Omicron Variant ನಿಯಂತ್ರಣಕ್ಕೆ ಸರ್ಕಾರ ಸಭೆ : ಇನ್ನೂ 1 ವಾರ ಹೊಸ ನಿರ್ಬಂಧ ಇಲ್ಲ: ಸಿಎಂ

By Kannadaprabha News  |  First Published Dec 10, 2021, 6:32 AM IST

*ಒಮಿಕ್ರೋನ್‌ ನಿಯಂತ್ರಣಕ್ಕೆ ಸರ್ಕಾರ ಸಭೆ
*ಇನ್ನೂ 1 ವಾರ ಹೊಸ ನಿರ್ಬಂಧ ಇಲ್ಲ: ಸಿಎಂ!
*ತಜ್ಞರ ವರದಿ ಆಧರಿಸಿ ಮುಂದೆ ಹೊಸ ಮಾರ್ಗಸೂಚಿ 
*ಹೊಸ ವರ್ಷ, ಕ್ರಿಸ್‌ಮಸ್‌ ಬಗ್ಗೆ ವಾರದ ಬಳಿಕ ನಿರ್ಧಾರ
*ನೈಟ್‌ ಕರ್ಫ್ಯೂ ಸದ್ಯಕ್ಕಿಲ್ಲ


ಬೆಂಗಳೂರು (ಡಿ. 10):  ಕೋವಿಡ್‌ನ ಹೊಸ ತಳಿ ಒಮಿಕ್ರೋನ್‌ (Covid 19 New Variant Omicron) ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರದ ಕಾಲ ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಒಂದು ವಾರದ ಪರಿಸ್ಥಿತಿ ನೋಡಿಕೊಂಡು ನಂತರ ಹೊಸ ಮಾರ್ಗಸೂಚಿ ಜಾರಿಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್‌ ಕುರಿತು (Covid 19) ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಹೊಸ ತಳಿ ಒಮಿಕ್ರೋನ್‌ ಸೋಂಕು ಕಾಣಿಸಿಕೊಂಡರೂ ಆತಂಕಪಡುವ ಅಗತ್ಯ ಇಲ್ಲ ಎಂದು ತಜ್ಞರು (Experts) ಸಲಹೆ ಮಾಡಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸರ್ಕಾರವು ಪರಿಸ್ಥಿತಿಗನುಗುಣವಾಗಿ ನಿಯಮ (Guidelines) ಅನುಷ್ಠಾನಕ್ಕೆ ತರಲಿದೆ. ಹೊಸ ಮಾರ್ಗಸೂಚಿಗಳನ್ನು ರಚಿಸಲು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಬೇಕು. ಆ ವರದಿಯನ್ನು ಗಮನಿಸಿ ಅಗತ್ಯವೆನಿಸಿದರೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

Latest Videos

undefined

Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

ರಾತ್ರಿ ಕರ್ಫ್ಯೂ ಸದ್ಯಕ್ಕೆ ಇಲ್ಲ:

ಸಭೆಯಲ್ಲಿ ನೈಟ್‌ ಕರ್ಫ್ಯೂ (Night Curfew) ವಿಚಾರ ಪ್ರಸ್ತಾಪವಾಯಿತು. ಆದರೆ, ನೈಟ್‌ ಕರ್ಫ್ಯೂ ಜಾರಿ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಮತ್ತು ಆ ಕುರಿತು ಸದ್ಯಕ್ಕೆ ಚಿಂತನೆ ಇಲ್ಲ. ಅದೇ ರೀತಿ ಕ್ರಿಸ್‌ಮಸ್‌ (christmas) ಮತ್ತು ಹೊಸ ವರ್ಷಾಚರಣೆ (New Year 2022) ಬಗ್ಗೆಯೂ ಚರ್ಚೆ ನಡೆಸಲಾಯಿತು. ಈ ಬಗ್ಗೆ ಮುಂದಿನ ವಾರದಲ್ಲಿ ಮತ್ತೊಂದು ಸಭೆ ಮಾಡಿ ನಿರ್ಬಂಧ ಹೇರಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ನೈಟ್‌  ಕರ್ಫ್ಯೂ  ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಅಂತಿಮವಾಗಿ ತಜ್ಞರು ನೀಡುವ ಸಲಹೆಗಳು ಮತ್ತು ಶಿಫಾರಸಿನ ಮೇಲೆ ಸರ್ಕಾರ ಮುಂದುವರಿಯಲಿದೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್‌ (Dr̤ Sudarshan) ಅವರ ಜತೆ ಚರ್ಚೆ ಮಾಡಲಾಗಿದೆ. ಒಮಿಕ್ರೋನ್‌ ಕುರಿತು ಅವರು ವಿವರಣೆ ನೀಡಿದ್ದಾರೆ. ಯಾರೂ ಗಾಬರಿಯಾಗಬೇಕಾದ ಅಗತ್ಯ ಇಲ್ಲ. ಕೋವಿಡ್‌ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನೂ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ಗಡಿ ಜಿಲ್ಲೆಗಳಲ್ಲಿ ಇನ್ನಷ್ಟುಬಿಗಿ:

ಗಡಿಭಾಗದ ಜಿಲ್ಲೆಗಳಲ್ಲಿ (Border Districts) ಪ್ರಸ್ತುತ ಇರುವ ನಿಯಮಗಳ ಜತೆಗೆ ಇನ್ನಷ್ಟುನಿಯಮಗಳನ್ನು ಜಾರಿ ಮಾಡಲಾಗುವುದು. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಯಾವೆಲ್ಲಾ ನಿಯಮಗಳನ್ನು ಜಾರಿ ಮಾಡಿದ್ದೇವೋ ಅವುಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

Omicron Risk ಹರಡುವ ವೇಗ ಹೆಚ್ಚಳ, 57 ರಾಷ್ಟ್ರಗಳಿಗೆ ವ್ಯಾಪಿಸಿದ ರೂಪಾಂತರಿ

ವಸತಿ ಶಾಲೆಗಳಿಗೆ (Residential School) ಬಿಗಿ ನಿಯಮ

- ಹಾಸ್ಟೆಲ್‌ಗಳಲ್ಲಿ 2 ದಿನಕ್ಕೊಮ್ಮೆ ಸ್ಯಾನಿಟೈಸ್‌ ಮಾಡುವುದು ಕಡ್ಡಾಯ

- ವಿದ್ಯಾರ್ಥಿಗಳೆಲ್ಲ ಒಟ್ಟಿಗೇ ಊಟ ಮಾಡದೆ ಪಾಳಿಯಲ್ಲಿ ಭೋಜನ

- ಅಡುಗೆ ಸಿಬ್ಬಂದಿ, ವಾರ್ಡನ್‌ 2 ಡೋಸ್‌ ಲಸಿಕೆ ಪಡೆವುದು ಕಡ್ಡಾಯ

- ವಿದ್ಯಾರ್ಥಿಗಳು ಮಲಗುವಾಗಲೂ ಅಂತರ ಕಾಪಾಡಿಕೊಳ್ಳಲು ಸಲಹೆ

- ಸೋಂಕಿತ ವಿದ್ಯಾರ್ಥಿಗಳನ್ನಿರಿಸಲು ಐಸೋಲೇಷನ್‌ಗೆ ವಿಶೇಷ ಕೊಠಡಿ

- ವಸತಿ ಶಾಲೆಗಳಿಗೆ ಶೀಘ್ರದಲ್ಲೇ ಈ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

click me!