ಮುನಿರತ್ನ ಆಡಿಯೋ ವಿಚಾರ: ಧ್ವನಿ ಅವರದ್ದೇ ಅನ್ನೋದು ನಿಜವಾದ್ರೆ ಕ್ಷಮಿಸಲ್ಲ: ಡಾ.ನಿರ್ಮಲಾನಂದಶ್ರೀ

By Ravi Janekal  |  First Published Sep 17, 2024, 10:24 PM IST

ರಾಮನಗರದಲ್ಲಿ ಉರಿಗೌಡ, ನಂಜೇಗೌಡ ವಿಚಾರವಾಗಿ ಮುನಿರತ್ನರನ್ನು ಕರೆದು ಮುನಿರತ್ನಗೆ ಬುದ್ಧಿ ಹೇಳಿದ್ದೆ. ಆಗ ಅವರು ನಿಲ್ಲಿಸಿದ್ರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಮುದ್ರಣದಲ್ಲಿ ನಿಜವಾಯ್ತು ಅಂದ್ರೆ ಮಾತನಾಡಿರೋರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಡಾ. ನಿರ್ಮಲಾನಂದ ಸ್ವಾಮೀಜಿ ಎಂದರು


ಬೆಂಗಳೂರು (ಸೆ.17): ಗುತ್ತಿಗೆದಾನಿಗೆ ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾದ ಆಡಿಯೋವನ್ನು ನಾನೂ ಕೇಳಿಸಿಕೊಂಡಿದ್ದೇನೆ. ಪ್ರಕರಣ ಸಂಬಂಧ ಈಗಾಗಲೇ ಧ್ವನಿ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಅವರು ಮಾತನಾಡಿದ್ರೋ, ಇನ್ನೊಬ್ಬರು ಮಾತನಾಡಿದ್ರೋ ಧ್ವನಿ ಪರೀಕ್ಷೆ ಬಳಿಕ ಗೊತ್ತಾಗುತ್ತದೆ ಎಂದು ಡಾ. ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.

ಮುನಿರತ್ನ ಆಡಿಯೋ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಈ ರೀತಿ ಯಾರೇ ಮಾತಾಡಿದ್ರೂ ಇಂದಿನ ನಾಗರೀಕ ಸಮಾಜದಲ್ಲಿ ಒಪ್ಪುವಂಥದ್ದಲ್ಲ, ಖಂಡನೀಯವಾಗಿದೆ. ಆಧುನಿಕತೆ ಬೆಳೆದಿದೆ ಅಂತ ಯಾವುದೇ ಕಾರಣಕ್ಕೂ ನಮ್ಮ ಸಂಸ್ಕೃತಿಯನ್ನ ಮರೆಯಬಾರದು. ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತನಾಡಿದ್ದಾರೆ. ಅಥವಾ ದಲಿತ ಸಮೂದಾಯಕ್ಕೆ ಮಾತನಾಡಿದ್ದಾರೆ ಅನ್ನೋದು ಎಷ್ಟು ಮುಖ್ಯನೋ, ಅದೇ ರೀತಿ ಸಮಾಜದಲ್ಲಿರುವ ಜನಾಂಗಗಳು ಅಷ್ಟೇ ಮುಖ್ಯ. ಪ್ರತಿಯೊಂದು ಜನಾಂಗವನ್ನ ನಮ್ಮ ಸಂವಿಧಾನ ಒಪ್ಪಿಕೊಂಡಿದೆ. ಅದರಲ್ಲೂ ನಮ್ಮ ದೇಶದ ಆಸ್ಮಿತೆ ನಮ್ಮ ತಾಯಂದಿರು. ನಮ್ಮ ದೇಶವನ್ನ ಭಾರತ ಮಾತೆ ಅಂತ ಕರೆಯುತ್ತೇವೆ. ಅಂತಹ ತಾಯಂದಿರ ಬಗ್ಗೆ ಹೇಳಲು ಆಗದೇ ಇರುವಂತಹ ಪದಗಳು ಆ ಧ್ವನಿಯಲ್ಲಿದೆ. ಇದು ಸರಿಯಲ್ಲ. ಯಾರೇ ಮಾತನಾಡಿದ್ರೂ ಅಂಥವರ ಮೇಲೆ ಕ್ರಮ ಆಗಲಿ ಎಂದರು.

Tap to resize

Latest Videos

ಚಿನ್ನಾಭರಣ ಜೇಬಲ್ಲಿಟ್ಟು ಗುತ್ತಿಗೆದಾರರು ಪ್ರತಿಭಟಿಸಿದ್ದೇಕೆ? ಭ್ರಷ್ಟ ರಾಜಕಾರಣಿಗಳಿಗೆ ರಾತ್ರಿ ಹೊತ್ತು ನಿದ್ರೆ ಬರುತ್ತಾ?!

ನಾಳೆ ಕೆಂಗೇರಿಯಲ್ಲಿ ಶಾಸಕ ಮುನಿರತ್ನ ವಿರುದ್ಧ ನಡೆಯಲಿರುವ ಒಕ್ಕಲಿಗರ ಸಂಘ ಪ್ರತಿಭಟನೆ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಮನಗರದಲ್ಲಿ ಉರಿಗೌಡ, ನಂಜೇಗೌಡ ವಿಚಾರವಾಗಿ ಕರೆದು ಮುನಿರತ್ನಗೆ ಬುದ್ಧಿ ಹೇಳಿದ್ದೆ. ಆಗ ಅವರು ನಿಲ್ಲಿಸಿದ್ರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಮುದ್ರಣದಲ್ಲಿ ನಿಜವಾಯ್ತು ಅಂದ್ರೆ ಮಾತನಾಡಿರೋರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದರು.

ಗುತ್ತಿಗೆದಾರನಿಗೆ ಜಾತಿ ನಿಂದನೆ ಬೆದರಿಕೆ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ

ಇನ್ನು ನಾಗಮಂಗಲ ಕೋಮುಗಲಭೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸ್ವಾಮೀಜಿ, ನಾಗಮಂಗಲ ಸದ್ಯ ಶಾಂತಿಯಿಂದ ಕೂಡಿದೆ. ಯಾವಾಗಲೂ ಶಾಂತಿಯಿಂದಲೇ ಕೂಡಿರುತ್ತಿತ್ತು.ಇದ್ದಕ್ಕಿದ್ದಂತೆ ಘಟನೆ ಆಗಿರೋದು ನೋವಿನ ಸಂಗತಿ. ಸಾಮಾನ್ಯವಾಗಿ ಹಿಂದೂ ಮುಸ್ಲಿಮರು ಆ ಭಾಗದಲ್ಲಿ ಸೌಹಾರ್ದವಾಗಿ ಬದುಕುತ್ತಿದ್ರು. ಸದ್ಯ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಧರ್ಮ‌ ಬೇರೆಯಾದ್ರೂ ಮನುಷ್ಯತ್ವ ಒಂದೇ ಸಾಮರಸ್ಯದಿಂದ ಪ್ರೀತಿಯಿಂದ ಬದುಕೋಣ ಎಂದರು.

click me!