ರಾಜ್ಯಪಾಲರಿಗೆ ಬೆದರಿಕೆ ಇರೋ ವಿಚಾರ ನನಗೆ ಗೊತ್ತಿಲ್ಲ. ಬುಲೆಟ್ ಫ್ರೂಪ್ ಕಾರು ಕೊಟ್ಟಿರೋ ವಿಚಾರನೂ ನನಗೆ ಗೊತ್ತಿಲ್ಲ. ನನ್ನ ಪರಿಮಿತಿಯಲ್ಲಿ ರಾಜ್ಯಪಾಲರಿಗೆ ಥ್ರೆಟ್ ಇದೆ ಅಂತಾ ಮಾಹಿತಿ ಬಂದಿಲ್ಲ. ನಮ್ಮ ಡಿಜಿಗೂ ಮಾಹಿತಿ ಇಲ್ಲ. ಬೆದರಿಕೆ ಕೇವಲ ರಾಜ್ಯದಿಂದ ಮಾತ್ರ ಆಗುತ್ತದೆ ಎಂದು ಭಾವಿಸಬೇಡಿ. ಬೇರೆ ಬೇರೆ ರಾಜ್ಯದಿಂದಲೂ ಆಗಬಹುದಲ್ಲಾ..? ಎಂದು ಪ್ರಶ್ನಿಸಿದರು.
ತುಮಕೂರು (ಆ.21) ಜಿಲ್ಲೆಯಲ್ಲಿ ನಿರೀಕ್ಷಗಿಂತ 94 % ಹೆಚ್ಚಿಗೆ ಮಳೆಯಾಗಿದೆ. ರೈತರಿಗೆ,ಸಾಮಾನ್ಯರಿಗೆ ಹರ್ಷ ತಂದಿದೆ ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಇಂದು ತುಮಕೂರಿನ ಅಮಾನಿಕೆರೆಗೆ ಬಾಗಿನ ಅರ್ಪಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಉತ್ತಮ ಮಳೆಯಾಗಿದ್ದು ಈಗಾಗಲೇ 76 % ಬಿತ್ತನೆಯಾಗಿದೆ. ಮಳೆಗೆ ಅನೇಕ ಕೆರೆಗಳು ಕೋಡಿ ಬಿದ್ದಿವೆ. ಭಾರೀ ಪ್ರಮಾಣದ ಮಳೆಯಿಂದಾಗಿ ಕೊರಟಗೆರೆಯಲ್ಲಿ 43 ಹೆಕ್ಟೇರ್ ಬೆಳೆ ನಷ್ಟ ಆಗಿದೆ ಎಂದು ತಿಳಿಸಿದರು.
ಮಾತಿನ ಭರದಲ್ಲಿ ಹೆಚ್‌ಸಿ ಮಹದೇವಪ್ಪ ಎಡವಟ್ಟು; ಅರ್ಜುನ ಬದಲಿಗೆ ಅಂಬಾರಿ ಹೊರುವ ಅಭಿಮನ್ಯು ಸತ್ತು ಹೋಗಿದೆ ಎಂದ ಸಚಿವ!
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನಕಲಿ ಸಹಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗ ನಮ್ಮ ಬಳಿ ಟೆಕ್ನಾಲಜಿ ತುಂಬಾ ಅಡ್ವಾನ್ಸ್ ಆಗಿದೆ. ಯಾರೂ ಸುಳ್ಳು ಹೇಳೋಕೆ ಆಗಲ್ಲ. ಒಂದು ವೇಳೆ ಆಪಾದನೆ ಇದ್ದರೆ ಅವರು ದೂರು ಕೊಡಲಿ. ನಾವು ಎಫ್ ಎಸ್ ಐ ಎಲ್ ಗೆ ಕಳುಹಿಸಿ ಚೆಕ್ ಮಾಡ್ತಿವಿ. ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹಾಗೆ ಮಾಡೋದಿದ್ರೆ ಹಿಂದಿನ ಸರ್ಕಾರದ 25 ಹಗರಣದಲ್ಲಿ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಬಿಜೆಪಿ ಅವರು ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇನ್ನು ರಾಜ್ಯಪಾಲರಿಗೆ ಬೆದರಿಕೆ ಇರೋ ವಿಚಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಪಾಲರಿಗೆ ಬೆದರಿಕೆ ಇರೋ ವಿಚಾರ ನನಗೆ ಗೊತ್ತಿಲ್ಲ. ಬುಲೆಟ್ ಫ್ರೂಪ್ ಕಾರು ಕೊಟ್ಟಿರೋ ವಿಚಾರನೂ ನನಗೆ ಗೊತ್ತಿಲ್ಲ. ನನ್ನ ಪರಿಮಿತಿಯಲ್ಲಿ ರಾಜ್ಯಪಾಲರಿಗೆ ಥ್ರೆಟ್ ಇದೆ ಅಂತಾ ಮಾಹಿತಿ ಬಂದಿಲ್ಲ. ನಮ್ಮ ಡಿಜಿಗೂ ಮಾಹಿತಿ ಇಲ್ಲ. ಬೆದರಿಕೆ ಕೇವಲ ರಾಜ್ಯದಿಂದ ಮಾತ್ರ ಆಗುತ್ತದೆ ಎಂದು ಭಾವಿಸಬೇಡಿ. ಬೇರೆ ಬೇರೆ ರಾಜ್ಯದಿಂದಲೂ ಆಗಬಹುದಲ್ಲಾ..? ಎಂದು ಪ್ರಶ್ನಿಸಿದರು.
ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!
ಇನ್ನು ಕುಮಾರಸ್ವಾಮಿ ಅವರನ್ನು ಬಂಧಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆ ಸಂಬಂಧ ಮಾತನಾಡಿದ ಸಚಿವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಒಂದು ವೇಳೆ ಕಾನೂನಿನಲ್ಲಿ ಬಂಧಿಸುವ ಅವಶ್ಯಕತೆ ಬಂದರೆ. ಅದನ್ನು ಮಾಡಬಹದು ಎಂದು ಸಿಎಂ ಹೇಳಿರಬಹುದು ಎಂದರು.