ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಹಾಗೂ ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಮತ್ತು ಡಿ.ಕೆ.ಶಿವಕುಮಾರ್ ನಂಟಿದೆ ಎಂಬುದನ್ನು ನಿರೂಪಿಸಲು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಹರಡಿದ ವ್ಯಕ್ತಿ ಜತೆ ನನಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದ ಆರೋಪದ ಪ್ರಕರಣದ 2ನೇ ಆರೋಪಿ ಕಾರ್ತಿಕ್ ಜತೆಗೆ ಹಾಲಿ ಮುಖ್ಯಮಂತ್ರಿ ಸಂಬಂಧ ಹೊಂದಿದ್ದಾರೆ. ಶಿವಕುಮಾರ್ ಮನೆಗೆ ಕಾರ್ತಿಕ್ ಬಂದಿರುವ ಕುರಿತು ನನ್ನ ಬಳಿ ಸಿಡಿಆರ್ ದಾಖಲೆ ಇದೆ. ಅಶ್ಲೀಲ ವಿಡಿಯೋ ಹಂಚಿದ ಪ್ರಕರಣದಲ್ಲಿ ಈ ಇಬ್ಬರೂ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ನನ್ನ ವಿರುದ್ಧ ಆರೋಪ ಮಾಡುವ ಮುಖ್ಯಮಂತ್ರಿಗಳು ತಾವು ಎಸಗಿರುವ ಅಕ್ರಮದ ಬಗ್ಗೆ ಏನು ಹೇಳುತ್ತಾರೆ? ಅದರ ಬಗ್ಗೆ ನಾನು ನೇರವಾಗಿ ಜನರಿಗೆ ಹೇಳಿದ್ದೇನೆ. ಈ ವ್ಯಕ್ತಿ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
11:40 AM (IST) Nov 03
11:05 AM (IST) Nov 03
ಮದ್ದೂರು ತಾಲೂಕಿನ ಶಿಂಷಾ ನದಿ ಬಲ ದಂಡೆ ನಾಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಎಡದಂಡೆ ನಾಲೆಗೆ ಎಸ್.ಎಂ.ಕೃಷ್ಣ ಅವರ ಹೆಸರಿಡಲು ಕಾವೇರಿ ನೀರಾವರಿ ನಿಗಮ ನಿರ್ಣಯಿಸಿದೆ. ಶಾಸಕರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಚಿವ ಎನ್.ಚಲುವರಾಯಸ್ವಾಮಿ ಶೀಘ್ರವೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
11:04 AM (IST) Nov 03
ಆಯುಷ್ ಉಪೇಂದ್ರ ನಟನೆಯ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗಾಗಲೇ 40% ಶೂಟಿಂಗ್ ಕೂಡ ಮುಗಿದಿದೆ. ಕಾಶ್ಮೀರ, ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದ ನಿರ್ದೇಶಕರಿಗೆ ಬರಸಿಡಿಲು ಬಡಿದಂತೆ ಅವರನ್ನು ಬದಲಾಯಿಸಿರುವ ಸುದ್ದಿ ಸಿಕ್ಕಿದೆ ಎನ್ನಲಾಗಿದೆ. ಏನಿದು ವಿವಾದ? ನೋಡಿ..
10:58 AM (IST) Nov 03
ಬೆಂಗಳೂರಿನ ಜೆ.ಬಿ. ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ಮೂವರು ಒತ್ತುವರಿದಾರರಿಗೆ ಪಾಲಿಕೆ ಅಧಿಕಾರಿಗಳು ₹25,000 ದಂಡ ವಿಧಿಸಿದ್ದಾರೆ. ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಸಿದ್ದಾರೆ.
10:55 AM (IST) Nov 03
10:48 AM (IST) Nov 03
ಶಿವಮೊಗ್ಗದ ಶಿಕಾರಿಪುರದಲ್ಲಿ ಹರಿಯುವ ನೀರಿನ ಕಾಲುವೆ ಮೇಲೆ ಬೃಹತ್ ಡೆಕ್ ಅಳವಡಿಸಿ 10 ಎಕರೆ ವಿಸ್ತೀರ್ಣದ ಸುಸಜ್ಜಿತ ಸಂತೆ ಮೈದಾನ ನಿರ್ಮಿಸಲಾಗಿದೆ. ಇದರೊಂದಿಗೆ ರೈತರ ಅನುಕೂಲಕ್ಕಾಗಿ 15 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಕೂಡ ತಲೆಎತ್ತಿದೆ. ಇದು ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆಯಾಗಿದ್ದು, ರಾಜ್ಯದಲ್ಲೇ ಮೊದಲ ಮಾದರಿಯಾಗಿದೆ.
10:22 AM (IST) Nov 03
ದಕ್ಷಿಣ ಕನ್ನಡದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೋಪುರವನ್ನು ಹೆದ್ದಾರಿ ಕಾಮಗಾರಿಗಾಗಿ ನೆಲಸಮ ಮಾಡದೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹೈಡ್ರಾಲಿಕ್ ಜಾಕ್ ತಂತ್ರಜ್ಞಾನ ಬಳಸಿ 7 ತಿಂಗಳ ಸತತ ಪ್ರಯತ್ನದಿಂದ ಈ ಬೃಹತ್ ಗೋಪುರವನ್ನು ಹೊಸ ಅಡಿಪಾಯಕ್ಕೆ ಯಶಸ್ವಿಯಾಗಿ ಸೇರಿಸಲಾಗಿದೆ.
