ರಾಜ್ಯದಲ್ಲಿ 400ರ ಗಡಿ ದಾಟಿದ ಕೊರೋನಾ ಕೇಸ್| ನಿನ್ನೆ ವಿಜಯಪುರದಲ್ಲಿ 11 ಸೇರಿ ಒಟ್ಟು 18 ಪ್ರಕರಣ| ಕೇವಲ ನಾಲ್ಕು ದಿನದಲ್ಲಿ 300ರಿಂದ 400ಕ್ಕೆ ಹೆಚ್ಚಳ
ಬೆಂಗಳೂರು(ಏ.21): ರಾಜ್ಯದಲ್ಲಿ ಕೊರೋನಾ ಹಾವಳಿ ಮುಂದುವರೆದಿದ್ದು, ಸೋಮವಾರ ಮತ್ತೆ 18 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 400ರ ಗಡಿ ದಾಟಿದ ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ.
ಕೇವಲ ನಾಲ್ಕೇ ದಿನಗಳಲ್ಲಿ 300ರಿಂದ 400ರ ಗಡಿ ದಾಟಿದ್ದು ಸೋಂಕು ಹರಡುತ್ತಿರುವ ವೇಗ ಆತಂಕ ಹುಟ್ಟಿಸಿದೆ.
ಸೋಮವಾರ ದೃಢಪಟ್ಟಎಲ್ಲಾ ಪ್ರಕರಣಗಳು ಉತ್ತರ ಕರ್ನಾಟಕ ಭಾಗದಿಂದಲೇ ವರದಿಯಾಗಿದ್ದು, ವಿಜಯಪುರ ಹಾಗೂ ಕಲಬುರಗಿಯಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ. ಸೋಮವಾರ ವಿಜಯಪುರದ 11 ಮಂದಿಗೆ, ಕಲಬುರಗಿಯ 5, ಗದಗ ಹಾಗೂ ಬೀದರ್‌ನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಬಹುತೇಕರು ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿರುವ ಸೋಂಕಿತರ ಸಂಪರ್ಕದಿಂದಲೇ ಸೋಂಕು ಹರಡಿಸಿಕೊಂಡಿದ್ದಾರೆ.
ಕೊರೋನಾ ಬಿಸಿ: ರಾಷ್ಟಟ್ರಪತಿ ಭವನದ 500 ಮಂದಿಗೆ ಕ್ವಾರಂಟೈನ್!
ವಿಜಯಪುರದ ಮೊದಲ ಸೋಂಕಿತೆಯಿಂದ 7 ಮಂದಿಗೆ ಸೋಂಕು:
ವಿಜಯಪುರದಲ್ಲಿ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಆ ಪೈಕಿ ಇಬ್ಬರು ಮಕ್ಕಳನ್ನು ಸೇರಿ ಏಳು ಮಂದಿ ಜಿಲ್ಲೆಯ ಮೊದಲ ಸೋಂಕಿತ ವೃದ್ಧೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದವರು. ಇನ್ನು ಮೂರು ಮಂದಿ ಇದೇ ವೃದ್ಧೆಯಿಂದ ಸೋಂಕು ತಗಲಿಸಿಕೊಂಡಿದ್ದ 16 ವರ್ಷದ ಬಾಲಕನ ಪ್ರಾಥಮಿಕ ಸಂಪರ್ಕಿತರು.
ಸೋಂಕಿತರಲ್ಲಿ 7 ವರ್ಷದ ಹೆಣ್ಣು ಮಗು ಹಾಗೂ 10, 14 ವರ್ಷದ ಇಬ್ಬರು ಗಂಡುಮಕ್ಕಳು ಇದ್ದಾರೆ. ಇವರೆಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಿದ್ದು, ಇವರ ಪ್ರಾಥಮಿಕ ಸಂಪರ್ಕಗಳ ತನಿಖೆ ನಡೆಯುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.
ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?: ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ!
ಮೃತ ಮಹಿಳೆಯಿಂದ ಮೂವರಿಗೆ ಸೋಂಕು:
ಕಲಬುರಗಿಯಲ್ಲಿ ದೆಹಲಿ ಪ್ರಯಾಣದ ಹಿನ್ನೆಲೆಯಲ್ಲಿ ಸೋಂಕು ದೃಢಪಟ್ಟು ಇತ್ತೀಚೆಗೆ ಸಾವಿಗೀಡಾಗಿದ್ದ 55 ವರ್ಷದ ಮಹಿಳೆಯ ಪ್ರಾಥಮಿಕ ಸಂಪರ್ಕದಿಂದ 13 ವರ್ಷದ ಬಾಲಕಿ, 19 ವರ್ಷದ ಯುವಕ, 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಮತ್ತೊಬ್ಬ ಸೋಂಕಿತ ಮೃತ ವೃದ್ಧನ ಸಂಪರ್ಕದಿಂದ 50 ವರ್ಷದ ವ್ಯಕ್ತಿಗೆ ಸೋಂಕು ತಗಲಿದೆ. ಈ ಮೂಲಕ ಕಲಬುರಗಿಯ ಒಟ್ಟು ಪ್ರಕರಣಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಉಳಿದಂತೆ ಬೆಂಗಳೂರಿನಲ್ಲಿ ಮತ್ತೊಬ್ಬ ಸೋಂಕಿತ ಸಂಪೂರ್ಣ ಗುಣಮುಖನಾಗಿ ಮನೆಗೆ ತೆರಳಿದ್ದಾನೆ. ಒಟ್ಟಾರೆ 408 ಸೋಂಕಿತರ ಪೈಕಿ 112 ಮಂದಿ ಗುಣಮುಖರಾಗಿದ್ದು, 280 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 16 ಮಂದಿ ಮೃತಪಟ್ಟಿದ್ದಾರೆ.
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ
4 ದಿನದಲ್ಲೇ 100 ಸೋಂಕು!
ಮೊದಲ 100 - 22 ದಿನ
2ನೇ 100 - 10 ದಿನ
3ನೇ 100 - 6 ದಿನ
4ನೇ 100 - 4 ದಿನ
ಜಿಲ್ಲಾವಾರು ಕೊರೋನಾ ಸೋಂಕು
ಜಿಲ್ಲೆ- ಸೋಂಕಿತರು- ಸಾವು
ಬೆಂಗಳೂರು- 89- 4
ಮೈಸೂರು- 84- 0
ಬಾಗಲಕೋಟೆ- 21- 1
ಬಳ್ಳಾರಿ- 13- 0
ಬೆಳಗಾವಿ- 42- 1
ಬೆಂಗಳೂರು ಗ್ರಾಮಾಂತರ- 12- 0
ಬೀದರ್- 15- 0
ಚಿಕ್ಕಬಳ್ಳಾಪುರ- 16- 2
ಚಿತ್ರದುರ್ಗ- 1- 0
ದಕ್ಷಿಣ ಕನ್ನಡ- 14- 1
ದಾವಣಗೆರೆ- 2- 0
ಧಾರವಾಡ- 7- 0
ಗದಗ- 4- 1
ಕಲಬುರಗಿ- 27- 3
ಕೊಡಗು- 1- 0
ಮಂಡ್ಯ- 12- 0
ತುಮಕೂರು- 2- 1
ಉಡುಪಿ- 3- 0
ಉತ್ತರ ಕನ್ನಡ- 11- 0
ವಿಜಯಪುರ- 32- 2
ಒಟ್ಟು- 408 -16