ಕಾಸರಗೋಡಿನಲ್ಲಿ ವೈದ್ಯ ಡಾ.ಕೃಷ್ಣಮೂರ್ತಿ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ತಂಡದ ಕೈವಾಡವಿರುವ ಶಂಕೆ. ಮುಸ್ಲಿಂ ಲೀಗ್ ಕೇಳಿದ ಭೂಮಿಯನ್ನು ಕೊಡದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ನ.12): ಕರ್ನಾಟಕ ಗಡಿಭಾಗದ ಕಾಸರಗೋಡು ಜಿಲ್ಲೆಯ ಖ್ಯಾತ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಮುಸ್ಲಿಂ ಭೂ ಮಾಫಿಯಾದ ಷಡ್ಯಂತ್ರದ ಕಾರಣಕ್ಕೆ ಡಾ.ಕೃಷ್ಣಮೂರ್ತಿ ಜೀವ ತೆರುವಂತಾಗಿದೆ ಎಂದು ಕುಟುಂಬಸ್ಥರು ಮತ್ತು ಸ್ಥಳೀಯ ಹಿಂದೂ ನಾಯಕರು ಆರೋಪಿಸಿದ್ದಾರೆ. ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿದ್ದ ಡಾ.ಕೃಷ್ಣಮೂರ್ತಿ, ನವೆಂಬರ್ 8 ರಂದು ನಾಪತ್ತೆಯಾಗಿ ನ.10ರಂದು ಉಡುಪಿ ಜಿಲ್ಲೆ ಕುಂದಾಪುರದ ಹಟ್ಟಿಯಂಗಡಿ ಬಳಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸದ್ಯ ಸಿಕ್ಕ ಮಾಹಿತಿ ಪ್ರಕಾರ ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಲ್ಯಾಂಡ್ ಮಾಫಿಯಾ ಡಾ.ಕೃಷ್ಣಮೂರ್ತಿ ಬೆನ್ನು ಬಿದ್ದಿತ್ತು ಎನ್ನಲಾಗಿದೆ. ಜಾಗ ಖರೀದಿ ವಿಚಾರದಲ್ಲಿ ಡಾ.ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ತನ್ನ ಜಾಗವನ್ನ ಡಾ.ಕೃಷ್ಣಮೂರ್ತಿ (Dr.Krishnamurthi) ಮಾರಾಟ ಮಾಡಲು ಒಪ್ಪದ ಕಾರಣಕ್ಕೆ ಮುಸ್ಲಿಂ ಯುವತಿ ಮೂಲಕ ಬ್ಲ್ಯಾಕ್ ಮೇಲ್ ಮಾಡಿಸಿ ಹಣದ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಸದ್ಯ ಮುಸ್ಲಿಂ ಲೀಗ್ ಮುಖಂಡ ಸೇರಿ ಐವರನ್ನು ಬದಿಯಡ್ಕ ಪೊಲೀಸರ ಬಂಧಿಸಿದ್ದಾರೆ.
