ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅಮಾನತ್ತು!

By Ravi Janekal  |  First Published Nov 17, 2023, 7:49 PM IST

ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ.


ಬೆಂಗಳೂರು (ನ.17): ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ.

 ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಚಿಂತನ ಮಂಥನ ಸಭೆಯಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸಿಎಂ ಇಬ್ರಾಹಿಂ, ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ.  ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ನನ್ನನ್ನು ತೆಗೆಯಬೇಕಾದ್ರೆ 2/3 ನಲ್ಲಿ  ಸಭೆ ಮಾಡಿ ತೆಗೆಯಬೇಕು. ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ. ಎನ್‌ಡಿಎ ಸೋಲಿಸಲು ಇಂಡಿ ಮೈತ್ರಿಕೂಟಕ್ಕೆ ಬೆಂಬಲ ನೀಡಲಾಗುವುದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಬಳಿಕ ಬಹಿರಂಗವಾಗಿ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದ ಸಿಎಂ ಇಬ್ರಾಹಿಂ. ಹಲವು ಬಾರಿ ಎಚ್ಚರಿಸಿದ್ದ ದೇವೇಗೌಡರು. ಮೈತ್ರಿ ಸರ್ಕಾರಕ್ಕೆ ಒಪ್ಪಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಯೋಚಿಸಿದ್ದ ದೇವೇಗೌಡರು. ಆದರೆ ಶತಾಯಗತಾಯ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಾ ಬಹಿರಂಗವಾಗಿ ಇಂಡಿ ಒಕ್ಕೂಟಕ್ಕೆ ನೀಡುತ್ತೇವೆ ಎಂದು ಸಭೆಯಲ್ಲಿ ಹೇಳಿದ್ದ ಇಬ್ರಾಹಿಂ. 

Tap to resize

Latest Videos

ಸಿಎಂ ಇಬ್ರಾಹಿಂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹಿನ್ನೆಲೆ ಪಕ್ಷದ ಪದಾಧಿಕಾರಿಗಳ ಸಭೆ ಕರೆದು  ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂರನ್ನು ಉಚ್ಛಾಟಿಸಿದ್ದ ಎಚ್‌ಡಿ ದೇವೇಗೌಡರು ಇದೀಗ ಜೆಡಿಎಸ್ ಪಕ್ಷದಿಂದಲೇ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. 

'3 ಸೀಟಿಗಾಗಿ ಅಮಿತ್‌ ಶಾ ಮುಂದೆ ನಿಮ್ಮ ಮಗ ನಿಮ್ಮನ್ನ ಅಡ ಇಡ್ತಿದ್ದಾರೆ..' ದೇವೇಗೌಡರಿಗೆ ಇಬ್ರಾಹಿಂ ಎಚ್ಚರಿಕೆ!

click me!