ರಾಜ್ಯದಲ್ಲಿ ಅಪ್ಪನ ಮಗನೇ ಮಿನಿಸ್ಟರ್ ಇರೋದು; ಅಕ್ರಮ ಬಾಂಗ್ಲಾದೇಶಿಗರನ್ನ ಹೊರದಬ್ಬಿ: ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

Published : Aug 16, 2026, 01:49 PM ISTUpdated : Aug 16, 2026, 02:14 PM IST
Chakravarthy Sulibele first reaction

ಸಾರಾಂಶ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ನೇತೃತ್ವದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಈ ಹೋರಾಟದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಹೋರಾಟ ಗುರಿ ಮುಟ್ಟುವವರೆಗೂ ನಿಲ್ಲಬಾರದು ಎಂದರು. ಜನಸಂಖ್ಯಾ ಹೆಚ್ಚಳದ ಆತಂಕ..

ಬೆಂಗಳೂರು (ಆ.16): ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಹಿಂದೂ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.

ಈ ಹೋರಾಟ ಗುರಿ ಮುಟ್ಟುವರೆಗೂ ಬಿಡೋ ಆಗಿಲ್ಲ!

ಅಕ್ರಮ ಬಾಂಗ್ಲಾದೇಶಿಯರನ್ನ ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡಲು ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟದಲ್ಲಿ ಹಿಂದೂಗಳ ಉತ್ಸಾಹ ಜೋರಿದೆ. ಆದರೆ ಕೊನೆಯಲ್ಲಿ ಕಡಿಮೆ ಆಗಿಬಿಡುತ್ತೆ. ಮುಸಲ್ಮಾನರ ಉತ್ಸಾಹ ಆರಂಭದಲ್ಲಿ ಕಡಿಮೆ ಇರುತ್ತೆ, ಹೋಗ್ತಾ ಹೋಗ್ತಾ ಹೆಚ್ಚಾಗುತ್ತೆ. ಹಾಗೆ ಆಗಲು ಬಿಡಬಾರದು ಈ ಹೋರಾಟ ಗುರಿಮುಟ್ಟುವರೆಗೂ ನಿಲ್ಲಬಾರದು ಎಂದರು.

ಬೆಂಗಳೂರಿನಲ್ಲಿ ತಮಿಳ್-ಕನ್ನಡಿಗ ಅಂತಾ ಡಿವೈಡ್ ಆಗಿದ್ದೇವೆ, ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ಭಾಷೆಯ ವಿಚಾರದಲ್ಲಿ ಹೋರಾಟ ಮಾಡ್ತಿದ್ದಾರೆ. ಆದ್ರೆ ಮುಸ್ಲಿಮರು ಮಾತ್ರ ಧರ್ಮದ ಆಧಾರದಲ್ಲಿ ದೇಶ ಬೇಕೆಂದು ಕೇಳ್ತಾರೆ. ಇಂದು ಒಂದು ಸಮುದಾಯದ ಜನಸಂಖ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಸೂಲಿಬೆಲೆ ಅವರು,