ಕಾಸರಗೋಡಿನ ವೈದ್ಯ ನಿಗೂಢ ಸಾವು: ಕೇರಳ ಪೊಲೀಸರಿಂದ ಐವರ ಬಂಧನ
ಅಪ್ಪನದ್ದು ಆತ್ಮಹತ್ಯೆ ಅಲ್ಲ-ಕೊಲೆ
ಬದಿಯಡ್ಕದ ಲ್ಯಾಂಡ್ ಜಿಹಾದ್ ಬಗ್ಗೆ ಮೃತ ಡಾ. ಕೃಷ್ಣಮೂರ್ತಿ ಪುತ್ರಿ ವರ್ಷಾ (Varsha) ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನಾವು ಮನೆಗೆ ನಾಲ್ಕೈದು ತಿಂಗಳ ಹಿಂದೆ ಹೊಸ ಕಂಪೌಂಡ್ ಮಾಡಿದ್ದೆವು. ಆಗ ಕೆಲವು ಮುಸ್ಲಿಮರು ಮನೆ ಮಾರಾಟ (Home Sale) ಮಾಡುತ್ತೀರಾ ಎಂದು ಕೇಳಿದ್ದಾರೆ. ರಸ್ತೆ ಪಕ್ಕ ಮನೆ ಇರುವ ಕಾರಣ ಮಾರಾಟ ಮಾರಾ ಡುತ್ತೀಅಂತ ಕೇಳಿದ್ದಾರೆ. ಸುತ್ತಮುತ್ತ ಯಾವುದೇ ಹಿಂದೂಗಳ ಮನೆ ಇರಲಿಲ್ಲ, ಎಲ್ಲಾ ಮುಸ್ಲಿಮರೇ ಇರೋದು. ಮಾರಾಟದ ಬಗ್ಗೆ ಕೇಳಿದವರಿಗೆ ಮಾರಾಟ ಮಾಡಲ್ಲ ಅಂತ ಅಪ್ಪ ಹೇಳಿದ್ದಾರೆ. ಈ ಬಗ್ಗೆ ಕೇರಳ ಮತ್ತು ಕರ್ನಾಟಕ ಸರ್ಕಾರ ಉನ್ನತ ತನಿಖೆ ಮಾಡಬೇಕು. ಸುತ್ತಮುತ್ತ ಹಲವು ಶಿಕ್ಷಕರು, ವ್ಯಾಪಾರಿಗಳಿಗೆ ಇಲ್ಲಿ ಸಮಸ್ಯೆ ಆಗಿದೆ. ವೈಯಕ್ತಿಕವಾಗಿ 30 ವರ್ಷದಲ್ಲಿ ನಮಗೆ ಇದೇ ಮೊದಲು ಆಗಿರೋದು. ಅವರು ಆತ್ಮಹತ್ಯೆ (suicide)ಮಾಡಿಕೊಳ್ಳಲು ಕುಂದಾಪುರಕ್ಕೆ (Kundapura) ಹೋಗುವ ಅಗತ್ಯ ಇರಲಿಲ್ಲ. ಅವರಿಗೆ ಕುಂದಾಪುರ ಹೊಸತು, ಕಾಡಿನ ಮಧ್ಯೆ ಯಾಕೆ ಹೋಗ್ತಾರೆ? ಅದು ರೈಲು ಅಪಘಾತ (Railway Accident) ಕೂಡ ಇಲ್ಲ, ಅದು ವ್ಯವಸ್ಥಿತ ಕೊಲೆ (Murder)ಎಂದು ಆಕ್ರೋಶ ವ್ಯಕ್ತೊಡಿಸಿದ್ದಾರೆ.
ಅಪ್ಪನ ಬಟ್ಟೆ ಬದಲಾಗಿದೆ:
ನಮ್ಮ ತಂದೆ ಈವರೆಗೆ ಹಾಕದ ಉದ್ದ ಕೈ ತೋಳಿನ ಟೀ ಶರ್ಟ್ ಇದೆ. ಅಪ್ಪನ ವಾಚ್ (watch), ಪರ್ಸ್ (Vallet) ಯಾವುದೂ ನಮಗೆ ಸ್ಥಳದಲ್ಲಿ ಸಿಕ್ಕಿಲ್ಲ. ಸೂಸೈಡ್ ನೋಟ್ ಬಗ್ಗೆ ನಮಗೆ ಯಾವುದೇ ಮಾಹಿತಿ ಕೂಡ ಬಂದಿಲ್ಲ. ತಂದೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಸಮಸ್ಯೆ ಇರಲಿಲ್ಲ. ಅವರ ಮಾನ ತೆಗೆಯುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ. 