ಮೈಕ್ರೋ ಫೈನಾನ್ಸ್ ಕಿರುಕುಳ; ಚಾಮರಾಜನಗರ ಜಿಲ್ಲಾಡಳಿತ ಸಹಾಯವಾಣಿಗೆ ದೂರುಗಳ ಸುರಿಮಳೆ!

Published : Jan 25, 2025, 11:12 PM IST
ಮೈಕ್ರೋ ಫೈನಾನ್ಸ್ ಕಿರುಕುಳ; ಚಾಮರಾಜನಗರ ಜಿಲ್ಲಾಡಳಿತ ಸಹಾಯವಾಣಿಗೆ ದೂರುಗಳ ಸುರಿಮಳೆ!

ಸಾರಾಂಶ

ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಚಾಮರಾಜನಗರದಲ್ಲಿ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಸಹಾಯವಾಣಿಗೆ ದೂರುಗಳು ಬರುತ್ತಿವೆ. ಸಾಲಗಾರರಿಗೆ ಮರುಪಾವತಿಗೆ ಸಮಯ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ವರದಿ - ಪುಟ್ಟರಾಜು. ಆರ್. ಸಿ.  

ಚಾಮರಾಜನಗರ (ಜ.25): ಮೈಕ್ರೋ ಫೈನಾನ್ಸ್ ಕಿರುಕುಳ, ಹಾವಳಿಯಿಂದ ಜಿಲ್ಲಾಡಳಿತಕ್ಕೆ ಹೊಸದೊಂದು ಟೆನ್ಷನ್ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯಷ್ಟೇ ಅಲ್ಲ ಕರ್ನಾಟಕದಲ್ಲಿ ಸಾಂಕ್ರಾಮಿಕದಂತೆ ಹರಡಿದೆ. ಎಲ್ಲೆಡೆ ಕಿರುಕುಳಕ್ಕೆ ಬಡಜನರು ಆತ್ಮಹತ್ಯೆ ಹಾದಿ ಹಿಡಿದಿರುವ ಪ್ರಕರಣಗಳು ದಿನನಿತ್ಯ ನಡೆಯುತ್ತಿವೆ. ಚಾಮರಾಜನಗರ ಜಿಲ್ಲೆಯ ಸ್ವಲ್ಪಮಟ್ಟಿಗೆ ಹೆಚ್ಚಾಗಿಯೇ ಪ್ರಕರಣಗಳು ನಡೆಯುತ್ತಿವೆ. ಸಹಾಯವಾಣಿಗೆ ದೂರುಗಳು  ಹರಿದುಬರುತ್ತಲೇ ಇವೆ. ಜಿಲ್ಲೆಯ  ಸಮಸ್ಯೆಗಳಲ್ಲದೇ  ಹೊರ  ಜಿಲ್ಲೆಯವರೆಗೂ  ಮಾಹಿತಿ ಕೊಡಬೇಕಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಮೈಕ್ರೋ ಫೈನಾನ್ಸ್ ಕಿರುಕುಳ ಹಿನ್ನಲೆ ಜಿಲ್ಲಾಡಳಿತಕ್ಕೆ ಹೊಸ ಟೆನ್ಷನ್ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯಷ್ಟೇ ಅಲ್ಲ ಹೊರ ಜಿಲ್ಲೆಗಳಿಂದಲೂ ಸಹಾಯವಾಣಿಗೆ ದೂರುಗಳೇ ಹರಿದು ಬರುತ್ತಿದೆ. ಮೈಕ್ರೋ ಫೈನಾನ್ಸ್ ನವರು ಕಿರುಕುಳ ಕೊಟ್ರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಏಷಿಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಬಳಿಕ ಸಹಾಯವಾಣಿಗೆ 90 ಕ್ಕೂ ಹೆಚ್ಚು ದೂರು ಬಂದಿದೆ. ಕೇವಲ ಚಾಮರಾಜನಗರ ಅಷ್ಟೇ ಅಲ್ಲದೆ ಹೊರ ಜಿಲ್ಲೆ ಗಳಿಂದಲು ಸಹಾಯವಾಣಿಗೆ  ದೂರುಗಳು  ಬರುತ್ತಿವೆ.  ಬೀದರ್,  ಬೆಳಗಾವಿ,  ವಿಜಯಪುರ,   ಹಾವೇರಿ  ಸೇರಿದಂತೆ  ಇತರೆ ಜಿಲ್ಲೆಗಳಿಂದಲೂ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಕರೆ ಮಾಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಇನ್ಸ್ ಟಿಟ್ಯೂಷನ್ ನೆಟ್ ವರ್ಕ್ ನ ರೆಗ್ಯುಲೇಟರಿ ಬಾಡಿ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ಚಾಮರಾಜನಗರದಲ್ಲಿ 29 ಮೈಕ್ರೋ ಫೈನಾನ್ಸ್ ಕಂಪನಿಗಳಿವೆ. ಕೆಲವು ಅನಧಿಕೃತ ಮೈಕ್ರೋ ಫೈನಾನ್ಸ್ ಕೂಡ ಕಾರ್ಯನಿರ್ವಹಿಸುತ್ತಿವೆ. ಸದ್ಯ ಮನೆ ಬಿಟ್ಟು ಹೋಗಿರುವವರನ್ನ ಮತ್ತೆ ಮರಳಿ ಮನೆಗೆ ಬರುವಂತೆ ತಿಳಿಸಿದ್ದೇವೆ. ತಾಲೂಕುವಾರು ತಹಶೀಲ್ಧಾರ್ ಗೆ ಈ ಕುರಿತು ಹೊಣೆ ನೀಡಲಾಗಿದೆ. ಸಾಲಗಾರರಿಗೆ ಸಾಲ ಮರು ಪಾವತಿ ಮಾಡಲು ಸಮಯ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ..

