ಅತಿ ಹೆಚ್ಚು ಅಸೆಂಬ್ಲಿ ಕಲಾಪ: ಕರ್ನಾಟಕ ದೇಶದಲ್ಲೇ ನಂ.1..!

Published : Jun 02, 2023, 05:58 AM IST
ಅತಿ ಹೆಚ್ಚು ಅಸೆಂಬ್ಲಿ ಕಲಾಪ: ಕರ್ನಾಟಕ ದೇಶದಲ್ಲೇ ನಂ.1..!

ಸಾರಾಂಶ

2022ರಲ್ಲಿ ಅಂಗೀಕರಿಸಲಾದ 322 ಮಸೂದೆಗಳ ಪೈಕಿ ಶೇ.56ರಷ್ಟಕ್ಕೆ ಮಂಡನೆಯಾದ ಮರುದಿನವೇ ಅಂಗೀಕಾರ ನೀಡಲಾಗಿದೆ. ಕರ್ನಾಟಕ, ಕೇರಳ, ಮೇಘಾಲಯ, ರಾಜಸ್ಥಾನಗಳಲ್ಲಿ ಮಾತ್ರ ಒಂದು ಮಸೂದೆಗೆ ಒಪ್ಪಿಗೆ ನೀಡಲು ಸರಾಸರಿ 5 ದಿನ ತೆಗೆದುಕೊಳ್ಳಲಾಗಿದೆ. 

ನವದೆಹಲಿ(ಜೂ.02):  2022ರಲ್ಲಿ ಅತಿ ಹೆಚ್ಚು ದಿನ ವಿಧಾನಸಭೆ ಕಲಾಪ ನಡೆಸಿದ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ. ಮತ್ತೊಂದೆಡೆ, ಬಜೆಟ್‌ ಮೇಲಿನ ಚರ್ಚೆಗೆ ಹೆಚ್ಚು ಅವಕಾಶ ಮಾಡಿಕೊಟ್ಟದೇಶದ ಎರಡನೇ ರಾಜ್ಯವಾಗಿಯೂ ಕರುನಾಡು ಹೊರಹೊಮ್ಮಿದೆ.

ದೇಶದ ವಿವಿಧ ವಿಧಾನಸಭೆಗಳ ಕಲಾಪ ಕುರಿತಂತೆ ಚಿಂತನಾ ಸಂಸ್ಥೆಯಾಗಿರುವ ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರೀಸರ್ಚ್‌ ಸಂಸ್ಥೆ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ. 2022ನೇ ವರ್ಷದಲ್ಲಿ ದೇಶಾದ್ಯಂತ ಸರಾಸರಿ ಕೇವಲ 21 ದಿನಗಳು ಮಾತ್ರ ವಿಧಾನಸಭೆ ಕಲಾಪ ನಡೆದಿದೆ. ಆದರೆ ಕರ್ನಾಟಕದಲ್ಲಿ 45 ದಿನ ಕಲಾಪ ನಡೆದಿದೆ. ಪಶ್ಚಿಮ ಬಂಗಾಳ (42 ದಿನ) ಹಾಗೂ ಕೇರಳ (41 ದಿನ) ನಂತರದ ಸ್ಥಾನದಲ್ಲಿ ಇವೆ.
2022ರಲ್ಲಿ ಬಜೆಟ್‌ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ 26 ದಿನಗಳ ಕಾಲ ಚರ್ಚೆ ನಡೆದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, 15 ದಿನ ಚರ್ಚೆಯಾಗಿದೆ. ಬಳಿಕದ ಸ್ಥಾನದಲ್ಲಿ ಕೇರಳ (14 ದಿನ) ಹಾಗೂ ಒಡಿಶಾ (14 ದಿನ)ಗಳು ಇವೆ ಎಂದು ವರದಿ ವಿವರಿಸಿದೆ.

ಸರ್ಕಾರದಿಂದ ಗುಡ್‌ನ್ಯೂಸ್‌: ಭದ್ರಾವತಿ ವಿಶ್ವೇಶ್ವರಯ್ಯ ಕಾರ್ಖಾನೆ VISL ಉಳಿಸಲು ನಿರ್ಣಯ

ಇದೇ ವೇಳೆ, ವಿಧಾನಸಭೆ ಕಲಾಪಗಳ ಅವಧಿ ಕುಸಿಯುತ್ತಿರುವುದನ್ನು ವರದಿ ಎತ್ತಿ ತೋರಿಸಿದೆ. 2016ರಲ್ಲಿ ವಿಧಾನಸಭೆಗಳು ಸರಾಸರಿ 31 ದಿನ ಕಲಾಪ ನಡೆಸಿದ್ದರೆ, ಅದು ಈಗ 21 ದಿನಕ್ಕೆ ಕುಸಿದಿದೆ. 2016ರಿಂದ 2022ರ ನಡುವಣ ಅವಧಿಯಲ್ಲಿ ವಿಧಾನಸಭೆಗಳು ಸರಾಸರಿ 25 ದಿನ ಕಲಾಪ ನಡೆಸಿವೆ. 48 ದಿನ ಕಲಾಪ ನಡೆಸಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಒಡಿಶಾ (41 ದಿನ) ಹಾಗೂ ಕರ್ನಾಟಕ (35 ದಿನ) ನಂತರದ ಸ್ಥಾನದಲ್ಲಿವೆ ಎಂದು ತಿಳಿಸಿದೆ.

