LIVE NOW
Published : Oct 18, 2026, 06:52 AM ISTUpdated : Oct 18, 2026, 08:13 AM IST

Karnataka News Live: ಬರಗಾಲದಲ್ಲಿ ಜೀವಸೆಲೆಯಾದ ಸಿಂಗಟಾಲೂರು ಏತ ನೀರಾವರಿ ಯೋಜನೆ; 10 ಕೆರೆಗಳಿಗೆ ನೀರು!

ಸಾರಾಂಶ

ಮೈಸೂರು: ಕಾಂಗ್ರೆಸ್ಸಿನವರೇ ಸ್ಟಿಂಗ್ ವಿಚಾರದಲ್ಲಿ ಎಕ್ಸ್‌ಪರ್ಟ್. ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಅನ್ನೋದು ಎಲ್ಲರಿಗೂ ಗೊತ್ತು. ಇದು ಕಾಂಗ್ರೆಸ್ ಒಳಗಿನವರದೇ ಆಟಗಳು. ಇದನ್ನು ಯಾಕೆ ದಿನವೂ ಚರ್ಚೆ ಮಾಡುತ್ತೀರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು. 

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ದೂರು ಕೊಟ್ಟಿದ್ದಾರೆ. ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದಾರೆ. ಸರ್ಕಾರ ತನಿಖೆ ಮಾಡುತ್ತಿದೆ. ಅಲ್ಲಿಗೆ ಈ ವಿಚಾರ ಮುಗಿಸೋಣ ಎಂದರು. ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳು ಸ್ಟಿಂಗ್ ವಿಚಾರ ಇಟ್ಟುಕೊಂಡು ಪ್ರತಿದಿನ ಅವರ ಚಾರಿತ್ರ್ಯವಧೆ ಮಾಡುವುದು ಬೇಡ. ಸಿದ್ದರಾಮಯ್ಯ ಅವರ ಕೇಸ್ ಅನ್ನು ಡಿ.ಕೆ. ಶಿವಕುಮಾರ್ ಗಂಭೀರವಾಗಿ ಪರಿಗಣಿಸಿ ಸರಿಯಾದ ತನಿಖೆ ಮಾಡಿಸಲಿ. ಡಿಕೆಶಿ ವೇದಾಂತಿ ರೀತಿ ಮಾತಾಡುವುದು ಮಾತ್ರ ಕಲಿತಿಸಿದ್ದಾರೆ ಅಷ್ಟೇ ಎಂದು ಅವರು ಕಿಡಿಕಾರಿದರು.

08:13 AM (IST) Oct 18

ಬರಗಾಲದಲ್ಲಿ ಜೀವಸೆಲೆಯಾದ ಸಿಂಗಟಾಲೂರು ಏತ ನೀರಾವರಿ ಯೋಜನೆ; 10 ಕೆರೆಗಳಿಗೆ ನೀರು!

ಹೂವಿನಹಡಗಲಿ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ, ಪೈಪ್‌ಲೈನ್ ಕಳಪೆ ಕಾಮಗಾರಿ ಹಾಗೂ ರೈತರು ಅಕ್ರಮವಾಗಿ ನೀರು ಬಳಸುತ್ತಿರುವುದರಿಂದ ಕೆರೆಗಳಿಗೆ ನೀರು ಹರಿಸಲು ತೊಂದರೆಯಾಗುತ್ತಿದೆ.
Read Full Story

08:06 AM (IST) Oct 18

ಒಂದೇ ದಿನದಲ್ಲಿ ಭರ್ತಿಯಾಯ್ತು ಹದಿನಾರು ಗ್ರಾಮದ ಕೆರೆ; 3-4 ತಿಂಗಳಿಂದ ಬತ್ತಿದ್ದ ಕೆರೆ

ಮೈಸೂರಿನ ಹದಿನಾರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಬತ್ತಿ ಹೋಗಿದ್ದ ದೊಡ್ಡಕೆರೆ ಒಂದೇ ದಿನದಲ್ಲಿ ಭರ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು ಹಾಗೂ ನವಲಗುಂದದಲ್ಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಜನರಿಗೆ ಸೆಖೆಯಿಂದ ಮುಕ್ತಿ ಸಿಕ್ಕಿದೆ. ಇದರಿಂದ ರೈತರು ಹಾಗೂ ಸ್ಥಳೀಯರಲ್ಲಿ ಮಂದಹಾಸ ಮೂಡಿದೆ.
Read Full Story

07:52 AM (IST) Oct 18

ಗೂಗಲ್ ಮ್ಯಾಪ್ ನಂಬಿ ಆಸನೂರು ಅರಣ್ಯದಲ್ಲಿ ದಾರಿ ತಪ್ಪಿ ಕಾಡಾನೆಗಳ ಮಧ್ಯೆ ಸಿಲುಕಿದ ಟೆಕ್ಕಿಗಳು!

ಮೈಸೂರು ದಸರಾ ವೀಕ್ಷಿಸಿ ಚೆನ್ನೈಗೆ ಮರಳುತ್ತಿದ್ದ ೯ ಜನ ಟೆಕ್ಕಿಗಳು ಗೂಗಲ್ ಮ್ಯಾಪ್ ನಂಬಿ ಆಸನೂರು ಅರಣ್ಯದಲ್ಲಿ ದಾರಿ ತಪ್ಪಿದ್ದಾರೆ. ಅವರ ಕಾರು ಹಳ್ಳಕ್ಕೆ ಬಿದ್ದಿದ್ದು, ಕಾಡಾನೆಗಳ ಸದ್ದು ಕೇಳಿ ಭೀತರಾಗಿದ್ದರು. ಬಳಿಕ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಣೆ.

Read Full Story

07:44 AM (IST) Oct 18

Dharwad - ಅಪರೂಪದ ಬಾಂಬೆ ಬ್ಲಡ್‌ ದಾನ ಮಾಡಿ 3 ವರ್ಷದ ಕಂದನ ಪ್ರಾಣ ಉಳಿಸಿದ ರಕ್ಷಕ!

ಧಾರವಾಡದ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕನಿಗೆ ತುರ್ತಾಗಿ ಅಪರೂಪದ 'ಬಾಂಬೆ ಬ್ಲಡ್' ಅಗತ್ಯವಿತ್ತು. ವಿಷಯ ತಿಳಿದ ಚಿಕ್ಕಮಗಳೂರಿನ ಮಹೇಶಕುಮಾರ್ ಎಂಬುವವರು 300 ಕಿಮೀ ಪ್ರಯಾಣಿಸಿ ರಕ್ತದಾನ ಮಾಡುವ ಮೂಲಕ ಮಗುವಿನ ಜೀವ ಉಳಿಸಿದ್ದಾರೆ.

Read Full Story

07:32 AM (IST) Oct 18

ಬೈಪಾಸ್ ರಸ್ತೆಯಲ್ಲಿ ಬಿಳಿ ಸೀರೆ ಮಹಿಳೆ, ದೆವ್ವದಿಂದ ದಾಳಿ - ಪೋಟೋ ವೈರಲ್‌ - CPI ಪರಿಶೀಲನೆ

ಚನ್ನಗಿರಿಯ ಬೈಪಾಸ್ ರಸ್ತೆಯಲ್ಲಿ ಬಿಳಿಸೀರೆ ಧರಿಸಿದ ದೆವ್ವವೊಂದು ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ, ಇದು ಎ.ಐ. ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಸುಳ್ಳು ಸುದ್ದಿ ಎಂದು ಸಿಪಿಐ ರವೀಶ್ ಸ್ಪಷ್ಟಪಡಿಸಿದ್ದಾರೆ.

Read Full Story

07:29 AM (IST) Oct 18

ಸಿಜೆಪಿ-ಕಾಂಗ್ರೆಸ್ ಎರಡೂ ಒಂದೇ, ಭಾರತ ವಿರೋಧಿಗಳಿಗೆ ರಾಹುಲ್ ಗಾಂಧಿ ಬೆಂಬಲ? ಶ್ರೀರಾಮುಲು ಹೇಳಿದ್ದೇನು?

ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ವಿದ್ಯಾರ್ಥಿ ಹಾಗೂ ನೀಟ್ ಹೋರಾಟದ ನೆಪದಲ್ಲಿ ಕಾಂಗ್ರೆಸ್ ದೇಶದಲ್ಲಿ ಬಾಂಗ್ಲಾ ಮಾದರಿಯ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
Read Full Story

07:20 AM (IST) Oct 18

Bengaluru - ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದ ವಿವಾದ - ಹೈಕೋರ್ಟ್‌ ಮಹತ್ವ ತೀರ್ಪು

ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಕಾನೂನು ಲೋಪಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಆಡಳಿತವನ್ನು ಮರಳಿ ಟ್ರಸ್ಟ್‌ಗೆ ಹಸ್ತಾಂತರಿಸಲು ಸೂಚಿಸಿದೆ.

Read Full Story

More Trending News