
ಕಾರವಾರ(ಮೇ.06) ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ಪೆಹಲ್ಗಾಂ ಉಗ್ರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಬಲವಾಗುತ್ತದ್ದಂತೆ ಇದೀಗ ಭಾರತ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದೆ. ಅತ್ತ ಪಾಕಿಸ್ತಾನ ಕೂಡ ಭಾರಿ ತಯಾರಿ ನಡೆಸುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಮೇ.7 ರಂದು ದೇಶದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚಿಸಿತ್ತು. ಇದರಂತೆ ತಯಾರಿಗಳು ನಡೆದಿದೆ. ಯುದ್ಧದ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು, ಪರಿಸ್ಥಿತಿ ಎದುರಿಸುವಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಕ್ ಡ್ರಿಲ್ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಆದರೆ ನಾಳೆ ನಡೆಯಬೇಕಿದ್ದ ಕಾರವಾರ ಹಾಗೂ ರಾಯಚೂರಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ.
ಕಾರವಾರದಲ್ಲಿ ನಾಳೆ ನಡೆಯಲಿದ್ದ ಅಣುಕು ಕಾರ್ಯಾಚರಣೆ ರದ್ದು
ನೌಕಾದಳ, ಅಗ್ನಿಶಾಮಕದಳ, ಪೊಲೀಸ್, ಗೃಹರಕ್ಷಕ ದಳದ ಅಧಿಕಾರಿಗಳ ಸಭೆಯ ನಂತರ ನಾಳೆ ನಿಗದಿಯಾದ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ. ಕೆಟಗೆರಿ 2 ನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಹಾಗೂ ಕದಂಬ ನೌಕಾನೆಲೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹೀಗಾಗಿ ನಾಳಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ. ಆದರೆ ಒಂದು ವಾರದಲ್ಲಿ ಸರಕಾರ ನಿಗದಿ ಮಾಡುವ ದಿನಾಂಕದಲ್ಲಿ ಮಾಕ್ ಡ್ರಿಲ್ ನಡೆಸಲು ನಿರ್ಧರಿಸಲಾಗಿದೆ.
ಯುದ್ಧದ ಮಾಕ್ ಡ್ರಿಲ್‌ನಿಂದ ನಾಳೆ ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಇದೆಯಾ?
ಜಿಲ್ಲಾಧಿಕಾರಿ ದಿಢೀರ್ ಸುದ್ದಿಗೋಷ್ಠಿ
ಈ ಕರಿತು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಸರ್ಕಾರ ಸೂಚನೆಯಂತೆ ಪೂರ್ವ ಸಿದ್ಧತೆ ನಡೆಸಲಾಗಿದೆ. ಆದರೆ ನಾಳಿನ ಮಾಕ್ ಡ್ರಿಲ್ ಇರುವುದಿಲ್ಲ. ನಾಳೆ ಕೇವಲ ಪೂರ್ವ ಸಿದ್ಧತೆ ಮಾತ್ರ ಎಂದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಹೇಳಿದ್ದಾರೆ.
ಅಗ್ನಿಯಿಂದ ರಕ್ಷಣೆ ಹಾಗೂ ಜನರನ್ನು ಸ್ಥಳಾಂತರಿಸುವ ಮಾಕ್ ಡ್ರಿಲ್ ನಡೆಸಲು ಸೂಚಿಸಲಾಗಿದೆ. ಇದೇ ವೇಳೆ ಸಮುದ್ರ ಕಿನಾರೆಯಲ್ಲಿ, ಬೀಚ್‌ನಲ್ಲಿರುವ ಜನರನ್ನು ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಪೂರ್ವ ಸಿದ್ಧತೆಗಾಗಿ ಎಲ್ಲಾ ವಿಭಾಗದ ಅಧಿಕಾರಿಗಳ ಸಭೆ ನಡಸಲಾಗುತ್ತದೆ. ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬದಲಿ ದಿನಾಂಕವನ್ನು ಸರ್ಕಾರ ಸೂಚಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಸಲಕರಣೆಗಳು, ಆಸ್ಪತ್ರೆ, ರಕ್ತ, ಸಾರಿಗೆ ವ್ಯವಸ್ಥೆ ಮುಂತಾದ ಪ್ರತಿಯೊಂದನ್ನೂ ತಯಾರಿಡಲು ಸೂಚಿಸಲಾಗಿದೆ. ಮಾಕ್ ಡ್ರಿಲ್ ವೇಳೆ ಭಾರಿ ಶಬ್ದದ ಸೈರನ್ ಆದಾಗ ಜನರು ಲೈಟ್ ಆಫ್ ಮಾಡಿ ಮನೆಯಲ್ಲಿರಲು ಸೂಚಿಸಲಾಗುವುದು. ಆದರೆ ಈ ಮಾಕ್ ಡ್ರಿಲ್ ನಾಳೆ ನಡೆಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ತಯಾರಿ ನಾಳೆಯಿಂದಲೇ ಆರಂಭಗೊಳ್ಳುತ್ತದೆ ಎಂದಿದ್ದಾರೆ.
ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಿಕೆ
ರಾಯಚೂರಿನಲ್ಲಿ ನಡಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಯಾ ಜಿಲ್ಲೆಗಳ ಸೂಕ್ಷ್ಮತೆಯ ಆಧಾರದಲ್ಲಿ ವರ್ಗ-1, ವರ್ಗ-2, ಹಾಗೂ ವರ್ಗ-3 ಎಂದು ವಿಂಗಡಿಸಿದೆ. ಇದರ ಪ್ರಕಾರ ಮಾಕ್ ಡ್ರಿಲ್ ನಡೆಯಲಿದೆ. ಮುಂದಿನ ಪ್ರವರ್ಗದ ದಿನಾಂಕವನ್ನು ಸರ್ಕಾರ ಸೂಚಿಸಲಿದೆ.
ಮೈಸೂರಿನಲ್ಲಿರಲು ಮೂವರು ಅಪ್ರಾಪ್ರ ಪಾಕಿಸ್ತಾನಿಯರಿಂದ ಕರ್ನಾಟಕ ಹೈಕೋರ್ಟ್ಗೆ ಅರ್ಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