ಬೆಂಗಳೂರು (ಮೇ.09): ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿಗಣತಿ) ವಿಚಾರವಾಗಿ ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ. ಜಾತಿಗಣತಿ ವರದಿ ಕುರಿತು ಸಚಿವ ಸಂಪುಟ ಸಭೆ ಯಾವ ನಿರ್ಧಾರ ಮಾಡಲಿದೆ ಎಂಬ ಬಗ್ಗೆ ಇದೀಗ ತೀವ್ರ ಕುತೂಹಲ ಮೂಡಿದೆ. ಏ.17 ರಂದು ನಡೆದ ಜಾತಿಗಣತಿ ವರದಿ ಕುರಿತು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

09:15 PM (IST) May 09
ಇಂದು ನಟ ವಿಜಯ ದೇವರಕೊಂಡ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಉಚಿತ ಐಸ್ಕ್ರೀಮ್ ಹಂಚುವ ಯೋಜನೆ ಜಾರಿಗೊಳಿಸಿದ್ದಾರೆ. ಏನಿದರ ವಿಶೇಷತೆ?
ಪೂರ್ತಿ ಓದಿ08:29 PM (IST) May 09
ಭಾರತೀಯ ಚಿತ್ರರಂಗದಲ್ಲಿ ಕೆಲವರು ಪ್ರಕಾಶಮಾನವಾಗಿ ಹೊಳೆಯುತ್ತಾರೆ, ಇನ್ನು ಕೆಲವರು ಯಶಸ್ಸು ಸಾಧಿಸಲಾಗದೆ ಮರೆಯಾಗುತ್ತಾರೆ. ಈಗ ಬೆಂಗಳೂರಿನ ಮೂಲದ ವ್ಯಕ್ತಿ ಏಷಿಯಾದ ದುಬಾರಿ ನಟ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಪೂರ್ತಿ ಓದಿ07:17 PM (IST) May 09
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭರ್ಜರಿ ಬ್ಯಾಚುಲರ್ಸ್ ಟೀಂ ಈಗ ಹಳ್ಳಿ ಸೇರಿದೆ. ಸಿದ್ದಿ ಜೀವನದ ಅನುಭವ ಪಡೆದ ಸ್ಪರ್ಧಿಗಳ, ಹಳ್ಳಿ ಜೀವನ ಎಂಜಾಯ್ ಮಾಡ್ತಿದ್ದಾರೆ.
12:49 PM (IST) May 09
Kannada Movie: ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳನ್ನು ಚಿತ್ರಿಸುವ ಯು ಟರ್ನ್ ಚಿತ್ರವು, 2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 10.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಫ್ಲೈಓವರ್ ಮೇಲೆ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸುವುದರಿಂದ ಉಂಟಾಗುವ ಅಪಾಯಗಳನ್ನು ಮತ್ತು ತಾಯಿ-ಮಗುವಿನ ಸಾವಿಗೆ ಕಾರಣರಾದವರನ್ನು ಹುಡುಕುವ ಕಥೆಯನ್ನು ಹೊಂದಿದೆ.
ಪೂರ್ತಿ ಓದಿ12:30 PM (IST) May 09
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯಲ್ಲಿ ಭಾವುಕರಾದ ಚೈತ್ರಾ, ದೇವರ ಪ್ರಾರ್ಥನೆಯೊಂದಿಗೆ ತಾಳಿ ಕಟ್ಟಿಸಿಕೊಂಡರು.
ಪೂರ್ತಿ ಓದಿ11:27 AM (IST) May 09
ಭಾರತ-ಪಾಕಿಸ್ತಾನ ಯುದ್ಧದ ನಡುವೆ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆ ಏರಿಕೆ ಕಂಡ ಚಿನ್ನದ ದರ ಇಂದು ತುಸು ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಪೂರ್ತಿ ಓದಿ