Weekend-Night Curfew ವೀಕೆಂಡ್‌, ನೈಟ್‍ ಕರ್ಫ್ಯೂ ಸಂಬಂಧ ಅಶ್ವತ್ಥ್ ನಾರಾಯಣ ಭೇಟಿಯಾದ ಹೋಟೆಲ್ ಮಾಲೀಕರ ಸಂಘ

Published : Jan 18, 2022, 04:28 PM IST
Weekend-Night Curfew ವೀಕೆಂಡ್‌, ನೈಟ್‍ ಕರ್ಫ್ಯೂ ಸಂಬಂಧ ಅಶ್ವತ್ಥ್ ನಾರಾಯಣ ಭೇಟಿಯಾದ ಹೋಟೆಲ್ ಮಾಲೀಕರ ಸಂಘ

ಸಾರಾಂಶ

* ಸಚಿವ ಅಶ್ವಥ್ ನಾರಾಯಣ್ ಭೇಟಿ ಮಾಡಿದ ರಾಜ್ಯ ಹೋಟೆಲ್ ಮಾಲೀಕರ ಸಂಘ * ವಿಕಾಸಸೌಧದಲ್ಲಿ ಭೇಟಿ ಮಾಡಿ ಮಾತುಕತೆ.. * ವೀಕೆಂಡ್ ಕರ್ಫ್ಯೂ ತೆಗೆಯಬೇಕು ಅಂತ ಮನವಿ

ಬೆಂಗಳೂರು, (ಜ.18): ಸರ್ಕಾರದ ನೈಟ್‍ ಕರ್ಫ್ಯೂ ಮತ್ತು ವೀಕೆಂಡ್‌ ಕರ್ಫ್ಯೂಗೆ  (Weekedn and Night Curfew) ಭಾರೀ ವಿರೋಧ ವ್ಯಕ್ತವಾಗಿದೆ. ಹೊಟೇಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಹಾಗೂ ಮದುವೆ ಮಂಟಪಗಳ ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಸಂಬಂಧ ರಾಜ್ಯ ಹೋಟೆಲ್‌ ಮಾಲೀಕರ ಸಂಘ(Hotel Owners Association) ಇಂದು (ಜ.18) ವಿಕಾಸಸೌಧದಲ್ಲಿ ಸಚಿವ ಅಶ್ವತ್ಥ್ ನಾರಾಯಣ (Dr CN Ashwath Narayan) ಅವರನ್ನು ಭೇಟಿ ಮಾಡದ್ದು, ವೀಕೆಂಡ್ ಕರ್ಫ್ಯೂ ಬೇಡ. ಹಾಗೇ ನೈಟ್ ಕರ್ಫ್ಯೂ ರಾತ್ರಿ 11ರಿಂದ ಮಾಡಿ ಎಂದು ಮನವಿ ಮಾಡಿದರು.

Weekend Curfew ಹಿಂತೆಗೆತಕ್ಕೆ ಹೋಟೆಲ್‌ ಮಾಲೀಕರ ಸಂಘ, ಮದ್ಯ ವ್ಯಾಪಾರಿಗಳಿಂದ ಆಗ್ರಹ!

ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅನುವು ಮಾಡಿಕೊಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ ಅವಧಿಯನ್ನು ಜ.31ರ ವರೆಗೆ ವಿಸ್ತರಿಸಲು ತೀರ್ಮಾನಿಸಿರುವ ಬೆನ್ನಲ್ಲೇ ರಾಜ್ಯ ಹೊಟೇಲ್ ಮಾಲೀಕರ ಸಂಘ, ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ, ಕರವೇ ಹೊಟೇಲ್ ಉದ್ದಿಮೆದಾರರ ಸಂಘ, ಕರ್ನಾಟಕ ಪ್ರದೇಶ ಹೊಟೇಲ್ ಮಾಲೀಕರ ಸಂಘ, ಬೆಂಗಳೂರು ಬಂಡ್ಸ್ ಹೊಟೇಲ್ ಮಾಲೀಕರ ಸಂಘ, ಕರ್ನಾಟಕ ಕ್ಯಾಟರಿಂಗ್ ಅಸೋಸಿಯೇಷನ್, ದರ್ಶಿನಿ ಹೊಟೇಲ್ ಮತ್ತು ಬೇಕರಿ ಮಾಲೀಕರ ಸಂಘ ಹಾಗೂ ಮದುವೆ ಮಂಟಪಗಳ ಮಾಲೀಕರ ಸಂಘದವರು ಸದ್ಯ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.

