LIVE NOW
Published : Oct 12, 2026, 05:08 AM ISTUpdated : Oct 12, 2026, 07:10 AM IST

Karnataka News Live: ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಅರಣ್ಯ ಶ್ವಾನಪಡೆ, ಕಾಡುಗಳನ್ನು ಕಾಯಲು ಹೈಟೆಕ್‌ ತರಬೇತಿ ಪಡೆದ 50 ಪಡೆ ಸಿದ್ಧ!

ಸಾರಾಂಶ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಾವೇರಿ ನೀರು ಹಂಚಿಕೆಯಲ್ಲಿನ ಬಾಕಿ ನೀರು ಬಿಡುಗಡೆಗೆ ಕರ್ನಾಟಕ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತಮಿಳುನಾಡು ಆಕ್ಷೇಪಿಸಿದ್ದು, ಸೋಮವಾರವೂ ಬಾಕಿ ನೀರು ಬಿಡುಗಡೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುವ ಸಾಧ್ಯತೆಯಿದೆ. ನೀರಿನ ಕೊರತೆಯಿಂದಾಗಿ ನಾವು ಈಗಾಗಲೇ ಖಾರಿಫ್ ಬೆಳೆಯಾದ ಕುರ್ವೈ ಬೆಳೆಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ, ಸುಪ್ರೀಂಕೋಟ್೯ ತೀರ್ಪಿನಂತೆ ಬಾಕಿ ನೀರನ್ನು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ವಾದಿಸುವ ನಿರೀಕ್ಷೆಯಿದೆ.

Karnataka forest dog squad

07:10 AM (IST) Oct 12

ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಅರಣ್ಯ ಶ್ವಾನಪಡೆ, ಕಾಡುಗಳನ್ನು ಕಾಯಲು ಹೈಟೆಕ್‌ ತರಬೇತಿ ಪಡೆದ 50 ಪಡೆ ಸಿದ್ಧ!

ಕರ್ನಾಟಕ ಅರಣ್ಯ ಇಲಾಖೆಯು ಬಂಡೀಪುರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸ್ವತಂತ್ರ ಹೈಟೆಕ್ ಶ್ವಾನದಳ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಬೆಲ್ಜಿಯಂ ಶೆಫರ್ಡ್ ತಳಿಯ ಈ ಶ್ವಾನಗಳು ವನ್ಯಜೀವಿ ಅಪರಾಧಗಳ ಪತ್ತೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಗಡಿಭಾಗದ ಕಳ್ಳಸಾಗಣೆ ತಡೆಯಲು ಈ 50 ಶ್ವಾನಗಳ ಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ.
Read Full Story

06:55 AM (IST) Oct 12

ಮಂಗಳೂರು - ಶಿರ್ಲಾಲು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಅಪರೂಪದ ಕರಿಚಿರತೆ!

ಬೆಳ್ತಂಗಡಿಯ ಶಿರ್ಲಾಲು ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಅಪರೂಪದ ಎರಡು ವರ್ಷದ ಗಂಡು ಕರಿ ಚಿರತೆಯೊಂದು ಸೆರೆಯಾಗಿದೆ. ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಈ ಚಿರತೆಯನ್ನು ಸುರಕ್ಷಿತವಾಗಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story

06:38 AM (IST) Oct 12

ತೀರ್ಥಹಳ್ಳಿಯ ನಂದಿಹೊಳೆಯಲ್ಲಿ ಅಪರೂಪದ ವೀರಗಲ್ಲು ಪತ್ತೆ, ಹುಲಿಯೊಂದಿಗೆ ಹೋರಾಡಿ ಪತಿ ವೀರಮರಣ ಪತ್ನಿಯ ಸಹಗಮನ!

ತೀರ್ಥಹಳ್ಳಿ ಸಮೀಪದ ನಂದಿಹೊಳೆಯಲ್ಲಿ ಹುಲಿಯೊಂದಿಗೆ ಹೋರಾಡಿ ಮೃತಪಟ್ಟ ವೀರ ಹಾಗೂ ಆತನ ಪತ್ನಿಯ ಸಹಗಮನವನ್ನು ಚಿತ್ರಿಸುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದ ಈ ಶಿಲ್ಪವನ್ನು ಇತಿಹಾಸ ಸಂಶೋಧಕರು ಪತ್ತೆಹಚ್ಚಿದ್ದು, ಇದರ ನಿಖರ ಇತಿಹಾಸದ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.
Read Full Story

06:13 AM (IST) Oct 12

‘ಧರೆ’ಯ ಹಬ್ಬವಾದ ದಸರಾ, ಚಾಮುಂಡೇಶ್ವರಿಯೇ ನಮ್ಮ ಮನೆ ಬೆಳಗುತ್ತಾಳೆ - ಗವಿಸಿದ್ಧೇಶ್ವರ ಶ್ರೀ

ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟಿಸಿದರು. ಈ ವೇಳೆ ಅವರು ಪರಿಸರ ಸಂರಕ್ಷಣೆ, ರೈತರ ಶ್ರಮ ಹಾಗೂ ಮೈಸೂರು ರಾಜಮನೆತನದ ಕೊಡುಗೆಗಳನ್ನು ಸ್ಮರಿಸಿದರು. ಜೊತೆಗೆ ಹಾಜಬ್ಬ ಮತ್ತು ತಿಮ್ಮಕ್ಕನವರ ಸಾಧನೆಗಳನ್ನು ಉದಾಹರಿಸಿ ಸಮಾಜಮುಖಿ ಕೆಲಸಗಳಿಗೆ ಕರೆ ನೀಡಿದರು.
Read Full Story

06:07 AM (IST) Oct 12

₹18 ಲಕ್ಷದ ಬೀದಿದೀಪ ಕಾಮಗಾರಿಗೆ ₹9 ಲಕ್ಷಕ್ಕೆ ಟೆಂಡರ್‌ - ಶೇ. 50ರಷ್ಟು ಕಡಿಮೆ ಬಿಡ್‌

ಕೊಪ್ಪಳ ನಗರಸಭೆಯ ಬೀದಿದೀಪ ಅಳವಡಿಕೆ ಕಾಮಗಾರಿಗೆ ಗುತ್ತಿಗೆದಾರರೊಬ್ಬರು ಶೇ. 50ರಷ್ಟು ಕಡಿಮೆ ದರಕ್ಕೆ (₹9 ಲಕ್ಷ) ಬಿಡ್ ಸಲ್ಲಿಸಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಹಿಂದೆ ಬೋಗಸ್ ಬಿಲ್ ಮೂಲಕ ಹಣ ದುರುಪಯೋಗವಾಗಿರುವ ಆರೋಪಗಳಿದ್ದು, ಈ ಅತಿ ಕಡಿಮೆ ಬಿಡ್ ಹಲವು ಅನುಮಾನಗಳಿಗೆ ಕಾರಣವಾಗಿದೆ.
Read Full Story

05:27 AM (IST) Oct 12

ಸ್ಟಿಂಗ್‌ ಆಪರೇಷನ್‌ ಮಾಡುವ ವ್ಯಕ್ತಿ ಜೊತೆ ಸಿಎಂ ಡಿಕೆಶಿ ಭೇಟಿ - ಹೆಚ್‌ಡಿಕೆ ಆರೋಪ

ರಾಜ್ಯದ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಮಾಡಿದ ವ್ಯಕ್ತಿಯೊಂದಿಗೆ ಪಂಚತಾರಾ ಹೋಟೆಲ್‌ನಲ್ಲಿ ಚರ್ಚಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

Read Full Story

More Trending News