ಕೊಡಗು - ಕೇರಳ ಗಡಿ ಸಂಪೂರ್ಣ ಬಂದ್ : 'ಪ್ರವೇಶವಿಲ್ಲ'

Suvarna News   | Asianet News
Published : May 09, 2021, 03:40 PM IST
ಕೊಡಗು - ಕೇರಳ ಗಡಿ  ಸಂಪೂರ್ಣ ಬಂದ್ : 'ಪ್ರವೇಶವಿಲ್ಲ'

ಸಾರಾಂಶ

 ದಿನವೂ ರಾಜ್ಯದಲ್ಲಿ ಏರಿಕೆಯಾಗುತ್ತಲಿದೆ ಕೊರೋನಾ ಸೋಂಕಿನ ಗತಿ  ಕೇರಳ - ಕರ್ನಾಟಕ ಬಾರ್ಡರ್ ಕಂಪ್ಲೀಟ್ ಬಂದ್ ಎಮರ್ಜೆನ್ಸಿ ಇದ್ದರೆ ಮಾತ್ರ ಪ್ರವೇಶ - ಷರತ್ತು ಅನ್ವಯ

ಕೊಡಗು (ಮೇ.09):  ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿದೆ. ದಿನವೂ ಸೋಂಕಿನ ಗತಿ ಏರುತ್ತಲೇ ಇದ್ದು, ಅಬ್ಬರ ಇಳಿಸಲು ಸರ್ಕಾರ ಅನೇಕ ಸ್ಟ್ರಿಕ್ಟ್ ರೂಲ್ಸ್‌ ಜಾರಿ ತಂದಿದೆ. ಇದೀಗ ನಾಳೆಯಿಂದ ಲಾಕ್‌ಡೌನ್ ಮಾಡಲಾಗುತ್ತಿದ್ದು ಗಡಿಗಳನ್ನು ಬಂದ್ ಮಾಡಲಾಗುತ್ತಿದೆ. 

ಕೊಡಗು - ಕೇರಳದ  ಕರಿಕೆ, ಕುಟ್ಟ, ಮಾಕುಟ್ಟದಲ್ಲಿರುವ ಅಂತಾರಾಜ್ಯ ಗಡಿ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.  ಈ ಮೂಲಕ ಅನಗತ್ಯ ಓಡಾಟಕ್ಕೆ ಕಂಪ್ಲೀಟ್ ಬ್ರೇಕ್ ಹಾಕಲಾಗುತ್ತಿದೆ. 

ಸೋಂಕು ಹೆಚ್ಚಳ: ರಾಜ್ಯದಿಂದ ತಮಿಳುನಾಡು, ಕೇರಳಕ್ಕೆ ರೈಲು ಸಂಚಾರ ಸ್ಥಗಿತ

ನಾಳೆಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದ್ದು, ಗಡಿಯಲ್ಲಿ ಎರಡೂ ರಾಜ್ಯಗಳು ಜನರ ಪ್ರವೇಶ ತಡೆಯಲು ಕಠಿಣ ಕ್ರಮ ಕೈಗೊಂಡಿವೆ. 

ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ..

ತುರ್ತು ಕಾರ್ಯ ಇದ್ದಲ್ಲಿ ಮಾತ್ರವೇ ಅಂತಾರಾಜ್ಯ ಓಡಾಟ ನಡೆಸಬಹುದಾಗಿದೆ. ಆದರೆ ಅನಗತ್ಯವಾಗಿ ಓಡಾಡಲು ಯಾವುದೇ ಅವಕಾಶ ಇರದು. ತುರ್ತು ಸಂಚಾರ ಮಾಡಬೇಕಾದವರಿಗೆ ಕೆಲವು ನಿಯಮಗಳಿದೆ.  rtpcr ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರವೇ ಪ್ರವೇಶಕ್ಕೆ ಅವಕಾಶ ಇರಲಿದೆ.

ಎರಡೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚು ಹೆಚ್ಚೇ ದಾಖಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕಠಿಣ ಕರ್ಫ್ಯೂ ಹೇರಿ  ಜನರ ಓಡಾಟವನ್ನು ಬಂದ್ ಮಾಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