ಬರಪೀಡಿತ 195 ತಾಲ್ಲೂಕುಳಿಗೆ ಹೆಚ್ಚುವರಿ 32 ಸೇರ್ಪಡೆಗೆ ಸಿದ್ಧತೆ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ

By Sathish Kumar KH  |  First Published Oct 5, 2023, 4:14 PM IST

ಕರ್ನಾಟಕದಲ್ಲಿ ಈಗಾಗಲೇ 195 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು , ಇನ್ನೂ 32 ತಾಲೂಕುಗಳನ್ನು ಸೇರಿಸುವ ಬಗ್ಗೆ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.


ಬೆಂಗಳೂರು (ಅ.05): ರಾಜ್ಯದಲ್ಲಿ ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೊಷಣೆ ಮಾಡಲಾಗಿದೆ. ಆದರೆ, ರಾಜ್ಯಾದ್ಯಂತ ತಮ್ಮ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವಂತೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಅಧಿಕಾರಿಗಳ ತಂಡವು ಹೋಗಿ ಪರಿಶೀಲನೆ ಮಾಡಿದ್ದು, ಪುನಃ 32 ತಾಲೂಕುಗಳಲ್ಲಿ ಮಳೆ ಕೊರತೆಯಾಗಿರುವುದು ಕಂಡುಬರುತ್ತಿದೆ. ಹೀಗಾಗಿ, ಮತ್ತೊಮ್ಮೆ ಸಭೆ ಕರೆದು ಬರಪೀಡಿತ ತಾಲೂಕುಗಳನ್ನು ಸೇರ್ಪಡೆ ಮಾಡಿ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ 195 ತಾಲೂಕು ಬರ ಅಂತ ಘೋಷಣೆ ಮಾಡಿದ್ದೇವೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಕೂಡ ಆಗಿತ್ತು. ಕೇಂದ್ರ ಸರ್ಕಾರಕ್ಕೆ ಆನ್ ಲೈನ್ ಮುಖಾಂತರ ಬರಪೀಡಿತ ತಾಲೂಕುಗಳ ಪಟ್ಟಿಗಳನ್ನು ಸಲ್ಲಿಕೆ ಮಾಡಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೆವು. ಜೊತೆಗೆ, ಸೆಪ್ಟೆಂಬರ್ 23 ರಂದು ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರ ಭೇಟಿಗೆ ಸಮಯ ಕೇಳಿದ್ದರೂ, ನಮಗೆ ಸಮಯ ಕೊಟ್ಟಿಲ್ಲ. ಆದರೆ, ನಮ್ಮ ಮನವಿ ಮೇಲೆ ಕೇಂದ್ರ ಬರ ತಂಡ ರಾಜ್ಯಕ್ಕೆ ಬಂದಿದೆ ಎಂದು ಮಾಹಿತಿ ನೀಡಿದರು.

Latest Videos

undefined

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಊಹಾಪೋಹಗಳಿಗೆ ತೆರೆ ಎಳೆದ ದತ್ತುಪುತ್ರ ಉಮೇಶ್‌!

