
ಬೆಂಗಳೂರು (ಅ.30): ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು.ಹೆಚ್ಚಿಸಲು ನಿರ್ಧರಿಸಿದ್ದು ಪರಿಷ್ಕೃತ ದರ ನ.1ರಂದು ಜಾರಿಗೆ ಬರಲಿದೆ. ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಹೊಸದರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡುವಾಗಿ ಕೆಎಂಎಫ್ ಮೂಲಗಳು ಮಾಹಿತಿ ನೀಡಿವೆ.
16 ಹಾಲು ಒಕ್ಕೂಟಗಳು ಪರಿಷ್ಕೃತ ದರದಂತೆ ಹಾಲು ಉತ್ಪಾದಕರಿಗೆ ನ.1ರಿಂದ 7 ರು.ಹೆಚ್ಚುವರಿ ಹಣ ಸೇರಿಸಿ ಕೊಡಬೇಕಿದೆ. ವಿವಿಧ ಒಕ್ಕೂಟಗಳಿಂದ ರೈತರಿಗೆ ಪ್ರತೀ ಲೀಟರ್ ಹಾಲಿಗೆ ಸಿಗುವ ದರ ಇಂತಿದೆ.
ವಿಮೂಲ್ 40.40ರು (33.40 ರು) ನಂತೆ ಡೈರಿ ಕೋಆಪರೇಟಿವ್ ಸೊಸೈಟಿಗಳು ಹಾಲು ಉತ್ಪಾದಕರಿಗೆ ಹಣ ನೀಡಲಿವೆ. ಅಂದರೆ ಸರಾಸರಿ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 42.24 ರು. ಸಿಗಲಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಪ್ರತೀ ಲೀ. ಹಾಲಿಗೆ ನೀಡುವ ಪ್ರೋತ್ಸಾಹ ಧನ 5 ರು.ಕೂಡ ಸೇರಲಿದೆ.
ರಾಜ್ಯ ಸಚಿವ ಸಂಪುಟವು ಪ್ರತಿ ಲೀಟರ್ ಹಾಲಿನ ದರವನ್ನು 8 ರು.ಹೆಚ್ಚಿಸಿದ್ದು ಈ ಪೈಕಿ 7 ರು. ಹಾಲು ಉತ್ಪಾದಕರಿಗೆ ಮತ್ತು 1 ರು. ಕೆಎಂಎಫ್‌ಗೆ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ದರ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಕೆಎಂಎಫ್ ಅಧಿಕಾರಿಗಳು ನಿರತರಾಗಿದ್ದು ಶುಕ್ರವಾರ ಹೊಸ ದರಪಟ್ಟಿ ಪ್ರಕಟಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