ಬಿಜೆಪಿ ಪಕ್ಷದಿಂದ ಉಚ್ಚಾಟಿತಗೊಂಡಿರುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದಿನ ನಡೆ ಏನು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹೊಸ ಪಕ್ಷ ಕಟ್ಟುವ, ಬೇರೆ ಪಕ್ಷ ಸೇರ್ಪಡೆಗೊಳ್ಳುವ ಕುರಿತು ಪ್ರಶ್ನೆಗೆ ಯತ್ನಾಳ್ ಉತ್ತರಿಸಿದ್ದಾರೆ. ಬಲಿಷ್ಠ ಶಕ್ತಿಯಾಗಿ ಬಿಜೆಪಿಗೆ ಮತ್ತೆ ವಾಪಸ್ ಬರುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಹಿಂದೂ ಪರ ಹೋರಾಟ ಮಾಡುವ ಒಬ್ಬನೇ ಒಬ್ಬ ನಾಯಕ ಕರ್ನಾಟಕ ಬಿಜೆಪಿಯಲ್ಲಿ ಇಲ್ಲ. ಈ ಉಚ್ಚಾಟನೆ ಎಲ್ಲಾ ಒಂದಷ್ಟು ತಿಂಗಳು ಮಾತ್ರ ಎಂದು ಯತ್ನಾಳ್ ಹೇಳಿದ್ದಾರೆ. ಇನ್ನು ಕರ್ನಾಟಕ ಮುಸ್ಲಿಮ್ ಮೀಸಲಾತಿಗೆ ಕೇಂದ್ರ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ. ಕರ್ನಾಟಕದ ರಾಜಕೀಯ ಬೆಳವಣಿಗೆ ಸೇರಿದಂತೆ ಇಂದಿನ ಪ್ರತಿಕ್ಷಣದ ಅಪ್‌ಡೇಟ್ ಇಲ್ಲಿದೆ.

11:36 PM (IST) Mar 30
ಪತ್ತನಂತಿಟ್ಟದಲ್ಲಿ 85 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 12 ದಿನಗಳಲ್ಲಿ ನ್ಯಾಯಾಲಯದ ತೀರ್ಪು ಬಂದಿದೆ. ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪೂರ್ತಿ ಓದಿ10:36 PM (IST) Mar 30
ಹೆಂಡತಿಯ ಮೇಲೆ ಹಲ್ಲೆ ಮಾಡಿದ ನಂತರ ಅವಳಿ ಮಕ್ಕಳನ್ನು ನೆಲಕ್ಕೆ ಬಡಿದು ಕೊಂಡಿದ್ದಾನೆ. ಮಂಚದಿಂದ ಬಿದ್ದು ಗಾಯಗಳಾಗಿವೆ ಎಂದು ಆಸ್ಪತ್ರೆಗೆ ಕರೆತಂದಾಗ ಮಕ್ಕಳು ಸಾವು ಕಂಡಿರುವುದು ಗೊತ್ತಾಗಿದೆ.
ಪೂರ್ತಿ ಓದಿ08:45 PM (IST) Mar 30
ಬೆಂಗಳೂರು ನಗರ ಜಿಲ್ಲಾಡಳಿತವು 18.85 ಕೋಟಿ ರೂ. ಮೌಲ್ಯದ 8 ಎಕರೆ 0.27 ಗುಂಟೆ ಒತ್ತುವರಿ ಜಮೀನನ್ನು ವಶಪಡಿಸಿಕೊಂಡಿದೆ. ವಿವಿಧ ತಾಲ್ಲೂಕುಗಳಲ್ಲಿ ಗೋಮಾಳ, ಸ್ಮಶಾನ, ಕುಂಟೆ ಸೇರಿದಂತೆ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲಾಗಿದೆ.
ಪೂರ್ತಿ ಓದಿ08:12 PM (IST) Mar 30
ಈ ಆಫರ್ ಸೀಮಿತ ಅವಧಿಗೆ ಮಾತ್ರ. 2025 ಮಾರ್ಚ್ 31 ರವರೆಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ. ಅಂದರೆ ನಾಳೆ ಮಾತ್ರ.
ಪೂರ್ತಿ ಓದಿ07:55 PM (IST) Mar 30
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಯುಗಾದಿ ಹಬ್ಬದಂದು ಮುಂಬೈ ಹೋಟೆಲ್‌ನಲ್ಲಿ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ. ಈ ಹಿಂದೆ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮೌನವಹಿಸಿದ್ದಾರೆ.
