ಕೊರೋನಾ : ಮತ್ತೊಂದು ಆಘಾತಕಾರಿ ರಿಪೋರ್ಟ್

By Kannadaprabha NewsFirst Published Oct 29, 2020, 7:43 AM IST
Highlights

ಕೊರೋನಾ ಮಹಾಮಾರಿ ಸಂಬಂಧ ಇದೀಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಏನದು ವಿಚಾರ..?

ಬೆಂಗಳೂರು (ಅ.29):  ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಇಳಿಕೆ ಗತಿಯಲ್ಲೇ ಮುಂದುವರೆದಿದೆ. ಬುಧವಾರ 3,146 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು 7,384 ಮಂದಿ ಗುಣಮುಖರಾಗಿದ್ದಾರೆ.

ಆದರೆ, ಇದೇ ದಿನ 55 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಸೋಂಕಿಗೆ ಸಿಲುಕಿ ಜೀವ ಕಳೆದುಕೊಂಡವರ ಒಟ್ಟಾರೆ ಸಂಖ್ಯೆ 11 ಸಾವಿರ ಸಾವಿರದ ಗಡಿ ದಾಟಿದೆ. ತನ್ಮೂಲಕ ಒಟ್ಟು ಸಾವಿನ ಸಂಖ್ಯೆಯಲ್ಲಿ ಕರುನಾಡು ದೇಶದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ದೇಶದಲ್ಲಿ ಅತಿ ಹೆಚ್ಚು ಮಹಾರಾಷ್ಟ್ರ (43,463 ಮಂದಿ)ದಲ್ಲಿ ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ತಮಿಳುನಾಡು (11,018) ಸಾವಿನೊಂದಿಗೆ ತೃತೀಯ ಸ್ಥಾನಕ್ಕೆ ಕುಸಿದಿದ್ದು, ರಾಜ್ಯವು (11,046) ಸಾವಿನೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. ರಾಜ್ಯದ ಮರಣ ದರ ಶೇ.1.36ರಷ್ಟಿದೆ.

ಕೊರೋನಾ ವಿರುದ್ಧ ಹೋರಾಟ: ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್‌ ಕಡ್ಡಾಯ..!

ಗುಣಮುಖರ ಸಂಖ್ಯೆ ಹೆಚ್ಚಳದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 68,161ಕ್ಕೆ ಕುಸಿದಿದ್ದರೆ ಒಟ್ಟು ಗುಣಮುಖರ ಸಂಖ್ಯೆ 7.33 ಲಕ್ಷಕ್ಕೆ ತಲುಪಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8.12 ಲಕ್ಷ ಮುಟ್ಟಿದೆ.

ಬುಧವಾರ 86,154 ಮಂದಿಯ ಪರೀಕ್ಷೆ ನಡೆಸಲಾಗಿದ್ದು ಪಾಸಿಟಿವಿಟಿ ದರ ಶೇ. 3.65ರಷ್ಟಿತ್ತು. ಈವರೆಗೆ 76 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರಲ್ಲೇ ಅಧಿಕ:  ಬೆಂಗಳೂರು ನಗರ ಜಿಲ್ಲೆಯಲ್ಲಿ 23, ಕಲಬುರಗಿ, ಬಳ್ಳಾರಿ, ದಕ್ಷಿಣ ಕನ್ನಡ 3, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಕೊಡಗು, ಕೋಲಾರ, ಮೈಸೂರು, ರಾಮನಗರ ತಲಾ 2, ತುಮಕೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ವಿಜಯಪುರ, ರಾಯಚೂರು, ದಾವಣಗೆರೆ, ಚಾಮರಾಜನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಅಸುನೀಗಿದ್ದಾರೆ.

ಬೆಂಗಳೂರು ನಗರದಲ್ಲಿ 1,612 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ. ಉಳಿದಂತೆ ಬಾಗಲಕೋಟೆ 26, ಬಳ್ಳಾರಿ 69, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 61, ಬೀದರ್‌ 8, ಚಾಮರಾಜ ನಗರ 28, ಚಿಕ್ಕಬಳ್ಳಾಪುರ 69, ಚಿಕ್ಕಮಗಳೂರು 56, ಚಿತ್ರದುರ್ಗ 70, ದಕ್ಷಿಣ ಕನ್ನಡ 99, ದಾವಣಗೆರೆ 60, ಧಾರವಾಡ 14, ಗದಗ 22, ಹಾಸನ 127, ಹಾವೇರಿ 17, ಕಲಬುರಗಿ 29, ಕೊಡಗು 15, ಕೋಲಾರ 74, ಕೊಪ್ಪಳ 11, ಮಂಡ್ಯ 79, ಮೈಸೂರು 169, ರಾಯಚೂರು 31, ರಾಮನಗರ 17, ಶಿವಮೊಗ್ಗ 67, ತುಮಕೂರು 129, ಉಡುಪಿ 65, ಉತ್ತರ ಕನ್ನಡ 31, ವಿಜಯಪುರ 37, ಯಾದಗಿರಿ ಜಿಲ್ಲೆಯಲ್ಲಿ 13 ಹೊಸ ಪ್ರಕರಣಗಳು ವರದಿಯಾಗಿವೆ.

click me!