ಕಲಬುರಗಿ: ವಂದೇ ಮಾತರಂ ಕೇವಲ ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ರಣಮಂತ್ರವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಜೆನ್ ಜಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅವರು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಂದೇ ಮಾತರಂ ಘೋಷಣೆ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿತ್ತು. ಭಾರತ ಮಾತೆಗೆ ವಂದನೆ ಸಲ್ಲಿಸುವ ಭಾವನೆ ಈ ಗೀತೆಯಲ್ಲಿದ್ದು, ರಾಷ್ಟ್ರದ ಏಕತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ. ವಂದೇ ಮಾತರಂಗೆ ಹೆಚ್ಚಿನ ಗೌರವ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು.
08:07 AM (IST) Sep 30
ಮೈಸೂರು ಮಹಾರಾಜರು ನಿರ್ಮಿಸಿದ್ದ 102 ಎಕರೆ ಕೆರೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಅಕ್ರಮವಾಗಿ ನಿವೇಶನಗಳನ್ನು ಹಂಚಿದೆ. ಈ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
08:04 AM (IST) Sep 30
ತಮ್ಮ ಬಳಿ ಇರುವ 1,400 ಕೋಟಿ ರೂ. ಮೌಲ್ಯದ ಆಸ್ತಿ ಕಾನೂನುಬದ್ಧವಾಗಿ ಸಂಪಾದಿಸಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ನೈಸ್ ರಸ್ತೆ ಯೋಜನೆ ಮತ್ತು ಬಿಡದಿ ಟೌನ್‌ಶಿಪ್‌ನಲ್ಲಿ ಬಗ್ಗೆ ಧೈರ್ಯವಿದ್ದರೆ ವಿಧಾನಸಭೆಯೊಳಗೆ ಚರ್ಚೆಗೆ ಬರಲು ಸವಾಲ್
07:40 AM (IST) Sep 30
ಆಟೋ ಚಾಲಕ ಯಲ್ಲಪ್ಪ ಅವರ ಇಬ್ಬರು ಮಕ್ಕಳು ಎಂಬಿಬಿಎಸ್ ಸೀಟು ಪಡೆದು ಅಪರೂಪದ ಸಾಧನೆ ಮಾಡಿದ್ದಾರೆ. ಮಕ್ಕಳ ಈ ಸಾಧನೆಯಿಂದ ತಂದೆ-ತಾಯಿಗೆ ಅತೀವ ಸಂತೋಷವಾಗಿದ್ದರೂ, ವೈದ್ಯಕೀಯ ಶಿಕ್ಷಣದ ದುಬಾರಿ ಶುಲ್ಕದ ಹೊರೆ ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
07:32 AM (IST) Sep 30
Rani Abbakka history in NCERT ಹೊರತಂದಿರುವ 9ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳ ವೀರಗಾಥೆಯನ್ನು ಸೇರ್ಪಡೆಗೊಳಿಸಲಾಗಿದೆ. ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಅಬ್ಬಕ್ಕಳ ಸಾಹಸ ಹಾಗೂ ವಿಜಯನಗರದ ಕುಮಾರ ಕಂಪಣನ ಐತಿಹ್ಯವನ್ನು ಇದರಲ್ಲಿ ವಿವರಿಸಲಾಗಿದೆ.
07:31 AM (IST) Sep 30
07:18 AM (IST) Sep 30
07:04 AM (IST) Sep 30
07:02 AM (IST) Sep 30
ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಜನಜೀವನ, ಕೆಆರ್ ಮಾರ್ಕೆಟ್ ವ್ಯಾಪಾರ ಅಸ್ತವ್ಯಸ್ತಗೊಂಡಿತು. ಇನ್ನು ಬೆಳಗಿನ ಜಾವದಲ್ಲಿ ಮಳೆಯಿಂದ ಮುಸುಕಿನ ವಾತಾವರಣದಲ್ಲಿ ಖಾಸಗಿ ಬಸ್‌ಗೆ ಬಿಎಂಟಿಸಿ ಇವಿ ಬಸ್ ಟಚ್ ಆದ ಘಟನೆಯೂ ನಡೆದಿದೆ.
06:47 AM (IST) Sep 30
06:35 AM (IST) Sep 30
ಆಂಧ್ರಪ್ರದೇಶದ ಎಂಜಿನಿಯರ್ ಸಾಯಿ ಕುಮಾರ್ ಅವರು ವಿಶ್ವ ಪ್ರವಾಸೋದ್ಯಮ ದಿನದಂದು ಸೈಕಲ್ ಹೊತ್ತುಕೊಂಡು ತುಮಕೂರಿನ ಮಧುಗಿರಿ ಏಕಶಿಲಾ ಬೆಟ್ಟವನ್ನು ಏರುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಗ್ರಾಮೀಣ ಜೀವನ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಇವರು ಸೈಕ್ಲಿಂಗ್ ಚಾರಣವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.