
ಬೆಂಗಳೂರು (ನ.25): ರಾಜ್ಯ ಸರ್ಕಾರದಿಂದ 2024ರ ಸಾರ್ವಜನಿಕ ರಜಾದಿನಗಳನ್ನು ಘೋಷಣೆ ಮಾಡಿದ್ದು, ಪಟ್ಟಿಯನ್ನು ಸಿದ್ಧಗೊಳಿಸಿದೆ. ಒಟ್ಟು 21 ರಜಾ ದಿನಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ 6 ಶುಕ್ರವಾರದ ದಿನಗಳು ರಜೆಯ ದಿನಗಳಾಗಿವೆ. ವರ್ಷದ ಆರಂಭದಲ್ಲಿಯೇ ವಾರಾಂತ್ಯದ ಮೂರು ದಿನಗಳ ರಜೆಗಳನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆ ರೂಪಿಸಬಹುದು.
ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ರಜಾ ದಿನಗಳಾಗಿವೆ.
ದಿನಾಂಕ ವಾರಗಳು ಸಾರ್ವತ್ರಿಕ ರಜಾ ದಿನಗಳು
15.01.2024 ಸೋಮವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26.01.2024 ಶುಕ್ರವಾರ ಗಣರಾಜ್ಯೋತ್ಸವ
05.03.2024 ಶುಕ್ರವಾರ ಮಹಾ ಶಿವರಾತ್ರಿ
29.03.2024 ಶುಕ್ರವಾರ ಗುಡ್ ಫ್ರೈಡೇ
09.04.2024 ಮಂಗಳವಾರ ಯುಗಾದಿ ಹಬ್ಬ
11.04.2024 ಗುರುವಾರ ಖುತುಬ್-ಎ-ರಂಜಾನ್
01.05.2024 ಬುಧವಾರ ಕಾರ್ಮಿಕ ದಿನಾಚರಣೆ
10.05.2024 ಶುಕ್ರವಾರ ಬಸವ ಜಯಂತಿ/ಅಕ್ಷಯ ತೃತೀಯ
17.06.2024 ಸೋಮವಾರ ಬಕ್ರೀದ್
17.07.2024 ಬುಧವಾರ ಮೊಹರಂ ಕಡೇ ದಿನ
15.08.2024 ಗುರುವಾರ ಸ್ವಾತಂತ್ರ್ಯ ದಿನಾಚರಣೆ
07.09.2024 ಶನಿವಾರ ವರಸಿದ್ಧಿ ವಿನಾಯಕ ವ್ರತ
16.09.2024 ಸೋಮವಾರ ಈದ್ ಮಿಲಾದ್
02.10.2024 ಬುಧವಾರ ಗಾಂಧಿ ಜಯಂತಿ/ ಮಹಾಲಯ ಅಮವಾಸ್ಯೆ
11.10.2024 ಶುಕ್ರವಾರ ಮಹಾನವಮಿ/ ಆಯುಧ ಪೂಜೆ
17.10.2024 ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ
31.10.2024 ಗುರುವಾರ ನರಕ ಚತುರ್ದಶಿ
01.11.2024 ಶುಕ್ರವಾರ ಕನ್ನಡ ರಾಜ್ಯೋತ್ಸವ
02.11.2024 ಶನಿವಾರ ಬಲಿಪಾಡ್ಯಮಿ, ದೀಪಾವಳಿ
18.11.2024 ಸೋಮವಾರ ಕನಕದಾಸ ಜಯಂತಿ
25.12.2024 ಬುಧವಾರ ಕ್ರಿಸ್‌ಮಸ್
ಸೂಚನೆ:
1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಸೋನಿಯಾ, ರಾಹುಲ್, ಸುರ್ಜೇವಾಲಾ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯನ ದಾರಿ ತಪ್ಪಿಸಿದ್ದಾರೆ!
2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