ಪೂರ್ತಿ ಓದಿ07:53 PM (IST) Mar 30
ದಿನೇಶ್ ಕಾರ್ತಿಕ್ ಅವರ ಬೆಂಗಳೂರಿನ ಓಡಾಟ ಹಲವರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಅದೂ ಕೂಡ ಒಂದೇ ರಸ್ತೆಯಲ್ಲಿ, ಒಂದೇ ಕೆಫೆಗೆ ಪದೇಪದೇ ಬರುತ್ತಿದ್ದಾರೆ ದಿನೇಶ್ ಕಾರ್ತಿಕ್. ಅವರ ಹಲವು ಅಭಿಮಾನಿಗಳು ಇದೀಗ ಆ ಕೆಫೆಯ ಬಳಿ ..
ಪೂರ್ತಿ ಓದಿ07:32 PM (IST) Mar 30
ಇಮಾಮುದ್ದೀನ್ ಎಂಬ ವ್ಯಕ್ತಿಯ ಪತ್ನಿ ಗುಡಿಯಾ, ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ತನ್ನ 14 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಇನ್ನೊಂದು ವಿಡಿಯೋದಲ್ಲಿ ಆಕೆ ತಾನು 9 ಮಕ್ಕಳ ತಾಯಿ ಎಂದು ಹೇಳಿದ್ದಾಳೆ.
ಪೂರ್ತಿ ಓದಿ07:03 PM (IST) Mar 30
ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರಕ್ಕೆ ಆಗಮಿಸಿ ಯುಗಾದಿ ಹಬ್ಬ ಆಚರಿಸಿದ್ದಾರೆ. ಕಾರ್ಯಕರ್ತರಿಗೆ ಸಂಕಲ್ಪ ಪತ್ರ ಬರೆದು, ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿ06:58 PM (IST) Mar 30
2023-24ರಲ್ಲಿ 2.16 ಕೋಟಿ ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದಾರೆ. ಅವರಿಂದ 562.40 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಟಿಕೆಟ್ ರಹಿತ ಪ್ರಯಾಣ ತಡೆಯಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪೂರ್ತಿ ಓದಿ05:45 PM (IST) Mar 30
ಕಲ್ಯಾಣ ಕರ್ನಾಟಕದ ರೈತರಿಗೆ ಸಿಎಂ ಸಿದ್ದರಾಮಯ್ಯ ಯುಗಾದಿ ಕೊಡುಗೆ ನೀಡಿದ್ದಾರೆ. ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.
ಪೂರ್ತಿ ಓದಿ05:23 PM (IST) Mar 30
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಬೆಂಗಳೂರು-ಕಾಮಾಕ್ಯ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 25 ಜನರು ಗಾಯಗೊಂಡಿದ್ದಾರೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ.
ಪೂರ್ತಿ ಓದಿ04:58 PM (IST) Mar 30
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ. ಅಮೆರಿಕದ ಮಿಲಿಟರಿ ನೆರವನ್ನು ಸಾಲವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಪೂರ್ತಿ ಓದಿ04:39 PM (IST) Mar 30
ಬಿಇಎಂಎಲ್ ಲಿಮಿಟೆಡ್ ನಮ್ಮ ಮೆಟ್ರೋಗೆ ಏಳು ಹೆಚ್ಚುವರಿ ರೈಲು ಸೆಟ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಈ ಆರು ಬೋಗಿಗಳ ರೈಲು ಸೆಟ್‌ಗಳನ್ನು ಪಿಂಕ್ ಲೈನ್‌ನಲ್ಲಿ ನಿಯೋಜಿಸಲಾಗುತ್ತದೆ.
ಪೂರ್ತಿ ಓದಿ04:09 PM (IST) Mar 30
ಖಾಸಗಿ ಕಂಪನಿಯೊಂದು ತನ್ನ ನೌಕರನಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ನೌಕರನು ಸತ್ತರೆ, ಆತನ ಹೆಂಡತಿಗೆ 11 ವರ್ಷಗಳ ಕಾಲ ಸಂಬಳ ಮತ್ತು ಮಕ್ಕಳಿಗೆ 19 ವರ್ಷದವರೆಗೆ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡುತ್ತದೆ.
