ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿ ವರದಕ್ಷಿಣೆಗೋಸ್ಕರ ಮಡದಿಯನ್ನೇ ಕೊಲೆಗೈದ ಪಾಪಿ ಗಂಡ

ಶಾಲೆಯಲ್ಲಿ ಓದುತ್ತಿರುವಾಗಲೇ ಪ್ರೀತಿಸಿ ಮನೆಯವರ ಕೈಕಾಲು ಹಿಡಿದು ಮದುವೆ ಮಾಡಿಕೊಂಡ ಪಾಗಲ್‌ ಪ್ರೇಮಿ, ವರದಕ್ಷಿಣೆಗಾಗಿ ಮುದ್ದಾದ ಮಡದಿಯನ್ನೇ ಕೊಲೆ ಮಾಡಿದ್ದಾನೆ.

Bengaluru News Beloved husband killed his wife for dowry harassment sat

ಬೆಂಗಳೂರು (ಅ.05): ಶಾಲೆಯಲ್ಲಿ ಓದುವಾಗಿನಿಂದಲೇ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮನೆಯವರ ಕೈಕಾಲು ಹಿಡಿದು ಮದುವೆಯನ್ನು ಮಾಡಿಕೊಂಡು ಎರಡು ವರ್ಷಗಳ ಸಂಸಾರವನ್ನೂ ಮಾಡಿದ್ದಾರೆ. ಆದರೆ, ಇತ್ತೀಚೆಗೆ ವರಸೆ ಬದಲಿಸಿದ್ದ ಪಾಗಲ್‌ ಪ್ರೇಮಿ ಅಲಿಯಾಸ್‌ ಪತಿರಾಯ ನೀನು ಲವ್‌ ಮಾಡಿ ಮದುವೆಯಾಗಿದ್ದು, ಈಗ ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆ.

ಈ ದುರ್ಘಟನೆ ಬೆಂಗಳೂರಿನ ಯಲಹಂಕ ಉಪನಗರ 3_ನೇ ಹಂತದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಗಂಡನಿಂದಲೇ ಹೆಂಡತಿಯ ಕೊಲೆ ಮಾಡಲಾಗಿದೆ. ಕೊಲೆ‌ ಮಾಡಿ ಆತ್ಮಹತ್ಯೆ ಎಂಬುವಂತೆ ಬಿಂಬಿಸಿದ್ದ ಗಂಡನ ಕುಕೃತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮೃತ ದುರ್ದೈವಿಯನ್ನು ರೇಖಾ ಎಂದು ಗುರುತಿಸಲಾಗಿದೆ. ಈಕೆಯ ಗಂಡ ಸಂತೋಷ್ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಇನ್ನು ನಿವೇಶನದ ವಿಚಾರವಾಗಿ ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಮನೆಯಲ್ಲಿಯೇ ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿದ್ದಾನೆ.

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಊಹಾಪೋಹಗಳಿಗೆ ತೆರೆ ಎಳೆದ ದತ್ತುಪುತ್ರ ಉಮೇಶ್‌!

ಮನೆಯಲ್ಲಿ ಯಾರೊಬ್ಬರು ಕುಟುಂಬಸ್ಥರಿಗೆ ಅನುಮಾನ ಬಾರದ ಹಾಗೆ ನಾಟಕ ಆಡಲು ಮುಂದಾಗಿದ್ದನು. ಮದುವೆ ಆದಾಗಿನಿಂದಲೂ ಹಣಕ್ಕಾಗಿ ಪೀಡಿಸುತ್ತಾ ಇದ್ದನು. ಇನ್ನು ಪರಸ್ಪರ ಪ್ರೀತಿ ಮಾಡಿದ್ದೇನೆ ಮದುವೆ ಮಾಡಿಕೊಡಿ ಎಂದಾಗಲೇ ಸಂತೋಷ್‌ನಿಗೆ ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಇಷ್ಟಾದರೂ ತನಗೆ ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ. ಈಗ ಕೊಲೆ ಮಾಡಿ ನೇಣು ಬಿಗಿದಿದ್ದಾನೆ. ಸದ್ಯ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ರೇಖಾ ಮತ್ತು ಸತೋಷ್‌ ಶಾಲೆಯಿಂದಲೇ ಪ್ರೀತಿಸುತ್ತಿದ್ದ ಜೋಡಿ. ಸುಮಾರು ನಾಲ್ಕೈದು ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ, ನಂತರ ಮನೆಯವರನ್ನೆಲ್ಲ ಒಪ್ಪಿಸಿ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರು ಮೂಲತಃ ತಮಿಳುನಾಡಿನವರು ಆಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಅನಂತಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. .ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಂತೋಷ್ ಹಾಗೂ ಗೃಹಿಣಿ ರೇಖಾ ದಂಪತಿಗೆ 6 ತಿಂಗಳ ಮುದ್ದಾದ ಹೆಣ್ಣು ಮಗು ಸಹ ಇದೆ. ಚಿಕ್ಕ ಮಗು ಇರುವುದನ್ನೂ ಲೆಕ್ಕಿಸದೇ ಪ್ರೀತಿಸಿ ಮದುವೆಯಾದ ಮಡದಿಯನ್ನು ಕೊಲೆ ಮಾಡಿದ್ದಾನೆ.

Latest Videos
Follow Us:
Download App:
  • android
  • ios