10 ಲಕ್ಷ ರೂ. ಕೊಡದಿದ್ದರೆ ಊರಲ್ಲಿ ಇರಲು ಬಿಡುವುದಿಲ್ಲ ಎಂದಿದ್ದಾರೆ. ನಮ್ಮ ಮನೆಯವರಿಗೆ ಇದೊಂದು ವ್ಯವಸ್ಥಿತ ಕೊಲೆ ಅಂತ ಅನಿಸುತ್ತಿದೆ. ವಾರದ ಹಿಂದೆ ಮಹಿಳೆ ಹಲ್ಲಿನ ಚಿಕಿತ್ಸೆಗೆ ಕ್ಲಿನಿಕ್ ಗೆ ಬಂದಿದ್ದಾರೆ. ಆವತ್ತು ಯಾವುದೇ ಸಮಸ್ಯೆ ಇಲ್ಲದೇ ಕ್ಲೀನಿಕ್ ನಿಂದ ಹೋಗಿದ್ದಾರೆ. ಪುನಃ ನ.4ಕ್ಕೆ ಬಂದು ಕಿರುಕುಳ (Harassment) ಅಂತ ಹೇಳಿ ಹೋಗಿದ್ದಾರೆ. ಆ ಬಳಿಕ ನ.8ಕ್ಕೆ ಐದಾರು ಜನರ ಜತೆ ಬಂದು ಗಲಾಟೆ ಮಾಡಿದ್ದಾರೆ. ಮುಸ್ಲಿಂ ಲೀಗ್ (Muslim Leage) ನ ಕೆಲವರು ಬಂದು ಹಲ್ಲೆಗೆ ಮುಂದಾಗಿದ್ದಾರೆ. ಅಪ್ಪನಿಗೆ ಜೀವ ಬೆದರಿಕೆ ಹಾಕಿದ್ದಾರೆ. ಆ ಬಳಿಕ ಅಪ್ಪ ಅಲ್ಲಿಂದ ಹೊರಟಿದ್ದನ್ನ ಕೆಲವರು ನೋಡಿದ್ದಾರೆ ಎಂದಿದ್ದಾರೆ.
ಕಾಸರಗೋಡಿನ ವೈದ್ಯ ನಿಗೂಢ ಸಾವು: ಮುಸ್ಲಿಂ ಯುವತಿ ವಿಚಾರದಲ್ಲಿ ತಂಡದ ಬೆದರಿಕೆ ಕಾರಣವಾಯ್ತಾ?
ಗಡಿನಾಡು ಕಾಸರಗೋಡನ್ನು ಕಾಶ್ಮೀರ ಮಾಡಲಾಗುತ್ತಿದೆ:
ಕಾಸರಗೋಡು (Kasaragodu) ಜಿಲ್ಲೆಯನ್ನು ಕಾಶ್ಮೀರ (Kashmir)ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಮೃತ ಕೃಷ್ಣಮೂರ್ತಿ ಸಂಬಂಧಿಕ ಕೃಷ್ಣಮೂರ್ತಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ. ಕಾಶ್ಮೀರದಲ್ಲೂ ಪಂಡಿತರನ್ನು (Panditha's) ಓಡಿಸುವ ಕೆಲಸ ಆಗಿತ್ತು. ಸಮಾಜದ ಉನ್ನತ ವ್ಯಕ್ತಿಗಳು, ಒಳ್ಳೆ ಕೊಡುಗೆ ನೀಡಿದವರನ್ನ ಹೆದರಿಸುತ್ತಿದ್ದಾರೆ. ಊರು ಬಿಟ್ಟು ಹೋಗುವ ಹಾಗೆ ಮತ್ತು ಜೀವ ಕಳೆದುಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೊಲೆ, ಬೆದರಿಕೆಗಳ ಮೂಲಕ ಹುಟ್ಟಡಗಿಸೋ ಕೆಲಸ ಕಾಶ್ಮೀರದಲ್ಲಿ ಆಗುತ್ತಿದೆ. ಅಂಥದ್ದನ್ನೇ ಕಾಸರಗೋಡು ಭಾಗದಲ್ಲಿ ಕಾರ್ಯಗತ ಮಾಡಲಾಗುತ್ತಿದೆ. ಪಿಎಫ್ಐ (PFI), ಐಎಸ್ಐ (ISI) ಮೂಲಕ ಆ ಕೆಲಸ ಮಾಡಲಾಗುತ್ತಿದ್ದು, ಈ ಹಿಂದೆಯೂ ಇಲ್ಲಿ ಅಂಥಹ ಕೆಲಸಗಳು ನಡೆದಿವೆ. ವೈದ್ಯರ ಸಾವಿನ ವಿಷಯದಲ್ಲೂ ಷಡ್ಯಂತ್ರ ಇದೆ ಅಂತ ಹೇಳುತ್ತಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ತಕ್ಷಣ ಮಾಡಬೇಕು. ವೈದ್ಯರನ್ನ ಟ್ರ್ಯಾಪ್ ಮಾಡಿ ಅಥವಾ ಬೇರೆ ರೀತಿಯಲ್ಲಿ ಮಾಫಿಯಾಗಳು ಇಲ್ಲವಾಗಿಸಿದೆ.
ಅಧ್ಯಾಪಕರಿಗೂ ಬೆದರಿಕೆ ಹಾಕಿದ್ದ ತಂಡ:
ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿ ಹುಟ್ಟಡಗಿಸೋ ಕೆಲಸ ಆಗ್ತಿದೆ. ಈ ತಂಡ ನಾಲ್ಕೈದು ತಿಂಗಳ ಹಿಂದೆ ಒಬ್ಬ ಅಧ್ಯಾಪಕರಿಗೆ (Proffessor) ಹೀಗೆ ಮಾಡಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಕಾಸರಗೋಡಲ್ಲಿ ಇನ್ನೊಂದಷ್ಟು ಹಿಂದೂ ಸಮಾಜದವರನ್ನ (Hindu Community) ವ್ಯವಸ್ಥಿತವಾಗಿ ಟ್ರಾಪ್ (Trap) ಮಾಡುತ್ತಿದ್ದಾರೆ. ಕಾಸರಗೋಡಿನಲ್ಲಿ ಲ್ಯಾಂಡ್ ಜಿಹಾದ್ (Land Jihad) ದೊಡ್ಡ ಮಟ್ಟದಲ್ಲಿ ಇದೆ. ಅವರ ಸಮುದಾಯದಲ್ಲಿ ಹಣಕಾಸು ಓಡಾಡ್ತಾ ಇದೆ. ವಿದೇಶಿ ಹಣದ ಮೂಲದವರು ಬಂದು ಇಲ್ಲಿ ಜಾಗ ಖರೀದಿ ಮಾಡ್ತಾರೆ. ಭೂ ಮಾಫಿಯಾ ದೊಡ್ಡ ಮಟ್ಟದಲ್ಲಿ ವ್ಯವಸ್ಥಿತವಾಗಿ ಇದೆ. ಕಾಸರಗೋಡು ಸಿಟಿ ಬದಲಾಗಿದೆ, ಬದಿಯಡ್ಕ (Badiyadka) , ಪೆರ್ಲ (Perla) ಭಾಗಕ್ಕೆ ಆವರಿಸುತ್ತಿದೆ. ಹಿಂದೂ ಸಮಾಜದಲ್ಲಿ ದುಡ್ಡಿಲ್ಲ, ಈಗ ಅವರ ಮಾಫಿಯಾ (Maffia) ಬೆಳೆಯುತ್ತಿದೆ. ಸಣ್ಣ ಸಣ್ಣ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳ ಹೆಸರಲ್ಲಿ ಬೆಳೆಯುತ್ತಿದೆ. ಇಲ್ಲಿನ ಚಿಕಿತ್ಸಾ ಪರಂಪರೆ ಮಟ್ಟ ಹಾಕಲು ಕೆಲಸ ಆಗುತತಿದೆ. ವಿದೇಶಿ ಹಣದ ಹಿನ್ನೆಲೆ ಕಾಸರಗೋಡನ್ನು ಬಲಿ ಪಡೆಯಲಾಗುತ್ತಿದೆ. ವೈದ್ಯರು ಆತ್ಮಹತ್ಯೆ ಮನೋಭಾವದವರಲ್ಲ. ಇದರ ಬಗ್ಗೆ ಅನುಮಾನ ಇದೆ. ಅವರನ್ನ ಬೆದರಿಸಿ ಅಪಹರಿಸಿ ಕೊಂಡು ಹೋಗಿದ್ದಾರೆ. ಕುಂದಾಪುರ ಪೊಲೀಸರು ಕೂಡ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ, ಅದು ಗೊತ್ತಾಗಬೇಕು ಎಂದಿದ್ದಾರೆ.