ಪೂರ್ತಿ ಓದಿ03:38 PM (IST) Mar 30
ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ಅವರ ಸಾವಿನ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದೆ. ಅವರ ವಿಲ್ಲಾದಿಂದ ಕಾಮಗ್ರಾ ಮಾತ್ರೆ ಬಾಟಲಿಯನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಪೂರ್ತಿ ಓದಿ03:35 PM (IST) Mar 30
Realme GT 6T ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇದರ ಮೂಲ ಬೆಲೆಗಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ. ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಯ್ಕೆಗಳೊಂದಿಗೆ, ಫೋನ್ ಅನ್ನು ಕಡಿಮೆ ಬೆಲೆಗೆ ಪಡೆಯಬಹುದು.
ಪೂರ್ತಿ ಓದಿ03:10 PM (IST) Mar 30
ಅಮೆರಿಕಾದಲ್ಲಿ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಭಾರತೀಯರ ಸಂಖ್ಯೆ ಟ್ರಂಪ್ ಸರ್ಕಾರದ ಕಠಿಣ ವಲಸೆ ನೀತಿಗಳಿಂದ ಕಡಿಮೆಯಾಗಿದೆ. ಗಡೀಪಾರು ಕ್ರಮಗಳು ಮತ್ತು ಕಳ್ಳಸಾಗಣೆದಾರರ ಹಿಂಜರಿಕೆಯಿಂದ ಪರಿಸ್ಥಿತಿ ಹದಗೆಟ್ಟಿದೆ.
ಪೂರ್ತಿ ಓದಿ02:42 PM (IST) Mar 30
ಮ್ಯಾನ್ಮಾರ್ ಭೂಕಂಪ: ಭಾರತದ ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪದ ಅನುಭವ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿಯೂ ಆಯಿತು. ಈ ಪ್ರದೇಶದಲ್ಲಿ ತಿಂಗಳುಗಳ ಕಾಲ ಆಫ್ಟರ್‌ಶಾಕ್‌ಗಳು ಸಂಭವಿಸುತ್ತವೆ ಎಂದು ವಿಜ್ಞಾನಿ ಫೀನಿಕ್ಸ್ ಹೇಳಿದ್ದಾರೆ.
ಪೂರ್ತಿ ಓದಿ02:36 PM (IST) Mar 30
ಸಾನಿಯಾ ಮಿರ್ಜಾ ಸಹೋದರಿ ಆಯೋಜಿಸಿದ ರಂಜಾನ್ ಎಕ್ಸ್‌ಪೋದಲ್ಲಿ ಗುಂಡಿನ ದಾಳಿಯಾಗಿದೆ. ಈ ಪೈಕಿ ಪೊಲೀಸರು ಓರ್ವನ ಬಂಧಿಸಿದ್ದಾರೆ.
ಪೂರ್ತಿ ಓದಿ01:41 PM (IST) Mar 30
ಮತ್ತೊಂದು ರೈಲು ಅವಘಡ ಸಂಭವಿಸಿದೆ. ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. 8 ಬೋಗಿಗಳು ಹಳಿ ತಪ್ಪಿದೆ.ಬೆಂಗಳೂರಿನಿಂದ ಹೊರಟ ಈ ರೈಲು ಚೌದ್ವಾರ್ ಬಳಿ ಅವಘಡ ಸಂಭವಿಸಿದೆ.
ಪೂರ್ತಿ ಓದಿ01:38 PM (IST) Mar 30
ಉತ್ತರ ಪ್ರದೇಶ ನದಿ ಜಲಮಾರ್ಗ ಅಭಿವೃದ್ಧಿ: ಉತ್ತರ ಪ್ರದೇಶದಲ್ಲಿ ಜಲ ಸಾರಿಗೆಗೆ ಸಿದ್ಧತೆ! 11 ನದಿಗಳಲ್ಲಿ ಜಲಮಾರ್ಗ ನಿರ್ಮಾಣ, ಮೊದಲ ಹಂತದಲ್ಲಿ 761 ಕಿಮೀ ಮಾರ್ಗ. ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಉತ್ತೇಜನ.