ರಾಜ್ಯದ ಮನವಿ ಮೇರೆಗೆ ಅಜೀತ್ ಕುಮಾರ್ ಸಾಹೂ‌ ನೇತೃತ್ವದ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಿದೆ. ನಾವು ರಾಜ್ಯದ ಬರ ಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ರೈತರಿಗೆ ಆಗಿರುವ ಸಂಕಷ್ಟ ಗಮನಕ್ಕೆ ತಂದಿದ್ದೇವೆ. ಅಂಕಿ ಅಂಶಗಳ ಮನವರಿಕೆ ಮಾಡಿದ್ದೇವೆ. ಇಂದಿನಿಂದ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ‌ ಮಾಡ್ತಾರೆ. ಅವರೊಂದಿಗೆ ತೆರಳಲು ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೂಡ ನೇಮಕ ಮಾಡಿದ್ದೇವೆ. ಕಳೆದ ಆಗಸ್ಟ್ ತಿಂಗಳಲ್ಲಿ ಶೇ.73 ಮಳೆ ಕೊರತೆ ಆಗಿದೆ. ಕೃಷಿ ಚಟುವಟಿಕೆಗೆ ಪೆಟ್ಟು‌ಕೊಟ್ಟಿದೆ. ಈಗ ಬೆಳೆ ಇಳುವರಿ ನೀರಿಕ್ಷೇ ಮಾಡಲು‌ ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಹಸಿರು ಬರ ಬಂದಿದೆ:  ಇನ್ನು ರಾಜಗ್ಯದಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಹಸಿರು ಬರ ನಮಗೆ ಕಾಣಿಸುತ್ತಿದೆ. ಇದರಿಂದಾಗಿ ಬೆಳೆಗಳಲ್ಲಿ ಇಳುವರಿ ನಿರೀಕ್ಷೆ ಮಾಡುವಂತಿಲ್ಲ. ರೈತರು ಮತ್ತು ತಜ್ಞರ ಜೊತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದ್ದು, ಜೊಳ, ತೊಗರಿ, ಶೆಂಗಾ ಎಲ್ಲ ಬೆಳೆಗಳಿದ್ದರೂ ಇಳುವರಿ ಇಲ್ಲವೆಂದು ತಿಳಿಸಿದ್ದಾರೆ. ಹೀಗಾಗಿ, ಕೇಂದ್ರದ ತಮಡಕ್ಕೆ ಆಳವಾಗಿ ಅಧ್ಯಯನ ಮಾಡಲು ‌ಮನವಿ ಮಾಡಿದ್ದೇವೆ. 3 ದಿನಗಳ ಕಾಲ ರಾಜ್ಯದ ಅಧ್ಯಯನ ನಡೆಯುತ್ತದೆ. ಬಳಿಕ ಮತ್ತೆ ಸಭೆ ನಡೆಯಲಿದೆ. ಬರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡಿದ್ದೇವೆ. 195 ತಾಲ್ಲೂಕು ಘೋಷಣೆ ಅಂತಿಮವಲ್ಲ. ಮತ್ತೆ 32 ತಾಲೂಕಿನಲ್ಲಿ ಮಳೆ ಕೊರತೆ ಇದೆ. ಮತ್ತೆ ಸಭೆ ಸೇರಿ ಎರಡನೇ ಪಟ್ಟಿ ಬಿಡುಗಡೆ ‌ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಜೆಡಿಎಸ್‌-ಬಿಜೆಪಿ ಮೈತ್ರಿಗೆ ಶಾಸಕ ಎಸ್‌.ಟಿ. ಸೋಮಶೇಖರ್ ಅಸಮಾಧಾನ: ಮೊದಲ ವಿಕೆಟ್‌ ಪತನ ಫಿಕ್ಸ್‌!

ರಾಜ್ಯದಲ್ಲಿ ಈ ಬಾರಿ ಆಹಾರ ಕೊರತೆ ಆಗುತ್ತದೆ. ಯಾವುದು ಎಷ್ಟು ಅಂತ ಲೆಕ್ಕ ಹಾಕುತ್ತಿದ್ದೇವೆ. ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ಈಗಾಗಲೇ ರಾಜ್ಯದಲ್ಲಿ ಶೇ.28 ಮಳೆ ಕೊರತೆಯಾಗಿದೆ. ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಅಧಿಕಾರಿಗಳು ಗುಡ್ ಅಂದಿದ್ದಾರೆ. ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ‌ನಾವು ಕೊಟ್ಟಿದ್ದೇವೆ. ಮಳೆ ಅಳತೆ‌ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ. ನಿಖರವಾದ ಅಂಕಿ ಅಂಶಗಳನ್ನು ‌ನಾವು ಕೊಟ್ಟಿದ್ದೇವೆ. 4,800 ಕೋಟಿ ರೂ. ಪರಿಹಾರ ನಾವು ಕೇಳಿದ್ದೇವೆ. ಮಾರ್ಗಸೂಚಿ ಪ್ರಕಾರ ನಾವು ಇಷ್ಟೇ ಪರಿಹಾರ ಕೇಳಲು ಆಗುವುದು. ರಾಜ್ಯ ಮಾತ್ರ ಮೊದಲು ಬರ ಘೋಷಣೆ ‌ಮಾಡಿದ್ದೇವೆ. ನಮಗಿಂತ ಹೆಚ್ಚು ಮಳೆ ಕೊರತೆ ಬೇರೆ ರಾಜ್ಯದಲ್ಲಿ ಇದೆ. ಆದ್ರೆ ಬರವೆಂದು ನಾವು‌ ಮಾತ್ರ ಘೋಷಣೆ ಮಾಡಿದ್ದು, ನಾವು ಬರದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ನ್ಯಾಯಯುತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತದೆ. ನಮ್ಮ ಮನವಿಗೆ ಸ್ಪಂದನೆ ಮಾಡ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

click me!