River Alignment Project: ನದಿ ಜೋಡಣೆ ಮಾಡಿದ್ರೆ ರಾಜ್ಯಕ್ಕೂ ಪಾಲು ಬೇಕು: ಸಿಎಂ ಬೊಮ್ಮಾಯಿ

By Kannadaprabha News  |  First Published Feb 8, 2022, 12:22 PM IST

*  ಡಿಪಿಆರ್‌ಗೆ ಮುನ್ನ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
*  ಕರ್ನಾಟಕಕ್ಕೆ ನ್ಯಾಯಸಮ್ಮತವಾದ ಪಾಲು ಪಡೆದುಕೊಳ್ಳಲು ಎಲ್ಲ ರೀತಿಯ ಕ್ರಮ
*  ಈ ಬಗ್ಗೆ ನಮ್ಮ ನಿಲುವು ಸ್ಪಷ್ಟ 


ಬೆಂಗಳೂರು(ಫೆ.08):  ನದಿ ಜೋಡಣೆ(River Alignment) ವಿಚಾರದಲ್ಲಿ ಕರ್ನಾಟಕಕ್ಕೆ(Karnataka) ಸಮರ್ಪಕ ಪಾಲು ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟವಾಗಿ ಹೇಳಿದ್ದಾರೆ. ಸೋಮವಾರ ನವದೆಹಲಿಯಲ್ಲಿ(New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನದಿ ಪಾತ್ರದಲ್ಲಿ ಉತ್ಪಾದನೆಯಾಗುವ ನೀರು, ನಮ್ಮ ಅಗತ್ಯ ಹಾಗೂ ಈಕ್ವಿಟಿ ಆಧರಿಸಿ ಪಾಲು ನಿರ್ಧಾರವಾಗಬೇಕೆನ್ನುವುದು ನಮ್ಮ ನಿಲುವು ಎಂದು ತಿಳಿಸಿದರು.

ಡಿಪಿಆರ್‌ (Detailed Project Report) ಅಂತಿಮಗೊಳಿಸುವ ಮುನ್ನ ಎಲ್ಲ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೂ ಹೇಳಿದ್ದೇವೆ. ಕರ್ನಾಟಕಕ್ಕೆ ನ್ಯಾಯಸಮ್ಮತವಾದ ಪಾಲನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜೀವನದಿಗಳಾಗಿರುವ ಕೃಷ್ಣಾ(Krishna) ಮತ್ತು ಕಾವೇರಿ(Kaveri) ಜಲಾನಯನ ಪ್ರದೇಶಗಳ ಪ್ರಶ್ನೆಯಾಗಿರುವುದರಿಂದ ಈ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಯಾವುದೇ ರಾಜಿ ಇಲ್ಲ ಎಂದರು.

Tap to resize

Latest Videos

ಶಿರಸಿ: ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ, ಸ್ವರ್ಣವಲ್ಲೀ ಶ್ರೀ

ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ, ಪಾಲಾರ್‌, ಪೆನ್ನಾರ್‌ ನದಿ ಜೋಡಣೆ, ಹಿಮಾಲಯ ಹಾಗೂ ಪೆನಿನ್ಸುಲಾರ್‌ ಭಾಗದ ಪ್ರಮುಖ ನದಿ ಜೋಡಣೆ ಯೋಜನೆಗಳ ವಿಷಯದಲ್ಲಿ ನಮ್ಮ ನಿಲುವಿನ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.

ಕೃಷ್ಣಾ-ಗೋದಾವರಿ ಜೋಡಣೆ ಹೊಸದೊಂದು ಸಮಸ್ಯೆಗೆ ದಾರಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ(Central Government) ಮಹತ್ವಾಕಾಂಕ್ಷೆಯ ‘ನದಿಗಳ ಜೋಡಣೆ ಯೋಜನೆ’ಯಲ್ಲ(River Alignment Project) ಕೃಷ್ಣಾ-ಗೋದಾವರಿಯೂ(Krishna-Godavari River) ಒಂದಾಗಿದ್ದು, ಈ ಯೋಜನೆ ಕೈಗೂಡಿದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೃಷ್ಣೆಯ ನೀರಿನಲ್ಲಿ ಹೆಚ್ಚುವರಿ ಪಾಲು ಕೇಳುವ ಸಾಧ್ಯತೆ ಇದೆ.

ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು 2022ನೇ ಸಾಲಿನ ಬಜೆಟ್(Union Budget) ನಲ್ಲಿ ಈ ಕೃಷ್ಣಾ-ಗೊದಾವರಿ ನದಿಗಳ ಜೋಡಣೆ ವಿಷಯ ಘೋಷಿಸುತ್ತಿದ್ದಂತೆ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಇಂಥದೊಂದು ಜಿಜ್ಞಾಸೆ ಶುರುವಾಗಿದೆ. 