ಪೂರ್ತಿ ಓದಿ01:33 PM (IST) Mar 30
ಧಾರವಾಡದ ಗೊಂಬೆಗಳು ಈ ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಈ ಹಿಂದೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಾವಿನ ಬಗ್ಗೆ ನುಡಿದ ಭವಿಷ್ಯ ನಿಜವಾಗಿತ್ತು.
ಪೂರ್ತಿ ಓದಿ01:08 PM (IST) Mar 30
ಎದೆಹಾಲಿನ ಐಸ್‌ಕ್ರೀಮ್. ಶೀಘ್ರದಲ್ಲೇ ಹೊಸ ಐಸ್‌ಕ್ರೀಮ್ ಲಭ್ಯವಾಗುತ್ತಿದೆ. ಇದರ ರುಚಿ ಹೇಗಿರುತ್ತೆ? ಈ ಐಸ್‌ಕ್ರೀಮ್‌ನಲ್ಲಿರುವ ಪೌಷ್ಠಿಕಾಂಶಗಳೇನು? ಈ ಐಸ್‌ಕ್ರೀಮ್ ಕುರಿತು ನೆಟ್ಟಿಗರು ಕೇಳಿದ ಕುತೂಹಲದ ಪ್ರಶ್ನೆ ಏನು?
ಪೂರ್ತಿ ಓದಿ12:30 PM (IST) Mar 30
ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದುತ್ವದ ಆಧಾರದ ಮೇಲೆ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ. ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿ12:16 PM (IST) Mar 30
ನೀವು ಲ್ಯಾಪ್‌ಟಾಪ್ ಬಳಸುತ್ತಿದ್ದೀರಾ? ಕಾರಿನಲ್ಲಿ ಪ್ರಯಾಣಿಸುತ್ತೀರಾ? ನಿಮಗೆ ಗೊತ್ತಿಲ್ಲದಂತೆ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆ. ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆ ಹಲವರಿಗೆ ಬಾಧಿಸುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.
ಪೂರ್ತಿ ಓದಿ11:21 AM (IST) Mar 30
ಸಂಚಲನ ಮೂಡಿಸಿದ್ದ ‘ಜಡ್ಜ್ ಮನೆಗೆ ಬಾಗಿಲಲ್ಲ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶೆ ನ್ಯಾ। ನಿರ್ಮಲ್ ಯಾದವ್ ಖುಲಾಸೆಗೊಂಡಿದ್ದಾರೆ.
11:16 AM (IST) Mar 30
ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳಾದರೂ ಸಂಶೋಧನಾ ಚುಟವಟಿಕೆಗಳೇ ಶುರುವಾಗಿಲ್ಲ.
10:58 AM (IST) Mar 30
‘ಆರೋಗ್ಯಕರ ಬೆಂಗಳೂರು‘ ಯೋಜನೆಯಡಿ ಬಿಬಿಎಂಪಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವುದು, ಉಚಿತ ರೋಗ ಪತ್ತೆ, ದಂತ ಚಿಕಿತ್ಸೆ ಆರಂಭಿಸುವುದು ಸೇರಿದಂತೆ ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮುಂದಿನ ಎರಡು ವರ್ಷದಲ್ಲಿ 412 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
ಪೂರ್ತಿ ಓದಿ10:57 AM (IST) Mar 30
ಸಿಕಂದರ್ ಸಿನಿಮಾ ಅಬ್ಬರ ಒಂದೆಯಾದರೆ, ಮತ್ತೊಂದಡೆ ಹಿಂದೂ ವಿರೋಧಿ ಹಣೆಪಟ್ಟಿಯಿಂದ ವೇಗವಾಗಿ ಮುನ್ನುಗ್ಗುತ್ತಿದ್ದ ಎಲ್2 ಎಂಪುರಾನ್ ಸಿನಿಮಾಗೆ ಹಿನ್ನಡೆಯಾಗಿದೆ.
10:37 AM (IST) Mar 30
ಬೆಂಗಳೂರಿನ ಸುಗಮ ಸಂಚಾರಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಯ ಸಹಾಯದೊಂದಿಗೆ ಅಧ್ಯಯ ನಡೆಸಿ ಬರೋಬ್ಬರಿ ₹73,600 ಕೋಟಿ ಮೊತ್ತದ ಬೃಹತ್ ಗಾತ್ರದ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಿದೆ.
ಪೂರ್ತಿ ಓದಿ10:07 AM (IST) Mar 30
'ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಇನ್ನು ಮುಂದೆ ಪ್ರತಿ ವರ್ಷ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಾಗುವುದು' ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.