ವೀಕೆಂಡ್ ಮತ್ತು ನೈಟ್‍ ಕರ್ಫ್ಯೂನಿಂದಾಗಿ ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳ ಉದ್ಯಮ ನೆಲ ಕಚ್ಚಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಮದುವೆ ಸೀಜನ್ ಶುರುವಾಗಿದೆ. ಆದರೂ ಮಂಟಪ ಬುಕ್ ಮಾಡಲು ಜನ ಮುಂದೆ ಬರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ನಾವು ನಷ್ಟದಲ್ಲಿದ್ದೇವೆ. ಹೀಗಾಗಿ ನಮ್ಮ ಸಂಕಷ್ಟ ಬಗೆಹರಿಸಲು ಸರ್ಕಾರ ಸಹಕಾರ ನೀಡಬೇಕು ಎಂದು ಅವರು ಅಲವತ್ತುಕೊಂಡಿದ್ದಾರೆ.

ಕೊರೊನಾದಿಂದಾಗಿ ಜನ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಸರಳ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಲವಾರು ಕಲ್ಯಾಣ ಮಂಟಪಗಳು ಮುಚ್ಚಿಹೋಗಿದ್ದು, ನಿರ್ಬಂಧ ಇದೇ ರೀತಿ ಮುಂದುವರಿದರೆ ನಾವು ಛತ್ರಗಳಿಗೆ ಬೀಗ ಜಡಿಯಬೇಕಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಶುಕ್ರವಾರ ಅಂತಿಮ ನಿರ್ಧಾರ
ವೀಕೆಂಡ್ ಕರ್ಫ್ಯೂ (Weekend Curfew) ಮತ್ತು ನೈಟ್ ಕರ್ಫ್ಯೂ (Night Curfew) ತೆರವುಗೊಳಿಸುವಂತೆ ಹಲವರು ಮನವಿ ಮಾಡುತ್ತಿದ್ದಾರೆ. ಅಲ್ಲದೇ ಕರ್ಫ್ಯೂಗಳ ಬಗ್ಗೆ ತಜ್ಞರಲ್ಲೇ ಭಿನ್ನಾಭಿಪ್ರಾಯವಿದೆ ಎಂದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ತಜ್ಞರ ದ್ವಂದ ಅಭಿಪ್ರಾಯಗಳ ಹಿನ್ನೆಲೆ, ಶುಕ್ರವಾರ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ತಜ್ಞರು ಶುಕ್ರವಾರ ನೀಡುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ತಜ್ಞರ ಸಮಿತಿಯ ಕೆಲ ತಜ್ಞರು ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಅವಶ್ಯಕತೆ ಇಲ್ಲ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಪ್ರತಿಯೊಂದು ಮನೆಯಲ್ಲೂ ಶೀತ, ತಲೆನೋವು, ಜ್ವರ ಇರುವ ರೋಗಗಳು ಇದ್ದಾರೆ. ಹೀಗಾಗಿ ಕರ್ಫ್ಯೂ ಮಾಡುವ ಅಗತ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಕೆಲ ತಜ್ಞರು ವಿಕೇಂಡ್ ಕರ್ಫ್ಯೂ ಜೊತೆ ಜೊತೆಗೆ ಹತ್ತು ದಿನ ಲಾಕ್​ಡೌನ್ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಕೊರೊನಾ ಭಾರೀ ತೀವ್ರ ಸ್ವರೂಪ ಪಡೆಯಲಿದ್ದು, ಕಠಿಣ ರೂಲ್ಸ್ ಬೇಕು ಅಂತ ಮತ್ತೊಂದು ತಜ್ಞರ ತಂಡ ತಿಳಿಸಿದೆ. ಹೀಗಾಗಿ ಶುಕ್ರವಾರ ಈ ಬಗ್ಗೆ ಚರ್ಚೆ ನಡೆಸಿ ಕರ್ಫ್ಯೂ ಬಗ್ಗೆ ನಿರ್ಧರಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್