ಪ್ರತಿಷ್ಠಿತ ಮಂತ್ರಿಯೊಬ್ಬರು ಮೆಟ್ರೋದಲ್ಲಿ ಸಂಚರಿಸಿದರೂ ಗುರುತೇ ಹಿಡಿಯದ ಪ್ರಯಾಣಿಕರು!

By Sathish Kumar KH  |  First Published Nov 11, 2023, 8:57 PM IST

ರಾಜ್ಯ ಸರ್ಕಾರದ ಸಚಿವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದರೂ ಮೆಟ್ರೋ ಪ್ರಯಾಣಿಕರು ಇವರನ್ನು ಗುರುತೇ ಹಿಡಿಯದ ಪ್ರಸಂಗ ನಡೆದಿದೆ.


ಬೆಂಗಳೂರು (ನ.11): ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಇಲಾಖೆಯಾದ ಕಂದಾಯ ಇಲಾಖೆ ಸಚಿವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದರೂ ಮೆಟ್ರೋ ಪ್ರಯಾಣಿಕರು ಇವರನ್ನು ಗುರುತೇ ಹಿಡಿಯದ ಪ್ರಸಂಗ ನಡೆದಿದೆ.

ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಟ್ರಾಫಿಕ್‌ ರಹಿತ ಸಂಚಾರಕ್ಕೆ ಭಾರಿ ದೊಡ್ಡ ಪ್ರಮಾಣದ ಅನುಕೂಲವನ್ನು ಕಲ್ಪಿಸಿದೆ. ಹೀಗಾಗಿ, ಬೆಂಗಳೂರಿನಲ್ಲಿ ಕೆಲಸ ಮಾಡುವ ಶೇ.30ಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಬೆಂಗಳೂರಿಗರ ಆಗಮಿಸುವ ಶೇ.20 ಪ್ರಯಾಣಿಕರು ಮೆಟ್ರೋ ಪ್ರಯಾಣವನ್ನು ಮಾಡುತ್ತಿದ್ದಾರೆ. ಇನ್ನು ತುರ್ತು ಸಂದರ್ಭದಲ್ಲಿ ಸಿನಿಮಾ, ರಾಜಕೀಯ, ಐಟಿ-ಬಿಟಿ ಉದ್ಯಮಿಗಳು ಕೂಡ ಮೆಟ್ರೋ ಪ್ರಯಾಣ ಮಾಡುತ್ತಾರೆ. ಹಾಗೆಯೇ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನಮ್ಮ ಮೆಟ್ರೋ ನೇರಳೆ ಮಾರ್ಗವಾದ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸಂಚಾರ ಮಾಡಿದರೂ ಪ್ರಯಾಣಿಕರು ಮಾತ್ರ ಇವರನ್ನು ಗುರುತು ಹಿಡಿದಿಲ್ಲ. ಜೊತೆಗೆ, ಯಾವುದೋ ಸಾಮಾನ್ಯ ವ್ಯಕ್ತಿಯೆಂಬಂತೆ ಭಾವಿಸಿ ಪಕ್ಕದಲ್ಲಿಯೇ ಕುಳಿತು ಪ್ರಯಾಣ ಮಾಡಿದ್ದಾರೆ.

Tap to resize

Latest Videos

ಬೆಂಗಳೂರಲ್ಲಿ ವಾಸಿಸಲು ಯೋಗ್ಯ ಏರಿಯಾ ಯಾವುದು? ಬಹುಜನರ ಆಯ್ಕೆ ಇಲ್ಲಿದೆ ನೋಡಿ..!

ಬೆಂಗಳೂರಿನ ನಮ್ಮ ಮೆಟ್ರೋದ ಚಲ್ಲಘಟ್ಟ-ವೈಟ್‌ಫಿಲ್ಡ್‌ ಮಾರ್ಗದಲ್ಲಿ ಗುರುವಾರ ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೆಟ್ರೋ ಸಾರಿಗೆಯಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಮಾಡಿದರು. ಈ ಬಗ್ಗೆಸಚಿವರು ತಮ್ಮ ಸಂಚಾರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಚಿವರು ಮೊಬೈಲ್ ನಲ್ಲಿ ಮಾತನಾಡಿಕೊಂಡು ಫ್ಲಾಟ್ ಫಾಮ್‌ಗೆ ಬಂದು ನಿಂತುಕೊಳ್ಳುತ್ತಾರೆ. ನಂತರ, ನೇರಳೆ ಮಾರ್ಗದ ಮೆಟ್ರೋ ರೈಲನ್ನು ಹತ್ತಿ ಅಲ್ಲಿ ಸಹ ಪ್ರಮಾಣಿಕರಿಗೆ ಕುಳಿತುಕೊಳ್ಳುತ್ತಾರೆ.

 

ಕೆಂಗೇರಿ-ವಿಧಾನಸೌಧವರೆಗೆ ಸಚಿವರ ಪ್ರಯಾಣ ನೇರಳೆ ಮಾರ್ಗದ ಕೆಂಗೇರಿಯಿಂದ ವಿಧಾನಸೌಧವರೆಗೆ ಅವರು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಯಾಣ ಮಾಡಿದ್ದಾರೆ. ಬೆಂಗಳೂರು ನಮ್ಮ ಮೆಟ್ರೋ ಭವಿಷ್ಯದಲ್ಲಿ ನಮ್ಮ ಊರು' ಆಗಲಿದೆ ಎಂದು ಟ್ಯಾಗ್‌ಲೈನ್‌ ಬರೆದುಕೊಂಡಿದ್ದಾರೆ. ಜೊತೆಗೆ, ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ನಾನು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದೇನೆ ಎಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ರಸ್ತೆಗೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹೆಸರು ನಾಮಕರಣ: ಎಲ್ಲಿದೆ ಗೊತ್ತಾ ಈ ರಸ್ತೆ?

ಈ ಹಿಂದೆ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿದ್ದ ಸಮಯದಲ್ಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟಿಲ್ ಅವರು ಸಹ ವಿಧಾನಸೌಧದಿಂದ ಕೆಂಗೇರಿವರೆಗೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳಿದ್ದರು. ಇದೆಲ್ಲ ನೋಡಿದರೆ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ರಾಜಕೀಯ ನಾಯಕರಿಗೆ ಮೆಟ್ರೋ ಪ್ರಯಾಣದ ಮೇಲೆ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಟ್ರಾಫಿಕ್‌ ಮುಕ್ತ ಸಂಚಾರಕ್ಕೆ ನಮ್ಮ ಮೆಟ್ರೋ ಸಾರಿಗೆ ಹೆಚ್ಚು ಅನುಕೂಲಕರವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

click me!