Karnataka Police: ನ್ಯೂ ಇಯರ್‌ಗೆ ಐಪಿಎಸ್‌ ಅಧಿಕಾರಿಗಳ ಟ್ರಾನ್ಸ್‌ಫರ್‌..!

Kannadaprabha News   | Asianet News
Published : Dec 30, 2021, 09:53 AM IST
Karnataka Police: ನ್ಯೂ ಇಯರ್‌ಗೆ ಐಪಿಎಸ್‌ ಅಧಿಕಾರಿಗಳ ಟ್ರಾನ್ಸ್‌ಫರ್‌..!

ಸಾರಾಂಶ

*  ಬೆಂಗಳೂರು ಪೊಲೀಸ್‌ ಆಯುಕ್ತರ ಬದಲಾವಣೆ ಸಂಭವ *  ಕಮಲ್‌ ಪಂತ್‌ ಜಾಗಕ್ಕೆ ದಯಾನಂದ್‌? *  ರಾಮ್‌ ನಿವಾಸ್‌ ಸಪೆಟ್‌, ರೋಹಿಣಿ ಕಟೋಚ್‌ ಸಪೆಟ್‌ ದಂಪತಿಗೆ ಡಿಐಜಿ ಪಟ್ಟ ಸಂಭವ  

ಬೆಂಗಳೂರು(ಡಿ.30):  ಹೊಸ ಸಂವತ್ಸರದ(New Year) ಸಂಭ್ರಮದ ಹೊತ್ತಿನಲ್ಲೇ ರಾಜ್ಯ ಪೊಲೀಸ್‌ ಇಲಾಖೆಗೆ(Police Department) ಮೇಜರ್‌ ನಡೆಸಲು ರಾಜ್ಯ ಸರ್ಕಾರ(Government of Karnataka) ಮುಂದಾಗಿದ್ದು, ಜನವರಿ ಮೊದಲ ವಾರದಲ್ಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಸೇರಿದಂತೆ ಪ್ರಮುಖ ಐಪಿಎಸ್‌ ಅಧಿಕಾರಿಗಳು(IPS officers)ವರ್ಗಾವಣೆಗೊಳ್ಳುವ ಸಾಧ್ಯತೆಗಳಿವೆ.

ಮುಂದಿನ ವಿಧಾನಸಭಾ ಚುನಾವಣೆ(Karnataka Assembly Election) ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್‌ ಇಲಾಖೆಯ ಸರ್ಜರಿಗೆ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬೊಮ್ಮಾಯಿ(Basavaraj Bommai) ಅವರು ಗುರುವಾರ ಸಭೆ ನಡೆಸಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra), ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌(Praveen Sood) ಮಾತ್ರವಲ್ಲದೆ ಪಕ್ಷದ ಹಿರಿಯರ ಸಲಹೆ ಪಡೆದು ಅಂತಿಮವಾಗಿ ಐಪಿಎಸ್‌ ಅಧಿಕಾರಿಗಳ ವರ್ಗ ಪಟ್ಟಿಗೆ ಮುಖ್ಯಮಂತ್ರಿಗಳು ಅಂಕಿತ ಹಾಕಲಿದ್ದಾರೆ. ಇನ್ನೊಂದೆಡೆ ಆಯಕಟ್ಟಿನ ಹುದ್ದೆ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ಪ್ರಮುಖ ಹುದ್ದೆ ಪಡೆಯಲು ಲಾಬಿ ನಡೆಸಿದ್ದಾರೆ.

Karnataka Politics: ಆಮ್‌ ಆದ್ಮಿ ಪಕ್ಷದತ್ತ ಭಾಸ್ಕರ್‌ ರಾವ್‌ ಹೆಜ್ಜೆ?

ಬೆಂಗಳೂರು ಪೊಲೀಸ್‌ ಆಯುಕ್ತ ಯಾರು?

ಬೆಂಗಳೂರು ಪೊಲೀಸ್‌ ಆಯುಕ್ತರಾಗಿ ಹದಿನೇಳು ತಿಂಗಳು ಆಡಳಿತ ನಡೆಸಿರುವ ಕಮಲ್‌ ಪಂತ್‌(Kamal Pant) ಅವರು ಕೊರೋನಾ ಸೋಂಕಿನ ಎರಡನೇ ಅಲೆ ವೇಳೆ ಲಾಕ್‌ಡೌನ್‌ ಅನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲದೆ ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟು ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುತರವಾದ ಯಾವುದೇ ಆರೋಪ ಅಥವಾ ವಿವಾದಗಳಿಲ್ಲದೆ ಹೋದರೂ ‘ನಿರ್ದಿಷ್ಟ’ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರು ಆಯುಕ್ತರ ಬದಲಾವಣೆಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೆಲ ಹಿರಿಯ ಅಧಿಕಾರಿಗಳ ಲಾಬಿ ಕೂಡ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿಬಂದಿವೆ.

