'ನನ್ನ ಮಗ್ನೆ ಜೆಡಿಎಸ್‌ನವರಿಗೆ ಕೆಲಸ ಕೊಡ್ತೀಯ?..' ಅಧಿಕಾರಿಗೆ ಸಚಿವ ವೆಂಕಟೇಶ್ ಧಮ್ಕಿ, ಆಡಿಯೋ ವೈರಲ್!

Published : Mar 04, 2025, 10:15 AM ISTUpdated : Mar 04, 2025, 11:36 AM IST
'ನನ್ನ ಮಗ್ನೆ ಜೆಡಿಎಸ್‌ನವರಿಗೆ ಕೆಲಸ ಕೊಡ್ತೀಯ?..' ಅಧಿಕಾರಿಗೆ ಸಚಿವ ವೆಂಕಟೇಶ್ ಧಮ್ಕಿ, ಆಡಿಯೋ ವೈರಲ್!

ಸಾರಾಂಶ

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ ಅವರು ತಾಲೂಕು ಪಂಚಾಯಿತಿ ಇಂಜಿನಿಯರ್‌ಗೆ ನಿಂದಿಸಿದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಸಚಿವರು ಆಕ್ಷೇಪಾರ್ಹ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಮೈಸೂರು(ಮಾ.4): ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಅವರದ್ದು ಎನ್ನಲಾದ ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಂಜನಿಯರ್‌ಗೆ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಲ್ಲದೆ, ಧಮ್ಕಿ ಹಾಕಿದ ಆಡಿಯೋವೊಂದು ವೈರಲ್ ಆಗಿದೆ. 

ತಾಪಂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ‘ಯಾವೂರೋ ನಿಂದು.. ಯಾವ್ ಪಾರ್ಟಿ ನೀನು.. ಜೆಡಿಎಸ್‌ನವನ..’ ಎಂದು ಮಾತು ಆರಂಭಿಸಿ ಆಕ್ಷೇಪಾರ್ಹ ಪದಬಳಿಸಿ ಬೈದಿದ್ದಾರೆ. ಒಂದೆರಡು ನಿಮಿಷದ ಈ ಆಡಿಯೋ ತುಣುಕಿನಲ್ಲಿ ಎರಡ್ಮೂರು ಬಾರಿ ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಲಾಗಿದೆ.ಸಚಿವರ ಸಹಾಯಕರೊಬ್ಬರು ಇಇಗೆ ಕರೆ ಮಾಡಿ ಸಾಹೇಬರು ಮಾತನಾಡುತ್ತಾರೆ. ಕೊಡುತ್ತೇನೆ ಮಾತನಾಡಿ ಎಂದು ಹೇಳಿದ್ದಾರೆ. ಫೋನ್‌ ತೆಗೆದುಕೊಂಡ ಸಚಿವರು, ಯಾವೂರೋ ನಿಂದು.. ಯಾವ್ ಪಾರ್ಟಿ ನೀನು.. ಜೆಡಿಎಸ್ ನವನ? ಎಂದು ಪ್ರಶ್ನಿಸುತ್ತಾರೆ. ಆ ಕಡೆಯಿಂದ ಇಇ ಮಾತನಾಡಿ, ಹಾಗೇನು ಇಲ್ಲ ಸಾರ್‌, ಯಾಕ್‌ ಸಾರ್‌ ಎನ್ನುತ್ತಾರೆ.

ಇದನ್ನೂ ಓದಿ: 'ಸಿನಿಮಾ ನಟರು ಯಾವ ಪಕ್ಷಕ್ಕೂ ಸೇರಿದವರಲ್ಲ..'; ಡಿಕೆ ಶಿವಕುಮಾರ ಅವರ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಖಂಡನೆ

ಆಗ ಅವಾಚ್ಯ ಶಬ್ದ ಬಳಸಿರುವ ಸಚಿವರು, ‘ನನ್ ಮಗನೆ, ಅಲ್ಲಿನ ಜೆಡಿಎಸ್‌ನವರಿಗೆಲ್ಲ ಕೆಲ್ಸ ಕೊಟ್ಟಿದ್ದೀಯಾ? ನನ್ ಮಗನೆ ಇವತ್ತು ರಿಲೀವ್ ಮಾಡುಸ್ತಿನಿ ಬಾ ನನ್ ಹತ್ರ ಇವತ್ತು. ಮಗನೇ ನಾನು ಒಂದು ಕಾರ್ಯಕ್ರಮಕ್ಕೆ ಬರುತಾ ಇದೀನಿ. ಬಾ ಅಲ್ಲಿ ಸಿಗು ನನಗೆ’ ಎಂದು ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರ ಸೂಚನೆಗೂ ಡೋಂಟ್‌ ಕೇರ್; ಇಂದು ಲಿಂಗಾಯತ ಸಭೆ, ಯತ್ನಾಳ ಬಣಕ್ಕೆ ಸೆಡ್ಡು!

ಸಿಎಂ ಸಿದ್ದರಾಮಯ್ಯ ಪರಮಾಪ್ತರಾದ ವೆಂಕಟೇಶ್‌ ಅವರು ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆನ್ನಲಾದ ಈ ಆಡಿಯೋಗೆ ಆಕ್ರೋಶ ವ್ಯಕ್ತವಾಗಿದೆ. ಪಿರಿಯಾಪಟ್ಟಣ ತಾಲೂಕು ಪಂಚಾಯತಿ ಇಇ ರಾಘವೇಂದ್ರಗೆ ಬೈದಿರುವ ಆಡಿಯೋ ಅದು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!