ಪ್ರತಿ ವಿಧಾನಸಭೆಯಲ್ಲೂ ವರ್ಷಕ್ಕೆ 2 ಅಥವಾ 3 ಬಾರಿ ಅಧಿವೇಶನಗಳು ನಡೆಯುತ್ತವೆ. ಈ ಪೈಕಿ ಬಜೆಟ್‌ ಅಧಿವೇಶನ ಸುದೀರ್ಘವಾಗಿರುತ್ತದೆ. ನಂತರ ಮುಂಗಾರು ಹಾಗೂ ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಈಶಾನ್ಯದ 5 ರಾಜ್ಯಗಳು ಸೇರಿ 12 ರಾಜ್ಯಗಳಲ್ಲಿ 2022ರಲ್ಲಿ ಎರಡೇ ಅಧಿವೇಶನ ನಡೆದಿವೆ. ವಿಧಾನಸಭೆಯ ಒಟ್ಟಾರೆ ಕಲಾಪದಲ್ಲಿ ದೇಶದಲ್ಲಿ ಸರಾಸರಿ ಶೇ.61ರಷ್ಟುಬಜೆಟ್‌ ಅಧಿವೇಶನದ್ದೇ ಇದೆ. ಆದರೆ ತಮಿಳುನಾಡಿನಲ್ಲಿ ಶೇ.90ರಷ್ಟುಕಲಾಪವನ್ನು ಬಜೆಟ್‌ ಅಧಿವೇಶನದಲ್ಲಿಯೇ ನಡೆಸಲಾಗಿದೆ. ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಈ ಪ್ರಮಾಣ ಶೇ.80ರಷ್ಟಿದೆ ಎಂದು ಹೇಳಿದೆ.

ಬಜೆಟ್‌ ಮೇಲಿನ ಚರ್ಚೆ ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ದಿನ ನಡೆದಿದೆ. ಆದರೆ ದೆಹಲಿ, ಮಧ್ಯಪ್ರದೇಶ, ಪಂಜಾಬ್‌ನಲ್ಲಿ ಕೇವಲ 2 ದಿನ ಜರುಗಿದೆ. ನಾಗಾಲ್ಯಾಂಡ್‌ನಲ್ಲಿ ಬಜೆಟ್‌ ಮಂಡಿಸಿದ ದಿನವೇ ಅಂಗೀಕರಿಸಲಾಗಿದೆ ಎಂದು ವರದಿ ವಿವರಿಸಿದೆ.

ವಿಧಾನಸಭೆ: ಆಟೋ ಚಾಲಕರಿಗೆ ನಿಗಮ ಸ್ಥಾಪಿಸಿ: ಜಗದೀಶ್ ಶೆಟ್ಟರ್‌

2022ರಲ್ಲಿ ಅಂಗೀಕರಿಸಲಾದ 322 ಮಸೂದೆಗಳ ಪೈಕಿ ಶೇ.56ರಷ್ಟಕ್ಕೆ ಮಂಡನೆಯಾದ ಮರುದಿನವೇ ಅಂಗೀಕಾರ ನೀಡಲಾಗಿದೆ. ಕರ್ನಾಟಕ, ಕೇರಳ, ಮೇಘಾಲಯ, ರಾಜಸ್ಥಾನಗಳಲ್ಲಿ ಮಾತ್ರ ಒಂದು ಮಸೂದೆಗೆ ಒಪ್ಪಿಗೆ ನೀಡಲು ಸರಾಸರಿ 5 ದಿನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿ ವಿಧಾನಸಭೆ ಕಲಾಪ ಅವಧಿ ಕುಸಿತ

ದೇಶದಲ್ಲಿ ವಿಧಾನಸಭೆ ಕಲಾಪಗಳ ಅವಧಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2016ರಲ್ಲಿ ವಿಧಾನಸಭೆಗಳು ಸರಾಸರಿ 31 ದಿನ ಕಲಾಪ ನಡೆಸಿದ್ದರೆ, ಅದು ಈಗ 21 ದಿನಕ್ಕೆ ಕುಸಿದಿದೆ. 2016ರಿಂದ 2022ರ ನಡುವಣ ಅವಧಿಯಲ್ಲಿ ವಿಧಾನಸಭೆಗಳು ಸರಾಸರಿ 25 ದಿನ ಕಲಾಪ ನಡೆಸಿವೆ. 48 ದಿನ ಕಲಾಪ ನಡೆಸಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಒಡಿಶಾ (41 ದಿನ) ಹಾಗೂ ಕರ್ನಾಟಕ (35 ದಿನ) ನಂತರದ ಸ್ಥಾನದಲ್ಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