Microfinance Harassment | ಫೈನಾನ್ಸ್ ಹಾವಳಿ ಬಯಲಿಗೆಳೆದ ಸುವರ್ಣ ನ್ಯೂಸ್ ಗೆ ಅಭಿನಂದನೆಗಳ ಮಹಾಪೂರ | Suvarna News

ಇನ್ನೂ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಚಾಮರಾಜನಗರ ಕಂಟ್ರೋಲ್ ರೂಂಗೆ ಕರೆ ಮಾಡಿ ಮೈಸೂರು ಮೂಲದ ದಂಪತಿಗಳು ಅಳಲು ತೋಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಮಗ ಮನೆ ಬಿಟ್ಟು ಹೋಗಿದ್ದಾನೆ. ಚಾಮರಾಜನಗರ ಕಂಟ್ರೋಲ್ ರೂಂ ಗೆ ಕರೆ ಮಾಡಿದ ಮೈಸೂರು ಗುಂಡೂರಾವ್ ನಗರದ ಮಹದೇವಸ್ವಾಮಿ ಹಾಗು ಪತ್ನಿ ನಮ್ಮ ಮಗ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದಾನೆ, ಪತ್ತೆಯೇ ಇಲ್ಲ. ನನಗೆ ಆಕ್ಸಿಡೆಂಟ್ ಆಗಿದೆ, ಕಿವಿ ಕೇಳಿಸಲ್ಲ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಂದು ಬಹಳ ನರಹಿಂಸೆ ಕೊಡ್ತಿದ್ದಾರೆ. ದಿನಕ್ಕೆ ನಾಲ್ಕು ನಾಲ್ಕು ಜನ ಬಂದು ಗಲಾಟೆ ಮಾಡ್ತಿದ್ದಾರೆ. ನನ್ನ ಮಗ ಒಂದು ತಿಂಗಳಿಂದ ಪತ್ತೆಯೇ ಇಲ್ಲ. ನನ್ನ ಪತ್ನಿಗೆ ಬಿಪಿ ಜಾಸ್ತಿ, ನಂಗೆ ಕಿವಿ ಕೇಳಿಸಲ್ಲ, ನನ್ನ ಮಗ ಮೊಬೈಲ್ ಬಳಸ್ತಿಲ್ಲ, ಎಲ್ಲಿ ಇದ್ದಾನೆ ಅಂತಾ ಗೊತ್ತಿಲ್ಲ ಅಂತಾ ಅಳಲು ತೋಡಿಕೊಳ್ತಾರೆ.

ಮೈಕ್ರೋ ಫೈನಾನ್ಸ್ ಹಾವಳಿ, 7 ತಿಂಗಳ ಗರ್ಭಿಣಿ ಬೀದಿಪಾಲು | Microfinance Torture in Karnataka | Suvarna News

ಒಟ್ನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಪ್ರಸಾರದ ಬಳಿಕ ರಾಜ್ಯದ ಮೂಲೆ ಮೂಲೆಯಲ್ಲೂ ಕೂಡ ದೂರುಗಳು ಬರುತ್ತಿವೆ. ರಾಜ್ಯ ಸರ್ಕಾರ ಕಿರುಕುಳ ತಪ್ಪಿಸಲು ನಯಾ ರೂಲ್ಸ್ ಮಾಡ್ತಿದೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದ್ನ ಕಾದುನೋಡಬೇಕಾಗಿದೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್: ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ನಟ ದರ್ಶನ್ ದರ್ಪ
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