10:11 AM (IST) Nov 03
10:02 AM (IST) Nov 03
10:01 AM (IST) Nov 03
ಬೆಂಗಳೂರಿನ ಇಂದಿರಾನಗರದಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ, ಯುವತಿಯ ಕೈಗಳಿಗೆ ಫೆವಿಕ್ವಿಕ್ ಹಾಕಿ ಅಂಟಿಸಿ ಚಿನ್ನದ ಸರ ದೋಚಿದ್ದಾನೆ. ಯುವತಿ ಕೂಗಿಕೊಳ್ಳುತ್ತಿದ್ದಂತೆ ಜನರು ಸೇರಿದ್ದು, ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯುವತಿಯ ಕುತ್ತಿಗೆಗೆ ಚಾ*ಕು ಇಟ್ಟು ಬೆದರಿಸಿದ್ದಾನೆ. ಮುಂದೇನಾಯ್ತು ನೋಡಿ.
09:02 AM (IST) Nov 03
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ 1.42 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸಿದ್ಧತೆ ನಡೆದಿದೆ. ಕಳೆದ 4 ತಿಂಗಳುಗಳಿಂದ ನಡೆದ ಸಮೀಕ್ಷೆಯಲ್ಲಿ ದಾಖಲೆ ಒದಗಿಸದ ಹಾಗೂ ಅಸಹಕಾರ ತೋರಿದವರನ್ನು ಅನರ್ಹರೆಂದು ಪರಿಗಣಿಸುವ ಸಾಧ್ಯತೆಯಿದೆ. ಶೀಘ್ರದಲ್ಲೇ ಇಂಧನ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ.
08:27 AM (IST) Nov 03
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ದೂರಿನ ಮೇರೆಗೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
08:11 AM (IST) Nov 03
ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಕೆಎಂಎಫ್, ಸಾರ್ವಜನಿಕರ ಆಕ್ರೋಶದ ನಂತರ ಮೊಸರಿನ ದರವನ್ನು ಇಳಿಕೆ ಮಾಡಿದೆ. ಸರ್ಕಾರದ ಸೂಚನೆಯ ಮೇರೆಗೆ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ ₹2 ಕಡಿತಗೊಳಿಸಲು ನಿರ್ಧರಿಸಲಾಗಿದೆ. ಈ ಪರಿಷ್ಕೃತ ಹೊಸ ದರವು ನಾಳೆಯಿಂದಲೇ ಜಾರಿಗೆ ಬರಲಿದೆ.
08:00 AM (IST) Nov 03
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಷರತ್ತುಬದ್ಧ ಜಾಮೀನು ನೀಡಲಾಗಿದ್ದು, ಸೈಬರ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.
07:45 AM (IST) Nov 03
ಲಾಳಗೊಂಡ ಸಮುದಾಯದ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಯಲಾಟಗಳ ಮೂಲಕ ಸಂರಕ್ಷಿಸಬೇಕು ಎಂದು ಡಾ.ಕೆ.ಎಂ.ಮೇತ್ರಿ ಕಂಪ್ಲಿಯಲ್ಲಿ ತಿಳಿಸಿದರು. ಕುರುಗೋಡು ನೀಲಮ್ಮನ ಹೆಸರಿನಲ್ಲಿರುವ 800 ಮಠಗಳು ಹಾಗೂ ಲಾಳಗೊಂಡೇಶ್ವರರ ಚರಿತ್ರೆಯನ್ನು ಸಂಶೋಧಿಸಿ ಪುಸ್ತಕ ರೂಪದಲ್ಲಿ ಹೊರತರಲು ಶ್ರೀ ನಿಜಾನಂದ ಮಹಾಸ್ವಾಮೀಜಿ ಭರವಸೆ ನೀಡಿದರು.
07:38 AM (IST) Nov 03
ಬೆಂಗಳೂರಿನ ಜಿಕೆವಿಕೆಯಲ್ಲಿ ನವೆಂಬರ್ 13ರಂದು ನಡೆಯಲಿರುವ ಕೃಷಿ ಮೇಳದಲ್ಲಿ ಮೂರು ಹೊಸ ಬೆಳೆ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಬರ ಸಹಿಷ್ಣು ಜಿಪಿಯು 101 ರಾಗಿ, ಹೆಚ್ಚು ಪ್ರೋಟೀನ್ ಇರುವ ಕೆಬಿಜೆಎ 18 ಬೀಜದ ದಂಟು ಮತ್ತು ಬಹುಪಯೋಗಿ ಎಂಎಎಚ್ 20-45 ಮುಸುಕಿನ ಜೋಳವನ್ನು ರೈತರಿಗಾಗಿ ಪರಿಚಯಿಸಲಾಗುತ್ತಿದೆ.
07:14 AM (IST) Nov 03
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದ್ದು, ಇನ್ನೆರಡು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಲ್ಲದೆ, ಕೆಪಿಎಸ್‌ಸಿ ಪ್ರಕರಣದಲ್ಲಿ ಇ.ಡಿ ಬಳಸಿ ತಮ್ಮನ್ನು ಸಿಲುಕಿಸಲುಯತ್ನ ಖರ್ಗೆ ಆರೋಪ.
07:09 AM (IST) Nov 03
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿದ ಆರೋಪಿ ಕಾರ್ತಿಕ್ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ನಡುವೆ ನೇರ ಸಂಪರ್ಕವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಬಳಿ ಸಿಡಿಆರ್ ದಾಖಲೆಗಳಿದ್ದು, ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ನಾಯಕರು ಈ ಷಡ್ಯಂತ್ರ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.