ವೈದ್ಯರಾಗುವ ವಿದ್ಯಾರ್ಥಿಗಳೇ ಎಚ್ಚರ: ಬೆಂಗಳೂರಲ್ಲಿ ನಡೆಯುತ್ತಿದೆ ಮೆಡಿಕಲ್‌ ಸೀಟ್‌ ದೋಖಾ!

By Sathish Kumar KH  |  First Published Oct 5, 2023, 5:41 PM IST

ವೈದ್ಯರಾಗುವ ಕನಸು ಕಾಣುವ ವಿದ್ಯಾರ್ಥಿಗಳೇ ಎಚ್ಚರ... ನಿಮ್ಮ ಜೀವನ ಹಾಳು ಮಾಡಲು ಮೆಡಿಕಲ್‌ ಸೀಟ್‌ ಸ್ಕ್ಯಾಮ್‌ ತಂಡವು ಹೊಂಚು ಹಾಕುತ್ತಿದೆ.


ಬೆಂಗಳೂರು (ಅ.05): ವಿದ್ಯಾರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಪಿಯುಸಿಯಲ್ಲಿ ರ್ಯಾಂಕ್‌ ಪಡೆದು, ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಾಗದೇ ನೊಂದಿರುವ ವಿದ್ಯಾರ್ಥಿಗಳು ಎಚ್ಚರಿಕೆವಹಿಸುವ ವರದಿ ಇದಾಗಿದೆ. ಅಂದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮೆಡಿಕಲ್‌ ಸೀಟ್ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ. 

ಬೆಂಗಳೂರಿನಲ್ಲಿ ಮತ್ತೆ ಮೆಡಿಕಲ್ ಸೀಟ್ ದೋಖಾ ಬೆಳಕಿಗೆ ಬಂದಿದೆ. ಮೆಡಿಕಲ್ ಸೀಟ್ ಕೊಡಿಸುವ ಆಮಿಷವೊಡ್ಡಿ ಲಕ್ಷ ಲಕ್ಷ ಗುಳುಂ ಮಾಡಿರುವ ಘಟನೆ ವರದಿಯಾಗಿದೆ. ಮೆಡಿಕಲ್ ಓದಬೇಕು ವೈದ್ಯರಾಗಬೇಕು ಅನ್ನೋ ಆಸೆ ಇಟ್ಕೊಂಡಿದ್ದ ವಿದ್ಯಾರ್ಥಿಗೆ ದೋಖಾ ಮಾಡಲಾಗಿದೆ. ಮೈಸೂರು ಮೂಲದ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಲಾಗಿದೆ. ಬೆಂಗಳೂರಿನ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಸಂಸ್ಥೆಯಿಂದ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮೋಸ ಹೋಗಿರುವ ವಿದ್ಯಾರ್ಥಿ ಕಣ್ಣೀರು ಹಾಕುತ್ತಿದ್ದಾನೆ.

Latest Videos

undefined

ಬೆಂಗಳೂರು ಬಿಎಂಟಿಸಿ ಬಸ್‌ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು: ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು

ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ನೀಟ್‌ ಪರೀಕ್ಷೆಯಲ್ಲಿ ಸ್ವಲ್ಪ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಹೇಗಾದರೂ ಮಾಡಿ ವೈದ್ಯಕೀಯ ಸೀಟು ಗಿಟ್ಟಿಸಬೇಕೆಂಬ ಆಸೆಯಿಂದ ಮತ್ತೊಮ್ಮೆ ನೀಟ್‌ ಪರೀಕ್ಷೆಗೆ ಸಿದ್ಧತೆ ಮಾಡಲು ಕುಳಿತಿದ್ದಾನೆ. ಅಷ್ಟರಲ್ಲಾಗಲೇ ನೀಟ್‌ ಫೇಲಾದವರ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಹುಡುಕಿದ ಮೋಸ ಮಾಡುವ ಕಂಪನಿಯೊಂದು ವಿದ್ಯಾರ್ಥಿಯ ಅಣ್ಣನ ಮೊಬೈಲ್‌ಗೆ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ಮೆಸೇಜ್‌ ಮಾಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಮೊಬೈಲ್‌ಗೆ ಕರೆ ಮಾಡಿದ ಅನಾಮಿಕರು, ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ‌. ನಿಮ್ಮ ಮಗನಿಗೆ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ ಎಂದು ಡೀಲ್‌ ಮಾಡಿಕೊಂಡಿದ್ದಾರೆ. 

