
ಬೆಂಗಳೂರು(ಮೇ.27): ಜೂನ್ 1 ರಿಂದ ಹೈಕೋರ್ಟ್ ಕಲಾಪಗಳು ಆರಂಭವಾಗಲಿವೆ. ಆದರೆ, ಕಟ್ಟುನಿಟ್ಟಿನ ಆದೇಶಗಳನ್ನ ಪಾಲನೆ ಮಾಡಿಕೊಂಡು ಕಲಾಪಗಳನ್ನ ನಡೆಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ.
ಇಂದು(ಬುಧವಾರ) ಹೈಕೋರ್ಟ್ ಕಲಾಪಗಳು ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯನ್ವಯ ನ್ಯಾಯಮೂರ್ತಿಗಳು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸಾಧ್ಯವಾದಷ್ಟು ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಳಸಬೇಕು, ಕೋರ್ಟ್ ಹಾಲ್ ಗಳಲ್ಲಿ ಎಸಿ ಬದಲು ಫ್ಯಾನ್ ಬಳಸಬೇಕು, ನಿಶ್ಯಬ್ಧವಾಗಿ ಲ್ಯಾಪ್ಟಾಪ್, ಟ್ಯಾಬ್ ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ದೇವರಿಗೆ ಬಿಡುಗಡೆ: ರಾಜ್ಯದಲ್ಲಿ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲು ಸಿಎಂ ಆದೇಶ!
ರೆಡ್ ಝೋನ್ ಪ್ರದೇಶಕ್ಕೆ ಭೇಟಿ ನೀಡುವುದಿಲ್ಲ ಎಂದು ವಕೀಲರು ಈ ಬಗ್ಗೆ ಹೈಕೋರ್ಟ್‌ಗೆ ಆಫಿಡವಿಟ್ ಸಲ್ಲಿಸಬೇಕು. ಹೈಕೋರ್ಟ್ ಸಿಬ್ಬಂದಿ, ವಕೀಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಕೀಲರು 15 ರಿಂದ 20 ನಿಮಿಷದಲ್ಲಿ ವಾದ ಮಂಡನೆ ಮುಗಿಸಬೇಕು. ಕೋರ್ಟ್ ಹಾಲ್‌ನಲ್ಲಿ ಒಂದು ಬಾರಿ 20 ವಕೀಲರು ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿನ ವಕೀಲರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
ವೈರಸ್ ನಿಲ್ಲುವವರೆಗೆ ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ!
ಹೈಕೋರ್ಟ್ ಕಚೇರಿಗೆ ಯಾರು ಸಹ ಪ್ರವೇಶ ಮಾಡಬಾರದು. ವಕೀಲರು, ಕ್ಲರ್ಕ್, ಕಕ್ಷಿದಾರರಿಗೆ ಕಚೇರಿಗೆ ಪ್ರವೇಶವಿಲ್ಲ. ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು. ಇ- ಫೈಲಿಂಗ್ ಮೂಲಕ ಕೇಸ್ ದಾಖಲಿಸಲು ಅವಕಾಶ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ಖುದ್ದು ಕೇಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಜೂನ್ 1 ರಿಂದ ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