
ಬೆಂಗಳೂರು (ಅ.21): ರಾಜ್ಯದ ಪ್ರಮುಖ ನದಿಗಳ ನೀರನ್ನು ನೇರವಾಗಿ ಬಳಕೆ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರವಹಿಸಿ. ಯಾಕೆಂದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ನೀರಿನ ಪರೀಕ್ಷೆಯಲ್ಲಿ ರಾಜ್ಯದ 12 ಪ್ರಮುಖ ನದಿಗಳ ಪೈಕಿ ಯಾವ ನದಿಗಳ ನೀರೂ ‘ಎ’ ದರ್ಜೆಗೆ ಸೇರಿಲ್ಲ. ಅಂದರೆ 12 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ!
ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ನದಿಗಳ ನೀರನ್ನು 32 ಕಡೆ ಪರೀಕ್ಷೆಗೊಳಪಡಿಸುತ್ತದೆ. ಪ್ರತಿ ತಿಂಗಳು ನದಿಗಳ ನೀರನ್ನು ಪರೀಕ್ಷೆ ನಡೆಸಿ ಅವುಗಳ ವರದಿ ಸಿದ್ಧಪಡಿಸಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ನಡೆಸಲಾದ ಪರೀಕ್ಷಾ ವರದಿಯಂತೆ 12 ನದಿಗಳ ಪೈಕಿ ಯಾವುದೇ ನದಿ ನೀರೂ ನೇರವಾಗಿ ಕುಡಿಯಲು ಬಳಕೆ ಮಾಡದ ಸ್ಥಿತಿ ಇದೆ. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಹೆಚ್ಚಿವೆ. ಹೀಗಾಗಿ 12 ನದಿಗಳ ನೀರಿನಲ್ಲಿ ಯಾವುದೇ ನದಿ ನೀರು ‘ಎ’ ದರ್ಜೆಗೆ ಸೇರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
12 ನದಿಗಳ ಪೈಕಿ ನೇತ್ರಾವತಿ ನದಿ ನೀರು ಮಾತ್ರ ‘ಬಿ’ ದರ್ಜೆಯ ಗುಣಮಟ್ಟ ಹೊಂದಿದೆ ಎಂದು ಹೇಳಲಾಗಿದೆ. ಈ ನೀರನ್ನು ಸ್ನಾನ ಅಥವಾ ಗೃಹ ಬಳಕೆಗೆ ಉಪಯೋಗಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದನ್ನು ಹೊರತುಪಡಿಸಿ ನೇರವಾಗಿ ಕುಡಿಯಲು ಯೋಗ್ಯವಲ್ಲ. ಉಳಿದಂತೆ 8 ನದಿಗಳ ನೀರು ‘ಸಿ’ ಮತ್ತು ಮೂರು ನದಿಗಳ ನೀರು ‘ಡಿ’ ದರ್ಜೆಯ ಗುಣಮಟ್ಟ ಹೊಂದಿವೆ. ಅದರಲ್ಲಿ ‘ಸಿ’ ದರ್ಜೆ ಹೊಂದಿರುವ ನದಿ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದ್ದು, ‘ಡಿ’ ದರ್ಜೆಯ ನೀರನ್ನು ಮೀನುಗಾರಿಕೆ ಸೇರಿ ಇನ್ನಿತರ ಚಟುವಟಿಕೆಗೆ ಬಳಸಬಹುದಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಈ ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಹೆಚ್ಚಿವೆ. ಹೀಗಾಗಿ 12 ನದಿಗಳ ನೀರಿನಲ್ಲಿ ಯಾವುದೇ ನದಿ ನೀರು ‘ಎ’ ದರ್ಜೆಗೆ ಸೇರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವೆಲ್ಲ ನದಿಗಳ ಪರೀಕ್ಷೆ?ಬಿ ದರ್ಜೆ: ನೇತ್ರಾವತಿಸಿ ದರ್ಜೆ: ಲಕ್ಷ್ಮಣ ತೀರ್ಥ, ತುಂಗ ಭದ್ರಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಕೃಷ್ಣಾ, ಶಿಂಷಾಡಿ ದರ್ಜೆ: ಭೀಮಾ, ಕಾಗಿಣಾ, ಅರ್ಕಾವತಿ
12 ನದಿಗಳ ಪೈಕಿ ನೇತ್ರಾವತಿ ನದಿ ನೀರು ಮಾತ್ರ ‘ಬಿ’ ದರ್ಜೆಯ ಗುಣಮಟ್ಟ ಹೊಂದಿದೆ. ಈ ನೀರನ್ನು ಸ್ನಾನ ಅಥವಾ ಗೃಹ ಬಳಕೆಗೆ ಉಪಯೋಗಿಸಬಹುದು. ಅದನ್ನು ಹೊರತುಪಡಿಸಿ ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