ಒಂದು ಮೆಡಿಕಲ್‌ ಮೆಡಿಕಲ್ ಸೀಟ್ ಗೆ 60 ಲಕ್ಷ ಆಗುತ್ತದೆ ಎಂದು ಹೇಳಿದ್ದಾರೆ. ಇದಾದ ನಂತರ ಬೆಂಗಳೂರಿಗೆ ಬರುವಂತೆ ಹೇಳಿ ಕನ್ನಿಂಗ್ ಹ್ಯಾಮ್ ರಸ್ತೆಯ ಕಚೇರಿಗೆ ಕರೆಯಿಸಿಕೊಂಡು ಡೀಲ್‌ ಮಾಡಿಕೊಂಡಿದ್ದಾರೆ. ಈ ವೇಳೆ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಓರ್ವ ವ್ಯಕ್ತಿಯ ಪರಿಚಯ ಮಾಡಿಕೊಟ್ಟಿದ್ದು, ಸರ್ಕಾರಿ ಕೋಟಾದಲ್ಲೆ ಸೀಟ್ ಸಿಗುತ್ತೆ ಅಂತಾ 3 ಲಕ್ಷ ರೂ. ಅಡ್ವಾನ್ಸ್ ಕೇಳಿದ್ದಾರೆ. ನಂತರ, ನಮ್ಮ ಬಾಸ್ ಅಂತಾ ಮತ್ತೊಬ್ಬ ವ್ಯಕ್ತಿಯ ಪರಿಚಯ ಮಾಡಿಸಿದ ಅಸಾಮಿ ಅವರಿಗೆ 10 ಲಕ್ಷ ರೂ. ನೀಡದರೆ ಸೀಟ್ ಪಕ್ಕಾ ಅಗುತ್ತೆ ಅಂತಾ ಆಮಿಷವೊಡ್ಡಿದ್ದಾರೆ.

ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿ ವರದಕ್ಷಿಣೆಗೋಸ್ಕರ ಮಡದಿಯನ್ನೇ ಕೊಲೆಗೈದ ಪಾಪಿ ಗಂಡ

ಮೆಡಿಕಲ್‌ ಸೀಟ್‌ ಕನ್ಫರ್ಮ್‌ ಹೆಸರಲ್ಲಿ ಒಟ್ಟು 10.80 ಲಕ್ಷ ರೂ. ವಸೂಲಿ ಮಾಡಿದ ಗ್ಯಾಂಗ್‌ಗೆ ಮೆಡಿಕಲ್‌ ಸೀಟ್‌ ಬಗ್ಗೆ ಸಿಕ್ಕಿಲ್ಲವೆಂದು ಅಭ್ಯರ್ಥಿಯ ಪೋಷಕರು ಹೇಳಿದ್ದಾರೆ. ಇದಾದ ನಂತರ ಲಿಸ್ಟ್‌ ಬರುತ್ತದೆ ಎಂದು ಹೇಳಿದ ಅಸಾಮಿಗಳು ನಂತರ ಪೋನ್ ಸ್ವೀಕರಿಸದೆ ಸೈಲೆಂಟ್‌ ಆಗಿದ್ದಾರೆ. ನಂತರ ಕನ್ನಿಂಗ್ ಹ್ಯಾಮ್ ಕಚೇರಿಗೆ ಬಂದು ನೋಡಿದರೂ ಅಲ್ಲಿಯೂ ಅಸಾಮಿಗಳು ಪತ್ತೆಯಾಗಿಲ್ಲ. ನಂತರ, ತಾವು ಮೋಸ ಹೋಗಿರುವ ಬಗ್ಗೆ ಅರಿತುಕೊಂಡ ವಿದ್ಯಾರ್ಥಿಯ ಪೋಷಕರು 5 ಜನರ ದೋಖಾ ಗ್ಯಾಂಗ್‌ನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲಿಯೇ ವಂಚನೆ ಮಾಡಿದ್ದ ಐವರನ್ನ ಬಂಧಿಸಿದ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದು, ಮತ್ತಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. 

click me!