ಪ್ರಯಾಣಿಕರಿಗೆ ಶಾಕ್, ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ, ಶೇ.8ರ ವರೆಗೆ ಬೆಲೆ ಪರಿಷ್ಕರಣೆ

Published : Jun 08, 2026, 09:50 PM IST
Karnataka private bus

ಸಾರಾಂಶ

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ ಖಾಸಗಿ ಬಸ್ ದರ ಏರಿಕೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ಖಾಸಗಿ ಬಸ್ ಆಪರೇಟರ್ಸ್ ಪ್ರಯಾಣ ದರ ಏರಿಕೆ ಮಾಡುತ್ತಿದ್ದಾರೆ.

ಉಡುಪಿ (ಜೂ.08) ಪೆಟ್ರೋಲ್ ಡೀಸೆಲ್ ದರ ಏರಿಕೆ, ಗ್ಯಾಸ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಣದುಬ್ಬರದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ನಾಳೆಯಿಂದ (ಜೂನ್ 09) ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗುತ್ತಿದೆ. ಟಿಕೆಟ್ ಬೆಲೆ ಏರಿಕೆ ಕುರಿತು ಫೆಡರೇಷನ್ ಆಫ್ ಸ್ಟೇಜ್ ಕ್ಯಾರಿಯೇಜ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಯ್ಲಾಡಿ ಸುರೇಶ್ ನಾಯಕ್ ಘೋಷಣೆ ಮಾಡಿದ್ದಾರೆ.

ಡೀಸೆಲ್ ದರ ಏರಿಕೆ ಹಿನ್ನಲೆಯಲ್ಲಿ ಬಸ್ ಟಿಕೆಟ್ ಬೆಲೆ ಹೆಚ್ಚಳ

ಪ್ರಯಾಣಿಕರಿಗೆ ಇದೀಗ ಖಾಸಗಿ ಬಸ್ ದರ ಏರಿಕೆ ತೀವ್ರ ಸಮಸ್ಯೆಯಾಗಿ ಪರಿಣಿಮಿಸಲಿದೆ. ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗ, ರಾಜ್ಯದ ಹಲವೆಡೆ ಖಾಸಗಿ ಬಸ್ ಅವಲಂಬಿಸಿರುವವ ಸಂಖ್ಯೆ ಹೆಚ್ಚಿದೆ. ಆದರೆ ಡೀಸೆಲ್ ಬೆಲೆ ಸೇರಿದಂತೆ ವಾಹನ ನಿರ್ವಹಣಾ ವೆಚ್ಚ ತೀವ್ರವಾಗಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸ್ಟೇಜ್ ಕ್ಯಾರಿಯೇಜ್ ಬಸ್ ದರ ಏರಿಕೆ ಮಾಡಲು ಬಸ್ ಆಪರೇಟರ್ಸ್ ಆಸೋಸಿಯೇಶನ್ ನಿರ್ಧರಿಸಿದೆ.

ಶೇಕಡ 5 ರಿಂದ ಶೇಕಡ 8ರವರೆಗೆ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದಿದ್ದಾರೆ. ಕೇಂದ್ರ ಸರಕಾರ ನಾಲ್ಕು ಬಾರಿಡೀಸೆಲ್ ದರ ಜಾಸ್ತಿ ಮಾಡಿದೆ. ಇದರೊಂದಿಗೆ ಡೀಸೆಲ್ ಬೆಲೆ 8.17 ರೂಪಾಯಿ ಏರಿಕೆಯಾಗಿದ್ದರೆ, ಇತ್ತ ರಾಜ್ಯ ಸರ್ಕಾರ ವರ್ಷದ ಹಿಂದೆ ಮೂರು ರೂಪಾಯಿ ಏರಿಕೆ ಮಾಡಿದೆ. ಇತ್ತ ವಾಹನಗಳ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಟಯರ್ ರಿಸೋಲಿಂಗ್ ದರ ಹೆಚ್ಚಾಗಿದೆ. ಜೊತೆಗೆ ಟೋಲ್ ದರ, ನೌಕರರ ವೇತನ, ತೆರಿಗೆ, ವಿಮೆ ಸೇರಿದಂತೆ ಎಲ್ಲವೂ ಹೆಚ್ಚಳವಾಗಿದೆ. ಇದರ ಪರಿಣಾಮ ಬಸ್ ನಿರ್ವಹಣೆ ಮಾಡುವುದೇ ತೀವ್ರ ತಲೋನೋವಾಗಿ ಪರಿಣಮಿಸಿದೆ ಎಂದು ಬಸ್ ಆಪರೇಟೇಟರ್ ಅಸೋಸಿಯೇಶನ್ ಹೇಳಿದೆ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುತ್ತಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ 2020ರ ಅಧಿಸೂಚನೆ ಯಂತೆ ದರ ಏರಿಕೆ ಮಾಡಲಾಗುತ್ತದೆ. ಪ್ರತಿ ಪ್ರಯಾಣಿಕ ನಿಗೆ 4 ಪೈಸೆ ಮತ್ತು ಪ್ರತಿ ಕಿ.ಮೀ ಗೆ ಕನಿಷ್ಠ 25 ಪೈಸೆ ಸೆಸ್ ಹಾಕಲು ಅವಕಾಶವಿದೆ. ಮಂಗಳವಾರದಿಂದಲೇ ದರ ಏರಿಕೆ ಜಾರಿಯಾಗಲಿದೆ ಎಂದಿದ್ದಾರೆ. ರಾಜ್ಯದಲ್ಲಿ ಸುಮಾರು 5000ಕ್ಕೂ ಅಧಿಕ ಖಾಸಗಿ ಬಸ್ಸುಗಳಿವೆ. ಬೆಲೆ ಏರಿಕೆ ಮಾಡದಿದ್ದರೆ, ಮಾಲೀಕರು ಸಾಲದಲ್ಲಿ ಮುಳುಗುತ್ತಾರೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?