ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಗ ಶರತ್ ಅಶೋಕ್ ಗಿನ್ನೆಸ್ ರೆಕಾರ್ಡ್; ಸಾಧನೆಯ ಹಾದಿ ಇಲ್ಲಿದೆ ನೋಡಿ!

Published : Aug 14, 2026, 05:04 PM IST
R Ashok son Sharath Ashoka Guinness World Record

ಸಾರಾಂಶ

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ಲಭಿಸಿದೆ.

ಬೆಂಗಳೂರು (ಆ.14): ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ಭಾರತದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ 'ಅಧಿಕೃತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' (Guinness World Records) ನಿರ್ಮಿಸಿದ್ದಾರೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿರುವ ಈ ಸಾಧನೆಗಾಗಿ ಅವರಿಗೆ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ದೊರೆತಿದೆ.

ಸಾಗರದಾಳದಲ್ಲಿ ಸಾಹಸಮಯ ಐತಿಹಾಸಿಕ ಸಾಧನೆ

ಅಂಡಮಾನ್ & ನಿಕೋಬಾರ್‌ ದ್ವೀಪಗಳ ಸ್ವರಾಜ್‌ದ್ವೀಪದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆದಿತ್ತು. ಸಾಗರದ ಅತ್ಯಂತ ಆಳದಲ್ಲಿ 'ಅತಿ ದೊಡ್ಡ ಭಾರತೀಯ ತ್ರಿವರ್ಣ ಧ್ವಜ'ವನ್ನು ಅನಾವರಣಗೊಳಿಸುವ (Largest Underwater Flag Unfurl) ಸಾಹಸಮಯ ಪ್ರಯತ್ನದಲ್ಲಿ ಶರತ್ ಅಶೋಕ್ ಪ್ರಮುಖ ಭಾಗವಾಗಿದ್ದರು. ಅಂಡಮಾನ್ ಆಡಳಿತ ಮಂಡಳಿಯಿಂದ ಲೋಕ್ ನಿವಾಸ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ, ನಿವೃತ್ತ ಅಡ್ಮಿರಲ್ ಹಾಗೂ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಡಿ. ಕೆ. ಜೋಶಿ ಅವರಿಂದ ಶರತ್ ಅಶೋಕ್ ಅವರು ಗಿನ್ನೆಸ್ ಪ್ರಮಾಣಪತ್ರ ಮತ್ತು ಪದಕವನ್ನು ಸ್ವೀಕರಿಸಿದರು.

ಒಬ್ಬ ತಂದೆಯಾಗಿ ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆ: ಆರ್. ಅಶೋಕ್ ಭಾವುಕ!

ತಮ್ಮ ಮಗನ ಈ ಅಪರೂಪದ ಹಾಗೂ ದೇಶಪ್ರೇಮದ ಸಾಧನೆಯನ್ನು ಕಂಡು ತಂದೆ ಆರ್. ಅಶೋಕ್ ಅವರು ತೀವ್ರ ಭಾವುಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

'ಒಬ್ಬ ತಂದೆಯಾಗಿ ನನಗೆ ಇದು ಅಪಾರ ಹೆಮ್ಮೆ ಮತ್ತು ಭಾವುಕತೆಯ ಕ್ಷಣ. ನಮ್ಮ ತ್ರಿವರ್ಣ ಧ್ವಜವನ್ನು ಸಾಗರದಾಳದಲ್ಲಿ ಹಾರಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಭಾಗವಾಗಲು ಅಸಾಧಾರಣ ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ಶ್ರೇಷ್ಠ ತಂಡಕಾರ್ಯ ಅಗತ್ಯವಿತ್ತು. ದೇಶಕ್ಕೆ ಹೆಮ್ಮೆ ತರುವ ಇಂತಹ ಸಾಧನೆಯಲ್ಲಿ ನನ್ನ ಮಗ ಭಾಗಿಯಾಗಿರುವುದನ್ನು ನೋಡುವುದು ಪದಗಳಲ್ಲಿ ವ್ಯಕ್ತಪಡಿಸಲಾಗದ ಅನುಭವ. ಶರತ್, ನೀನು ಇನ್ನಷ್ಟು ಆಳಕ್ಕೆ ಇಳಿಯುತ್ತಾ, ಇನ್ನಷ್ಟು ಎತ್ತರಕ್ಕೆ ಏರುತ್ತಿರು!' ಎಂದು ಆರ್. ಅಶೋಕ್ ಹಾರೈಸಿದ್ದಾರೆ.

ಶರತ್ ಅಶೋಕ್ ಅವರ ಈ ಐತಿಹಾಸಿಕ ಸಾಧನೆಗೆ ರಾಜ್ಯದ ಹಲವು ರಾಜಕೀಯ ಗಣ್ಯರು, ಸಾಮಾಜಿಕ ಮುಖಂಡರು ಹಾಗೂ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನಸಿನ ರೆಕ್ಕೆ ಕಟ್ಟಿದ ಕಾರ್ಕಳದ ಹುಡುಗಿ ಉಡುಪಿಯ ಮೊದಲ ಮಹಿಳಾ ಪೈಲಟ್! ಕರ್ನಾಟಕದಲ್ಲಿ ಮಹಿಳಾ ಪೈಲಟ್‌ಗಳೆಷ್ಟು?
ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕದ ಗರಿ; ಜಿಲ್ಲಾವಾರು ಪದಕ ವಿಜೇತರ ಪಟ್ಟಿ ಇಲ್ಲಿದೆ ನೋಡಿ!