ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್, ಖಾಸಗಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಫಿಕ್ಸ್

Published : Apr 08, 2025, 10:09 PM ISTUpdated : Apr 08, 2025, 10:12 PM IST
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್, ಖಾಸಗಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಫಿಕ್ಸ್

ಸಾರಾಂಶ

ಹಾಲಿನ ಬೆಲೆ ಏರಿಕೆ, ಡೀಸೆಲ್ ಮೇಲೆ ಸೆಸ್ ಏರಿಕೆ, ವಿದ್ಯುತ್ ದರ ಏರಿಕೆ, ಕಸದ, ಪಾರ್ಕಿಂಗ್ ಮೇಲೆ ಶುಲ್ಕ ಸೇರಿದಂತೆ ರಾಜ್ಯದಲ್ಲಿ ಜನರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಇದೀಗ ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗುತ್ತಿದೆ.

ಬೆಂಗಳೂರು(ಏ.08) ಕರ್ನಾಟಕದಲ್ಲಿ ಉಚಿತ ಗ್ಯಾರೆಂಟಿ ನೀಡಿ ಜನರನ್ನು ಖುಷಿ ಪಡಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬೆಲೆ ಏರಿಕೆ ಮಾಡಿ ಕಂಗಾಲು ಮಾಡಿದೆ. ಪ್ರತಿ ದಿನ ಒಂದಲ್ಲಾ ಒಂದರ ಬೆಲೆ ಏರಿಕೆಯಾಗುತ್ತಿದೆ. ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ, ಡೀಸೆಲ್ ಮೇಲಿನ ಸೆಸ್ ಏರಿಕೆ, ಕಸ ಸಂಗ್ರಹ ವಿಲೇವಾರಿಗೆ ಶುಲ್ಕ, ಪಾರ್ಕಿಂಗ್ ಶುಲ್ಕ ಪಾವತಿ ಸೇರಿದಂತೆ ಸತತ ಬೆಲೆ ಏರಿಕೆಯಾಗುತ್ತಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಭಾರಿ ಏರಿಕೆಯಾಗಿದೆ. ಈ ಬೆಳವಣಿಗೆ ನಡುವೆ ಇದೀಗ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಖಚಿತಗೊಂಡಿದೆ.  ಖಾಸಗಿ ಬಸ್ ಒಕ್ಕೂಟ ಇದೀಗ ಬೆಲೆ ಏರಿಕೆಗೆ ಮುಂದಾಗಿದೆ. ಇದೇ ವಾರದಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ.

ಏಪ್ರಿಲ್ 15ರಿಂದ ಜಾರಿ
ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಕ್ಯಾಬ್ ಬಾಡಿಗೆ ದರಗಳು ಏರಿಕೆಯಾಗಿದೆ. ಇತ್ತ ಡೀಸೆಲ್ ಮೇಲೆ ಸೆಸ್ ಹೆಚ್ಚಳವಾಗಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಖಾಸಗಿ ಬಸ್ ದರ ಏರಿಕೆಗೆ ಖಾಸಗಿ ಬಸ್ ಒಕ್ಕೂಟ ಮುಂದಾಗಿದೆ. ಇದೇ ತಿಂಗಳ 15ರ ಬಳಿಕ ಪರಿಷ್ಕೃತ ದರ ಜಾರಿಯಾಗಲಿದೆ. 

ಕಸಸಂಗ್ರಹ, ವಿಲೇವಾರಿ ವೆಚ್ಚ ವಸೂಲಿಗೆ ಬಿಬಿಎಂಪಿ ನಿರ್ಧಾರ,ನಾಳೆಯಿಂದ ಜಾರಿ

ಶೇಕಡಾ 15ರಿಂದ 20 ರಷ್ಟು ಏರಿಕೆ
ಖಾಸಗಿ ಬಸ್ ಟಿಕೆಟ್ ಪ್ರಯಾಣದ ದರ ಏರಿಕೆಯಾಗುತ್ತಿದೆ. ಶೇಕಡಾ 15 ರಿಂದ ಶೇಕಡಾ 20 ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಖಾಸಗಿ ಬಸ್ ಒಕ್ಕೂಟ ನಿರ್ಧರಿಸಿದೆ. ಈ ಕುರಿತು ಮಹತ್ವ ಸಭೆ ನಡೆಸಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಬಸ್ ಒಕ್ಕೂಟ ಡೆಡ್‌ಲೈನ್ ನೀಡಿದೆ. ಇದೇ ವೇಳೆ ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಈ ಬೇಡಿಕೆ ಒಪ್ಪದಿದ್ದರೆ ಬೆಲೆ ಏರಿಕೆ ಖಚಿತ ಎಂದಿದೆ.

ಡೀಸೆಲ್ ದರ ಕಡಿಮೆ ಮಾಡಲು ಬೇಡಿಕೆ
ಈಗಾಗಲೇ ಡೀಸೆಲ್ ಮೇಲಿನ ಸೆಲ್ ಹಚ್ಚಳ ಮಾಡಲಾಗಿದೆ. ಇದರಿಂದ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ. ಇದೀಗ ಬಸ್ ಒಕ್ಕೂಟ ಡೀಸೆಲ್ ಬೆಲೆ ಇಳಿಕೆ ಮಾಡಲು ಆಗ್ರಹಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಎಪ್ರಿಲ್ 14ರ ಡೆಡ್‌ಲೈನ್ ನೀಡಿದೆ. ಎಪ್ರಿಲ್ 14ರ ಒಳಗೆ ಡೀಸೆಲ್ ಬೆಲೆ ಕಡಿಮೆ ಮಾಡದಿದ್ದರೆ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸುವುದಾಗಿ ಎಚ್ಚರಿಸಿದೆ.

ಏಪ್ರಿಲ್ 15ಕ್ಕೆ ಲಾರಿ ಮಾಲೀಕರ ಮುಷ್ಕರ
ಬೆಲೆ ಏರಿಕೆ ವಿರೋಧಿಸಿ ಎಪ್ರಿಲ್ 15ಕ್ಕೆ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಸೇಲ್, ಟೋಲ್, ಫಿಟ್ನೆಸ್ ಸರ್ಟಿಫಿಕೇಟ್ ದರ ಹೆಚ್ಚಳ ವಿರೋಧಿಸಿ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ಮುಷ್ಕರ ನಡೆಸಲಿದ್ದಾರೆ. ಈ ಮುಷ್ಕರಕ್ಕೆ ಇದೀಗ ಬಸ್ ಮಾಲೀಕರ ಒಕ್ಕೂಟ ಕೂಡ ಬೆಂಬಲ ಸೂಚಿಸಿದೆ. ಈ ಮೂಲಕ ಭಾರಿ ಪ್ರತಿಭಟನೆ ಕೈಗೊಳ್ಳಳು ಲಾರಿ ಹಾಗೂ ಬಸ್ ಮಾಲೀಕರ ಸಂಘ ಮುಂದಾಗಿದೆ.  

ದೇಶದಾದ್ಯಂತ ಶೀಘ್ರ ಗ್ಯಾಸ್ ಬೆಲೆ ₹500ಕ್ಕೆ ಇಳಿಕೆ; ಮಾಜಿ ಸಂಸದ ಪ್ರತಾಪ್ ಸಿಂಹ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು