ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 13 ವರ್ಷದ ಬಾಲಕಿಯ 25 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆಸಲು ಅನುಮತಿ ನೀಡಿದೆ.
ಬೆಂಗಳೂರು (ನ.12): ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿರುವ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 13 ವರ್ಷದ ಬಾಲಕಿಯ 25 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆಸಲು ಅನುಮತಿ ನೀಡಿದೆ. ಅಪ್ರಾಪ್ತೆಯ ಶಾಲಾ ಪ್ರಮಾಣಪತ್ರ ಮತ್ತು ರೇಡಿಯಾಲಜಿಸ್ಟ್ ನೀಡಿದ ಸ್ಕ್ಯಾನ್ ವರದಿಯ ಪ್ರಕಾರ ಆಕೆ 25 ವಾರಗಳ ಗರ್ಭಿಣಿ ಎಂದು ಸಂತ್ರಸ್ತೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಇದೇ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ನಿರ್ದೇಶನಗಳನ್ನು ಉಲ್ಲೇಖಿಸಿದ ಸರ್ಕಾರಿ ವಕೀಲರು, ಗರ್ಭಧಾರಣೆಯ ನಿಯಮಗಳ ವೈದ್ಯಕೀಯ ಮುಕ್ತಾಯ 1971 ರ ಪ್ರಕಾರ ಕಾರ್ಯವಿಧಾನವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮನವಿ ಸಲ್ಲಿಸಿದರು. ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯವು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕಾರ್ಯವಿಧಾನವನ್ನು ಕೈಗೊಳ್ಳುವಂತೆ ಸೂಚಿಸಿತು ಮತ್ತು ವೆಚ್ಚವನ್ನು ರಾಜ್ಯವು ಸರಕಾರ ಭರಿಸುವಂತೆ ಆದೇಶಿಸಿತು. ಅರ್ಜಿದಾರರಾಗಿರುವ ಸಂತ್ರಸ್ತರು ಕಾರ್ಯವಿಧಾನಕ್ಕೆ ಪಾವತಿ ಮಾಡಲು ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಸಂತ್ರಸ್ತ ಬಾಲಕಿಯನ್ನು ತಪಾಸಣೆಗೊಳಪಡಿಸಿಗೊಳಬೇಕು. ಭ್ರೂಣವನ್ನು ತೆಗೆಯುವ ಕಾರ್ಯವಿಧಾನದಲ್ಲಿ ಯಾವುದೇ ತೊಂದರೆ ಬಾಲಕಿಗೆ ಆಗಬಾರದು. ವೈದ್ಯರು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಭ್ರೂಣವನ್ನು ತೆಗೆಯಲು ಬಾಲಕಿಯ ಜೀವಕ್ಕೆ ಹಾನಿ ಅಥವಾ ಗಾಯವನ್ನು ಆಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟರೆ, ತಕ್ಷಣ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಹೇಳಿದೆ.
ವೈದ್ಯರು ಹೇಳಿದರೆ ಡಿಎನ್ ಎ ಪರೀಕ್ಷೆಗಾಗಿ ಭ್ರೂಣವನ್ನು ಆಸ್ಪತ್ರೆಯೇ ಸಂರಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆಸ್ಪತ್ರೆಯು ಭ್ರೂಣದ ಅಂಗಾಂಶ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರು ಅಥವಾ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಧಿವಿಜ್ಞಾನ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಗಾರ್ಡ್ ಮೇಲೆ ಗಾಡಿ ಹತ್ತಿಸಿದ ಅತ್ಯಾಚಾರ ಆರೋಪಿ
ಮಾತ್ರವಲ್ಲ ಸಂತ್ರಸ್ಥೆಯನ್ನು ಮತ್ತು ಸಂತ್ರಸ್ಥೆಯ ಕುಟುಂಬ ಸದಸ್ಯರು ಅಥವಾ ಪರಿಚಾರಕರನ್ನು ಅವರ ನಿವಾಸದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಚಿಕಿತ್ಸೆಯ ನಂತರ ಅವರನ್ನು ಮನೆಗೆ ಹಿಂತಿರುಗಿಸಲು ಅಗತ್ಯ ಸಾರಿಗೆ ವ್ಯವಸ್ಥೆಗಳನ್ನು ಮಾಡಲು ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನ್ಯಾಯಾಲಯ ಸೂಚಿಸಿದೆ.
Murugha Swamy Case: ಅತ್ಯಾಚಾರ ಆರೋಪಿ ಮುರುಘಾಶ್ರೀಗೆ ಮಾಸ್ಟರ್ ಸ್ಟ್ರೋಕ್: ಮಠಕ್ಕೆ ಕಾಲಿಡೋದೂ ಅಸಾಧ್ಯ!?
ವೈದ್ಯರು ಯಾವುದೇ ಅನುಸರಣಾ ಚಿಕಿತ್ಸೆಯನ್ನು ಸೂಚಿಸಿದರೆ, ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಅಗತ್ಯವಿದ್ದಾಗ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ರಾಜ್ಯವು ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.