ಕಮಲ್‌ ಪಂತ್‌ ಅವರ ನಿರ್ಗಮನದಿಂದ ತೆರವಾಗುವ ಸ್ಥಾನಕ್ಕೆ ಗುಪ್ತದಳದ ಮುಖ್ಯಸ್ಥ ಬಿ.ದಯಾನಂದ್‌, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್‌ ರೆಡ್ಡಿ, ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅರುಣ್‌ ಚಕ್ರವರ್ತಿ ಹಾಗೂ ನೇಮಕಾತಿ ವಿಭಾಗದ ಅಮ್ರತ್‌ ಪಾಲ್‌ ಹೆಸರು ಕೇಳಿಬಂದಿದೆ. ಇವರಲ್ಲಿ ದಯಾನಂದ್‌ ಅವರ ಹೆಸರು ಮುಂಚೂಣಿಯಲ್ಲಿದೆ.

ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ಗೆ ಮುಂಬಡ್ತಿ:

ಸೇವಾ ಹಿರಿತನದ ಆಧಾರದ ಮೇರೆಗೆ ಬೆಂಗಳೂರು ಪೂರ್ವ ವಿಭಾಗದ ಆಯುಕ್ತ ಎಸ್‌.ಮುರುಗನ್‌, ಸಿಐಡಿ ಐಜಿಪಿ ಕೆ.ವಿ.ಶರತ್‌ಚಂದ್ರ ಹಾಗೂ ನಂಜುಂಡಸ್ವಾಮಿ ಅವರಿಗೆ ಎಡಿಜಿಪಿಗಳಾಗಿ ಹಾಗೂ ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌, ಹುಬ್ಬಳ್ಳಿ-ಧಾರವಾಡ ಆಯುಕ್ತ ಲಾಬೂರಾಮ್‌, ವಾರ್ತಾ ಇಲಾಖೆ ಆಯುಕ್ತ ಪಿ.ಎಸ್‌.ಹರ್ಷ ಹಾಗೂ ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಐಜಿಪಿಗಳಾಗಿ ಮುಂಬಡ್ತಿ ಪಡೆಯಲಿದ್ದಾರೆ.

Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

ಹಿರಿಯ ಐಪಿಎಸ್‌ ಅಧಿಕಾರಿಗಳಾದ ರಾಮ್‌ ನಿವಾಸ್‌ ಸಪೆಟ್‌ ಹಾಗೂ ಡಾ.ರೋಹಿಣಿ ಕಟೋಚ್‌ ಸಪೆಟ್‌ ದಂಪತಿ ಡಿಐಜಿಗಳಾಗಿ ಪದನ್ನೋತಿ ಪಡೆಯಲಿದ್ದಾರೆ. ಮುಂಬಡ್ತಿ ಬಳಿಕ ಬೆಂಗಳೂರು ನಗರದ ಹೆಚ್ಚುವರಿ ಆಯುಕ್ತ ಹುದ್ದೆಗೆ ಹರ್ಷ ಹಾಗೂ ಲಾಬೂರಾಮ್‌ ಹೆಸರು ಕೇಳಿಬಂದಿದೆ. ಸಂಚಾರ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಅವರ ಸ್ಥಾನಪಲ್ಲಟವಾಗಬಹುದು ಎನ್ನಲಾಗಿದೆ.

ಡಿಸಿಪಿಗಳ ಬದಲಾವಣೆ:

ಬೆಂಗಳೂರು ನಗರದ ಉತ್ತರ ವಿಭಾಗ ಹೊರತುಪಡಿಸಿದರೆ ಇನ್ನುಳಿದ ಎಲ್ಲ ಡಿಸಿಪಿಗಳ ಒಂದು ವರ್ಷದ ಅವಧಿ ಮುಗಿದಿದೆ. ಹೀಗಾಗಿ ಜಿಲ್ಲೆಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿರುವ ಕೆಲ ಅಧಿಕಾರಿಗಳು ರಾಜಧಾನಿಗೆ ಪ್ರವೇಶ ಪಡೆಯಬಹುದು ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್