ಅವರ ಜನಸಂಖ್ಯೆ ಹೆಚ್ಚಾದ್ರೆ ಸಮಸ್ಯೆ

ಈ ದೇಶವನ್ನ ವಿಭಜನೆ ಮಾಡಿದಾಗ ಅವ್ರು ಅವತ್ತು ನಿರ್ಧಾರ ಮಾಡಿದ್ರು, ಗ್ರೀನ್ ಕಾರಿಡಾರ್ ಮಾಡ್ತೇವೆ ಅಂತಾ ಅದು ಇಂದು ಕೂಡ ಮುಂದುವರಿದೆ. ಭಾರತದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದ್ರೆ ಅದು ನಮ್ಮ ಹಿಂದೂಗಳಲ್ಲೇ ಹೆಚ್ಚಾಗ್ತಿರೋದು. ಇದು ದೇಶದ ಸಮಾಜ ಮತ್ತು ರಾಜಕೀಯದ ಮೇಲೆ ಪರಿಣಾಮ ಬೀರುತ್ತಿದೆ. ಇವತ್ತು ಭಾರತದಲ್ಲಿ ಶೇ 25ರಷ್ಟು ಅವರ ಜನಸಂಖ್ಯೆ ಹೆಚ್ಚಾಗಿದೆ. 25ರಷ್ಟು ಅಂದ್ರೆ ಕಡಿಮೆ ಸಂಖ್ಯೆ ಏನೂ ಅಲ್ಲ. ನಮಗೆ ಸ್ವಾತಂತ್ರ್ಯ ಬಂದಾಗ ಶೇ ೯ ರಷ್ಟು ಇತ್ತು. ಅವರು ಹೇಗೆ ಅಂದ್ರೆ ಶೇ.10 ರಷ್ಟು ಇದ್ರೆ ಹೇ.. ಅಂತಾರೆ, ಶೇ.15 ಆದರೆ ಹೇ.. ಬಾರೋ ಇಲ್ಲಿ ಅಂತಾರೆ, ಅದೇ ಶೇ.25 ಇದ್ರೆ ನಾವಿಲ್ಲದೆ ಸರ್ಕಾರ ಕೂಡ ಮಾಡೋದಕ್ಕೆ ಆಗೋಲ್ಲ ಅಂತಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ದಾವಣಗೆರೆಯಲ್ಲಿ ನಡೆದ ಆ ಘಟನೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವ್ರಿಗೂ ಅನ್ಯಾಯ ಆಗೋಯ್ತು.

ಇನ್ನು ಸ್ವಾತಂತ್ರ್ಯೋತ್ಸವ ದಿನದಂದು ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆ ಹಾಡುವಾಗ ಸೋನಿಯಾ ಗಾಂಧಿ ಅರ್ಧಕ್ಕೆ ನಿಲ್ಲಿಸಿದಾರೆಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಸೂಲಿಬೆಲೆ ಅವರು, ಕಾಂಗ್ರೆಸ್‌ನವರಿಗೆ ಎಲ್ಲವನ್ನು ಕಟ್ ಮಾಡಿಯೇ ಅಭ್ಯಾಸ ಎಂದು ಟೀಕಿಸಿದರು.

ಡ್ರಗ್ಸ್ ಮಾಫಿಯಾಕ್ಕೆ ಜೆನ್‌-ಜೀ ಗಳು ಬಲಿಯಾಗುತ್ತಿದ್ದಾರೆ:

ನಾವು ಯಾರನ್ನು ಜೆನ್‌-ಜೀ ಎಂದು ಕರೆಯುತ್ತೇವೆ ಆ ಯುವಕರು ಈ ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ. ಈ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಯಾರು? ಏಕೆ ಒಂದೇ ಸಮುದಾಯದ ಹೆಚ್ಚು ಜನರು ಇದರ ಹಿಂದೆ ಇದ್ದಾರೆ. ಇದು ಹಿಂದೂಸ್ಥಾನವಾ? ಎಲ್ಲಿದೆ ಹಿಂದೂಸ್ಥಾನ? ನಮ್ಮ ದೇಶದಲ್ಲಿ ನಾವೇ ಮೂರನೇ ಹಂತದ ನಾಗರಿಕರಾಗಿದ್ದೇವೆ. ನಾವು ಅನ್ಯಾಯದ ವಿರುದ್ಧ ಹೋರಾಡೋಕೂ ಅನುಮತಿ ಪಡೆಯಬೇಕು, ಇವತ್ತು ನಮ್ಮ ಹಿಂದೂಗಳು ಓಡಾಡೋದಕ್ಕೂ ಭಯ ಪಡುವಂತಹ ಪರಿಸ್ಥಿತಿ ರಾಜ್ಯದಲ್ಲಿದೆ. ಒಂದು ಕಡೆ ಲವ್ ಜಿಹಾದ್ ನಡೆಯುತ್ತಲೇ ಇದೆ. ನಮ್ಮ ದೇವರು ದೇವರೇ ಅಲ್ಲ ಅನ್ನುವ ಘೋಷಣೆ ಕೇಳಿಕೊಂಡೇ ಬದುಕಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪುನೀತ್ ಕರೆಹಳ್ಳಿ ಕಾರ್ಯಕ್ಕೆ ಮೆಚ್ಚುಗೆ

