಜಾಲತಾಣದ ಎಕ್ಸ್‌ ನಲ್ಲಿ (ಹಳೆಯ ಟ್ವಿಟರ್) ಪೋಸ್ಟ್‌ ಮಾಡಿಕೊಂಡಿದ್ದಾರೆ. ಇದನ್ನು ಒಂದೂವರೆ ಲಕ್ಷಕ್ಕೂ ಅಧಿಕ ಜನರು ಲೈಕ್‌ ಮಾಡಿದ್ದು, 17 ಸಾವಿರ ಜನರು ಶೇರ್‌ ಮಾಡಿಕೊಂಡಿದ್ದಾರೆ. ಈಗ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಭರ್ಜರಿ ಬ್ಯಾಚುಲರ್ಸ್ ಆಸಿಯಾ ಬೇಗಂ ಲಂಬಾಣಿ ಡ್ರೆಸ್‌ನಲ್ಲಿ ಮಿಂಚಿಂಗ್! ಗೋರ್‌ಮಾಟಿ, ವೈನಿ ಎಂದ ಫ್ಯಾನ್ಸ್

ಇನ್ನು ಈ ವಿಡಿಯೋ ನೋಡಿದ ಜನರು ಸ್ಮಾರ್ಟ್‌ ಡ್ಯಾಡ್‌, 2023 ಡ್ಯಾಡಿ ಆಫ್‌ ದಿ ಇಯರ್‌, ವೆರಿ ಗುಡ್ ಥಿಂಕಿಂಗ್, ಗುಡ್‌ ಐಡಿಯಾ, ನ್ಯೂ ಇನ್ನೋವೇಷನ್, ಸ್ಮಾರ್ಟ್‌ ಐಡಿಯಾ, ಬ್ಯೂಟಿಫುಲ್‌, ಗುಡ್‌ ವರ್ಕ್‌ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಈ ಹೇರ್‌ಸ್ಟೈಲ್‌ಗೆ ಏನೆಂದು ಕರೆಯುತ್ತಾರೆ? ನೀವೇ ಒಂದು ಹೆಸರು ಕೊಡಿ ಎಂದು ಕೇಳಿದ್ದಾರೆ.  ಫಾದರ್ ಆಫ್‌ ದಿ ಇಯರ್‌, ಹ್ಯಾಪಿ ಡಾಟರ್ ಮತ್ತು ಹ್ಯಾಡಿ ಫಾದರ್ (Father of the year, Happy daughter and Happy father) ಎಂದು ನೆಟ್ಟಿಗರು ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ತಾವೂ ಟ್ರೈ ಮಾಡುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios