LIVE NOW
Published : Oct 17, 2026, 06:45 AM ISTUpdated : Oct 17, 2026, 10:04 AM IST

Karnataka News Live: ಬೇಲೂರು-ಆಲೂರು ರೈಲ್ವೆ ಕಾಮಗಾರಿ; ಭೂಸ್ವಾಧೀನ ಬೆಲೆ ನಿಗದಿಯಲ್ಲಿ ತಾರತಮ್ಯದ ಆರೋಪ!

ಸಾರಾಂಶ

ಬೆಂಗಳೂರು: ಸಚಿವರ ಮೇಲಿನ ‘ಸ್ಟಿಂಗ್‌ ಆಪರೇಷನ್‌’ ಸಂಬಂಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳ ಸಂಬಂಧ ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಗೃಹ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದು, ಅವರು ನೋಡುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ಸಂಬಂಧ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರ ಆರೋಪಗಳಿಗೆ ನಾನು ಏನೂ ಮಾತಾಡಲು ಹೋಗುವುದಿಲ್ಲ. ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ನಮ್ಮಲ್ಲಿ ಗೃಹ ಇಲಾಖೆ ಇದೆ, ಆ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ, ಅವರು ಸಂಪೂರ್ಣ ತನಿಖೆ ನೋಡಿಕೊಳ್ಳುತ್ತಾರೆ ಎಂದರು.

10:04 AM (IST) Oct 17

ಬೇಲೂರು-ಆಲೂರು ರೈಲ್ವೆ ಕಾಮಗಾರಿ; ಭೂಸ್ವಾಧೀನ ಬೆಲೆ ನಿಗದಿಯಲ್ಲಿ ತಾರತಮ್ಯದ ಆರೋಪ!

ಬೇಲೂರು-ಆಲೂರು ರೈಲ್ವೆ ಕಾಮಗಾರಿಯ ಭೂಸ್ವಾಧೀನ ಬೆಲೆ ನಿಗದಿಯಲ್ಲಿ ತಾರತಮ್ಯ ಖಂಡಿಸಿ ರೈತರು ತೋಟಗಾರಿಕಾ ಇಲಾಖೆಗೆ ಬೀಗ ಜಡಿದು ಪ್ರತಿಭಟಿಸಿದರು. ಸೂಕ್ತ ಬೆಲೆ ಕೇಳಿದ ರೈತರಿಗೆ ಅಧಿಕಾರಿಯೊಬ್ಬರು ವಿಷ ಕುಡಿಯಲು ಹೇಳಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಜಂಟಿ ನಿರ್ದೇಶಕರ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯಗೊಂಡಿತು.
Read Full Story

09:56 AM (IST) Oct 17

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ, ಯುಡೈಸ್ ವರದಿಯಲ್ಲಿ ಬಹಿರಂಗ

2025-26ನೇ ಸಾಲಿನ ಯುಡೈಸ್ ವರದಿಯ ಪ್ರಕಾರ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ತೀವ್ರ ಶಿಕ್ಷಕರ ಕೊರತೆ ಇರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಾವವಿದ್ದು, ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶಿಕ್ಷಕರ ಕಾಯಂ ನೇಮಕಾತಿ ಮತ್ತು ಸೌಲಭ್ಯಗಳ ಸುಧಾರಣೆ ಅತ್ಯಗತ್ಯವಾಗಿದೆ.
Read Full Story

09:10 AM (IST) Oct 17

ಬೆಂಗಳೂರಿನ ₹36000 ಕೋಟಿ ಟೆಂಡರ್ ರದ್ದು ಸಾಧ್ಯತೆ; ‘ಕ್ಲೀನ್ ಚಿಟ್’ ಇದ್ರೂ ಯಾಕೆ ನಿರ್ಧಾರ?

ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗಾಗಿ ರಾಮ್‌ಕಿ ಗ್ರೂಪ್‌ಗೆ ನೀಡಲಾಗಿದ್ದ 36,000 ಕೋಟಿ ರೂ.ಗಳ ಬೃಹತ್ ಟೆಂಡರ್ ರದ್ದಾಗುವ ಸಾಧ್ಯತೆಯಿದೆ. ಟೆಂಡರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತನಿಖಾ ಸಮಿತಿ ವರದಿ ನೀಡಿದ್ದರೂ, ಭವಿಷ್ಯದ ಮುಜುಗರ ತಪ್ಪಿಸಲು ಸರ್ಕಾರ ಮರು ಟೆಂಡರ್ ಕರೆಯಲು ಚಿಂತಿಸುತ್ತಿದೆ.
Read Full Story

08:41 AM (IST) Oct 17

ಅಕಸ್ಮಾತ್ ಬಿಜೆಪಿ ದಲಿತರೆ ಮೀಸಲಾತಿ ಕಸಿದರೆ... ವಿಜಯಪುರದಲ್ಲಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ

ದಲಿತರ ಮೀಸಲಾತಿಯನ್ನು ಕಸಿದುಕೊಂಡರೆ ನಾವು ಬಿಜೆಪಿ ಜೊತೆ ಇರುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಎಚ್ಚರಿಸಿದ್ದಾರೆ. ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗುವಂತೆ ಕಾಂಗ್ರೆಸ್ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

Read Full Story

08:17 AM (IST) Oct 17

ಕಡೂರು ರೈಲ್ವೆ ನಿಲ್ದಾಣದಲ್ಲಿ ದಿಢೀರ್ ಸ್ಥಗಿತಗೊಂಡ ಸೇವೆ - ಪ್ರಯಾಣಿಕರ ಪರದಾಟ, ಆಕ್ರೋಶ

ಕಡೂರು ರೈಲ್ವೆ ನಿಲ್ದಾಣದಲ್ಲಿ ಯುಪಿಐ ಸರ್ವರ್ ಸಮಸ್ಯೆಯಿಂದಾಗಿ ಡಿಜಿಟಲ್ ಪಾವತಿ ಸ್ಥಗಿತಗೊಂಡು ಪ್ರಯಾಣಿಕರು ಟಿಕೆಟ್ ಪಡೆಯಲು ಪರದಾಡಿದರು. ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದ್ದರಿಂದ ನಗದು ಇಲ್ಲದವರು ತೊಂದರೆ ಅನುಭವಿಸಿದ್ದು, ಮುಂಚಿತವಾಗಿ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.
Read Full Story

08:08 AM (IST) Oct 17

ವಿದೇಶಿ ಹಣ, ಬಾಂಗ್ಲಾ ಪ್ರೇರಣೆ… ಸಿಜೆಪಿ-ಕಾಂಗ್ರೆಸ್‌ನ ಅಸಲಿ ಮುಖ ಬಯಲು? ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕಾಂಗ್ರೆಸ್ ಮತ್ತು ಸಿಜೆಪಿ ಒಂದೇ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಕಾಂಗ್ರೆಸ್ ದೇಶ ವಿರೋಧಿ ಪಕ್ಷವಾಗಿದ್ದು, ವಿದೇಶಿ ಟೂಲ್ ಕಿಟ್ ಭಾಗವಾಗಿರುವ ಸಿಜೆಪಿ ಮೂಲಕ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ ಎಂದು ಆರೋಪ.

Read Full Story

08:03 AM (IST) Oct 17

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬನಶಂಕರಿ 6ನೇ ಹಂತದಲ್ಲಿ ಭೂಮಿ ಹಂಚಿಕೆ; ಕೋರ್ಟ್ ಹೇಳಿದ್ದೇನು?

ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದ ಮರು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದ್ದು, ಅಕ್ಟೋಬರ್ 30ರಂದು ವಾದ ಆಲಿಸಲಿದೆ.
Read Full Story

07:51 AM (IST) Oct 17

ಪೆರಿಫೆರಲ್‌ ರಿಂಗ್‌ ರೋಡ್‌-2 ಯೋಜನೆ - ಮಾಚೋಹಳ್ಳಿ ಭೂಸ್ವಾಧೀನಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರಿನ ಪಿಆರ್‌ಆರ್‌-2 ಯೋಜನೆ 2006ರ ಪ್ರಾಥಮಿಕ ಅಧಿಸೂಚನೆ ಬಳಿಕ ತಡವಾಗಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಪ್ರಶ್ನಿಸಿ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಬಿಡಿಎಗೆ ಸೂಚಿಸಿದೆ.

Read Full Story

07:18 AM (IST) Oct 17

ಸ್ಟಿಂಗ್ ಆಪರೇಷನ್ ಆ ವಿಚಾರಕ್ಕೆ ಮಾಡಿದ್ದು ಸರಿ ಅಲ್ಲ - ಕುಮಾರಸ್ವಾಮಿ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?

ಭ್ರಷ್ಟರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುವುದು ಸರಿ, ಆದರೆ ಬೇರೆ ವಿಚಾರಗಳಿಗೆ ಇದು ಸಮಂಜಸವಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬಿಜೆಪಿ ಅಭಿವೃದ್ಧಿ ಬದಲು ಭಾವನಾತ್ಮಕ ವಿಚಾರಗಳ ಮೇಲೆ ಅಧಿಕಾರಕ್ಕೆ ಬಂದಿದೆ. ಬಡವರ ನಿರ್ಲಕ್ಷ್ಯ, ಉದ್ಯಮಿಗಳಿಗೆ ಮಣೆ ಹಾಕ್ತಿದೆ ಎಂದು ಆರೋಪಿಸಿದರು.

Read Full Story

More Trending News