‘ದಕ್ಷಿಣ ಗಂಗಾ’ ಎಂದೇ ಹೆಸರಾಗಿರುವ ಗೋದಾವರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರನ ಸನ್ನಿಧಿಯಲ್ಲಿ ಉಗಮವಾಗಿ ತೆಲಂಗಾಣ, ಚತ್ತಿಸಗಡ, ಒಡಿಸ್ಸಾಗಳಲ್ಲಿ ಸುಮಾರು 1465 ಕಿಮೀ ಹರಿದು ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತದೆ. ಎಲ್ಲಿಯೂ ಕರ್ನಾಟಕವನ್ನು(Karnataka) ಸಂಪರ್ಕಿಸುವುದೇ ಇಲ್ಲ ಈ ಗೋದಾವರಿ. ಆದರೆ ಕರ್ನಾಟಕದಲ್ಲಿ ಹುಟ್ಟಿ ಗೋದಾವರಿ ಕೂರಿಕೊಳ್ಳುವ ಝರಿ, ಹಳ್ಳ- ಕೊಳ್ಳಗಳು ಗೋದಾವರಿ ಜಲಾನಯನ ಪ್ರದೇಶದಲ್ಲಿ ಬರುತ್ತವೆ. ಗೋದಾವರಿಯಿಂದ ಪಡೆದ ನೀರಿಗೆ ಪರ್ಯಾಯವಾಗಿ ಕರ್ನಾಟಕ ಆಂಧ್ರ-ತೆಲಂಗಾಣಕ್ಕೆ ಕೊಡಲೇಬೇಕಾಗುತ್ತದೆ ಎನ್ನುವುದು ನೀರಾವರಿ ತಜ್ಞರ ಅಭಿಮತ.

ನದಿ ಜೋಡಣೆ: ರಾಜ್ಯದ ಅಹವಾಲು ಕೇಳಲು ಶಾ ಸೂಚನೆ, ಸಿಎಂ ಬೊಮ್ಮಾಯಿ

ಎರಡು ಹಂತದಲ್ಲಿ ಸೇರ್ಪಡೆ: 

ಮೊದಲು ಆಂಧ್ರದಲ್ಲಿ(Andhra Pradesh) ಪೋಲಾವರಂ ಅಣೆಕಟ್ಟೆ ನಿರ್ಮಾಣ ಮಾಡಿ ಅದರ ಹಿನ್ನಿರನ್ನು ಕೃಷ್ಣಾ ನದಿ, ಪೆನ್ನಾರ್ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್ ಕೊಳವೆಗಳ ಮೂಲಕ ನೀರನ್ನು ಹರಿಸುವ ಯೋಜನೆ ಇದು.

ಪ್ರಾರಂಭಿಕ ಹಂತದಲ್ಲಿ ಗೋದಾವರಿಯ 300 ಟಿಎಂಸಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್ ಮೂಲಕ ಪೋಲಾವರಂ ಯೋಜನೆಗೆ ಬೆಸೆದು, ಬಳಿಕ ಕೃಷ್ಣಾ ನದಿಗೆ(Krishna River) ತರುವುದು. ಅಲ್ಲಿಂದ ಮುಂದೆ ಪೆನ್ನಾರ್ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ, ಅದನ್ನು ಮುಂದೆ ಗ್ರ್ಯಾಂಡ್ ಅಣೆಕಟ್ಟೆ ಮೂಲಕ ಕಾವೇರಿ ನದಿಗೆ ಸೇರಿಸುವುದು. ಇದರಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಲಭಿಸಲಿದೆ. ಎರಡನೇ ಹಂತದಲ್ಲಿ ಗೋದಾವರಿಯ ಉಪನದಿಯಾಗಿರುವ ಇಂದ್ರಾವತಿ ನದಿ (ಮಧ್ಯ ಭಾರತ) ನೀರನ್ನು ನಾಗರ್ಜುನ ಅಣೆಗೆ ತಂದು, ಅಲ್ಲಿಂದ ಮುಂದೆ ಮತ್ತೆ ಸೋಮಸಿಲಾ ಅಣೆಕಟ್ಟೆಗೆ ಸಂಪರ್ಕಿಸಿ, ಬಳಿಕ ಅದನ್ನು ಕರ್ನಾಟಕದ ಸಂಪರ್ಕಕ್ಕೆ ಬಾರದೇ ನೇರವಾಗಿ ಕಾವೇರಿ ನದಿಗೆ ಜೋಡಿಸುವುದೂ ಇದರಲ್ಲಿ ಸೇರಿದೆ. ಹಾಗಾಗಿ ಇದು ಕಾವೇರಿ- ಪೆನ್ನಾರ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆ. 
 

click me!