ಮುಸ್ಲಿಂ ಲೀಗ್‌ನಿಂದ ಜಿಹಾದಿ ಕೃತ್ಯ:
ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಬದಿಯಡ್ಕದ ಸ್ಥಳೀಯರು ಮತ್ತು ಹಿಂದೂ ಮುಖಂಡರ ಹೇಳಿಕೆ ನೀಡಿದ್ದು, ಡಾ.ಕೃಷ್ಣಮೂರ್ತಿಯವರ ಜಾಗದ ಪಕ್ಕದಲ್ಲೇ ಮತ್ತೊಂದು ಸಮುದಾಯದವರ (Community) ಜಾಗಗಳಿವೆ. ಇದು ರಸ್ತೆ ಪಕ್ಕದಲ್ಲೇ ಇರೋ ಜಾಗ. ಅದನ್ನ ಪಡೆಯೋದಕ್ಕೆ ಹಲವರು ಯತ್ನಿಸಿ ವೈದ್ಯರ ಬಳಿಯೂ ಕೇಳುತ್ತಿದ್ದರು. ಆದರೆ ಅವರು ಕೊಡಲು ತಯಾರಿರಲಿಲ್ಲ. ಬದಿಯಡ್ಕ ಮತ್ತು ಸುತ್ತಮುತ್ತ ಒಂದು ಜಿಹಾದಿ (Jihadi)ಷಡ್ಯಂತ್ರ ಇದೆ. ಸ್ಥಳದ ಜಿಹಾದಿ ಹಾಗೂ ಮೆಡಿಕಲ್ ಫೀಲ್ಡ್ ಜಿಹಾದ್ ಮಾಡಲಾಗಿದೆ. ಮುಸ್ಲಿಂ ಲೀಗ್ ನ 5 ಜನ ಗೂಂಡಾಗಳು ಈ ಕೆಲಸ ಮಾಡಿದ್ದಾರೆ. ಅ.26ಕ್ಕೆ ಯುವತಿಗೆ ಕಿರುಕುಳ ಅಂತ ಅವರ ಆರೋಪ ಮಾಡಿದ್ದರು. ಆದರೆ ನ.9 ರಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಲ್ಯಾಂಡ್ ಮಾಫಿಯಾ ಜೊತೆಗೆ ಮುಸ್ಲಿಂ ಲೀಗ್ ತಂಡ ಈ ಕೆಲಸ ಮಾಡುತ್ತಿದೆ. ಕೆಲವರನ್ನು ಗುರಿಯಾಗಿಸಿಕೊಂಡು (Target) ಮಾಡಿ ಜಿಹಾದಿ ಚಟುವಟಿಕೆ ಮಾಡಲಾಗಿದೆ. ಅಧ್ಯಾಪಕರನ್ನ ಪೋಕ್ಸೋ ಕೇಸ್ (Pocso Case) ನಲ್ಲಿ ಫಿಕ್ಸ್ ಮಾಡುವ ಷಡ್ಯಂತ್ರ ಆಗಿತ್ತು. ಈ ಮೂಲಕ ಕೊಲೆ ಬೆದರಿಕೆ, ಹಣ ಹಾಗೂ ಉದ್ದೇಶ ಈಡೇರಿಕೆಗೆ ಜಿಹಾದಿ ಕೃತ್ಯ ಮಾಡಲಾಗುತ್ತಿದೆ. ಮುಸ್ಲಿಂ ಲೀಗ್ ಸದಸ್ಯರು ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಬದಿಯಡ್ಕ ಪಂಚಾಯತ್ ಹಿಂದೂಗಳು ಹೆಚ್ಚಾಗಿರುವ ಪ್ರದೇಶ. ಹೀಗಾಗಿ ಹಿಂದೂಗಳನ್ನು ಟಾರ್ಗೆಟ್ ಮಾಡುವ ಕೆಲಸ ಮುಸ್ಲಿಂ ಲೀಗ್ ಮಾಡುತ್ತಿದೆ ಎಂದಿದ್ದಾರೆ.
ವೈದ್ಯರಿಗೆ 10 ಲಕ್ಷ ರೂ. ಡಿಮ್ಯಾಂಡ್:
ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಡಾ.ಕೃಷ್ಣಮೂರ್ತಿ ಕ್ಲಿನಿಕ್‌ನ ಸಿಬ್ಬಂದಿ ಪರಮೇಶ್ವರ್ ಅವರು, ನ.5ರಂದು ಹಸೀನಾ ಎಂಬ ಮುಸ್ಲಿಂ ಮಹಿಳೆ ಕ್ಲಿನಿಕ್‌ಗೆ ಬಂದಿದ್ದರು. ಅಂದು ಚಿಕಿತ್ಸೆ ಪಡೆದು ದುಡ್ಡು ಕೊಟ್ಟು ಹೋಗಿದ್ದಾರೆ. ಮತ್ತೆ ಸೋಮವಾರ ಅವರ ತಂಡ ಬಂದು ಗಲಾಟೆ ಮಾಡಿದೆ. ವೈದ್ಯರು (Doctor) ಕಿರುಕುಳ ಕೊಟ್ಟಿದ್ದಾರೆ ಅಂತ ಬೆದರಿಕೆ ಹಾಕಿದ್ದಾರೆ. ನ.8ರಂದು ಪುನಃ ಐವರು ಬಂದು ವೈದ್ಯರ ಮೇಲೆ ಹಲ್ಲೆಗೆ (Attack) ಮುಂದಾಗಿದ್ದಾರೆ. ಬಳಿಕ 10 ಲಕ್ಷ ರು. ಹಣಕ್ಕೆ ಬೇಡಿಕೆಯಿಟ್ಟು (Demand) ಕೊಲೆ ಬೆದರಿಕೆ ಹಾಕಿದ್ದರು. ಆ ಬಳಿಕ ವೈದ್ಯರು ಸ್ವಲ್ಪ ಹೊತ್ತು ಇದ್ದು ಕ್ಲೀನಿಕ್ ನಿಂದ ಹೊರ ಹೋಗಿದ್ದರು. ಆದರೆ ಹೀಗೆ ಹೋದವರು ಮನೆಗೆ ಹೋಗದೇ ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೆಲವರ ಷಡ್ಯಂತ್ರ ಇದೆ. ಇದು ಕೊಲೆಯೋ ಆತ್ಮಹತ್ಯೆಯೋ ತನಿಖೆ ಆಗಲಿ. ಬದಿಯಡ್ಕದಲ್ಲಿ ಮೊದಲ ಹಲ್ಲಿನ ಆಸ್ಪತ್ರೆ (Dental Clinic) ಇವರದ್ದಾಗಿದೆ. ಸಾಕಷ್ಟು ರೋಗಿಗಳು ಬರುತ್ತಾರೆ. ಬಾವರಿಗೆ ಒಳ್ಳೆ ಹೆಸರು ಕೂಡ ಇದೆ. ಕೆಲವರು ಮತ್ಸರದಿಂದಲೂ ಈ ಷಡ್ಯಂತ್ರ ಮಾಡಿರಲೂಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ಧಾರೆ.