10:05 AM (IST) Mar 30
ಛತ್ತೀಸ್‌ಗಢದಲ್ಲಿ ಮತ್ತೆ ಭಾರಿ ಎನ್‌ಕೌಂಟರ್ ನಡೆದಿದೆ. ನಕ್ಸಲರ ವಿರುದ್ಧ ಕಾರ್ಯಾಚರಮೆ ಬಿಗಿಗೊಳಿಸಲಾಗಿದೆ. ಈ ದಾಳಿಯಲ್ಲಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಹತರಾದ 17 ನಕ್ಸಲರ ಪೈಕಿ 11 ಮಹಿಳೆಯರು.
ಪೂರ್ತಿ ಓದಿ09:35 AM (IST) Mar 30
ಸೆಮಿ-ಕ್ರಯೋಜೆನಿಕ್ ಎಂಜಿನ್ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ.
ಪೂರ್ತಿ ಓದಿ09:23 AM (IST) Mar 30
ಯುಗಾದಿಯ ದಿನದಂದು ಆರೆಸ್ಸೆಸ್ ಸಂಸ್ಥಾಪಕ ಡಾ। ಹೆಡಗೇವಾರರ ಜಯಂತಿ. ಅವರು ಸ್ಥಾಪಿಸಿದ ಆರೆಸ್ಸೆಸ್ ಶತಮಾನ ಪೂರೈಸುತ್ತಿರುವ ಸಂದರ್ಭದಲ್ಲಿ ಸಂಘದ ಸರಕಾರ್ಯವಾಹರ ವಿಶೇಷ ಲೇಖನ.
ಪೂರ್ತಿ ಓದಿ08:54 AM (IST) Mar 30
ಆಗ ನಡ್ಡಾ ಅವರು ಬಂದು ಪ್ರಭಾಕರ ಕೋರೆ ಅವರನ್ನು ‘ಕೈಸೇ ಹೈ ಕೋರೆ ಸಾಹಬ್’ ಎಂದು ಮಾತನಾಡಿಸಿದ್ದಾರೆ. ಆಗ ಅಲ್ಲೇ ಇದ್ದ ಯತ್ನಾಳರು ಮಾತನಾಡಿಸಲು ಬಂದಾಗ ನಡ್ಡಾ ಅವರು ನಮಸ್ಕಾರ ಎಂದು ಹೇಳಿ ಅಮಿತ್ ಶಾರತ್ತ ಕಣ್ಣು ತೋರಿಸಿದ್ದಾರೆ.
ಪೂರ್ತಿ ಓದಿ08:51 AM (IST) Mar 30
ಭೂಕಂಪನದಿಂದ ಬ್ಯಾಂಕಾಕ್, ಮ್ಯಾನ್ಮಾರ್‌ನಲ್ಲಿ ರಸ್ತೆಯೇ ಆಸ್ಪತ್ರಗಳಾಗಿದೆ. ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಘಟನೆಯೂ ನಡೆದಿದೆ. ರಸ್ತೆಯಲ್ಲೇ ಜನರಿಗೆ ಚಿಕಿತ್ಸೆ ನೀಡಲಾಗುತ್ತಿರುವ ದೃಶ್ಯ ಮನಕಲುಕುವಂತಿದೆ.
ಪೂರ್ತಿ ಓದಿ08:27 AM (IST) Mar 30
ಆರ್‌ಎಸ್ಎಸ್ ಪ್ರಧಾನ ಕಚೇರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ವಿಶೇಷ ಅಂದರೆ ಪ್ರಧಾನಿಯೊಬ್ಬರು ಸಂಘದ ಕಚೇರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಪೂರ್ತಿ ಓದಿ08:08 AM (IST) Mar 30
ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ಸಾಧಿಸಿ ಉಪಾಂತ್ಯಕ್ಕೆ ಕಾಲಿಟ್ಟಿದೆ. ಮುಂದಿನ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.
ಪೂರ್ತಿ ಓದಿ07:55 AM (IST) Mar 30
2024ರ ಐಪಿಎಲ್‌ನಲ್ಲಿ ಮಿಂಚಿದ ಸಾಯಿ ಸುದರ್ಶನ್, 2025ರ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ, 2027ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಪೂರ್ತಿ ಓದಿ