ಪುನೀತ್ ಕೆರೆಹಳ್ಳಿ ಅವರು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹಗಲಿರುಳೆನ್ನದೆ ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ವಿಡಿಯೋ ಮೇಲೆ ವಿಡಿಯೋ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಕ್ರಮ ಬಾಂಗ್ಲಾ ನುಸುಳುಕೋರರನ್ನ ರಾಜ್ಯದಿಂದ ಹೊರದಬ್ಬಲು ನಮ್ಮ ಪೊಲೀಸರಿಗೆ ಹೆಚ್ಚೆಂದರೆ ಎರಡು ದಿನ ಸಾಕು. ಆದ್ರೆ ಸರ್ಕಾರ ಅನುಮತಿ ನೀಡಬೇಕು. ಒಳನುಸುಳುವ ಬಾಂಗ್ಲಾದೇಶಿಗರನ್ನು ನಾವು ಬಿಡೋಲ್ಲ ಅನ್ನುವ ಎಚ್ಚರಿಕೆ ನೀಡಬೇಕು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುಕೋರರು ಮೆರೆಯುತ್ತಿದ್ದರು. ಅವರನ್ನ ಹೊರದಬ್ಬಲು ಅಂದಿನ ಮಮತಾ ಬ್ಯಾನರ್ಜಿ ಪೊಲೀಸರಿಗೆ ಅನುಮತಿ ನೀಡಲಿಲ್ಲ.

ಆದರೆ ಅಲ್ಲಿ ಮಮತಾ ಸರ್ಕಾರ ಬಿದ್ದು ಹೋಗಿ ಬಿಜೆಪಿ ಅಧಿಕಾರಕ್ಕೆ ಬರ್ತಿದ್ದಂತೆ ಏನೆಲ್ಲ ಬದಲಾವಣೆ ಆಗಿದೆ ನೀವು ನೋಡಿದ್ದೀರಿ, ಅಕ್ರಮ ವಲಸಿಗರು ವಾಪಸ್ ಅವರಾಗಿಯೇ ಹೊರಟ್ರು. ಇನ್ನು ಕೆಲವರು ಬಾಂಗ್ಲಾಕ್ಕೆ ಹೋಗದೆ ಕರ್ನಾಟಕ, ಬೆಂಗಳೂರು ಸುರಕ್ಷಿತ ಅಂದುಕೊಂಡು ಇಲ್ಲಿಗೆ ನುಸುಳಿದರು. ಏಕೆಂದರೆ ಅವರಿಗೆ ಬೇಕಾದ ಸರ್ಕಾರ ಇಲ್ಲಿದೆ. ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದಾರೆ ಎಂದು ಅಲ್ಲಿನ ಮಿತ್ರರು ನನಗೆ ಈ ವಿಷಯ ಹೇಳಿದರು. ಸರ್ಕಾರದ ಮಟ್ಟದಲ್ಲಿ ಬಾಂಗ್ಲಾ ವಲಸಿಗರ ಮೇಲೆ ಕ್ರಮ ಆಗಲೇಬೇಕು ಈ ಹಾವುಗಳನ್ನ ಓಡಿಸಬೇಕು, ನಾವು ಓಡಾಡೋದಕ್ಕೆ ಮುಂದಾದ್ರೆ ಲಾ ಅಂಡ್ ಆರ್ಡರ್ ಸಮಸ್ಯೆ ಆಗುತ್ತೆ. ಈ ರಾಜ್ಯದಲ್ಲಿ ಅಪ್ಪನೆ ಮಗನೇ ಮಿನಿಸ್ಟರ್ ಇರೋದು. ಅವರಿಗೆ ಇದು ನನ್ನ ಪ್ರೀತಿಯ ಎಚ್ಚರಿಕೆ ಬಾಂಗ್ಲಾದೇಶಿಗರನ್ನ ತೊಲಗಿಸಿ.. ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ವಾಹನ ಸವಾರರಿಗೆ ಶಾಕ್: ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ! ಯಾವ ಗಾಡಿಗೆ ಎಷ್ಟೆಷ್ಟು?
ಪೊಲೀಸರು ಮಾಡಬೇಕಾದ ಕೆಲಸ ಹಿಂದೂ ಕಾರ್ಯಕರ್ತರು ಮಾಡುತ್ತಿದ್ದಾರೆ; ಫ್ರೀಡಂ ಪಾರ್ಕ್‌ನಲ್ಲಿ ವಸಂತ್ ಗಿಳಿಯಾರ್ ಹೇಳಿದ್ದೇನು?