
ಮಂಗಳೂರು: ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್‍ಯಾಂಕಿಂಗ್ ಸದಸ್ಯ, ನಾಯಕ ಜೊನಾಥನ್ ಜಾಕ್ಸನ್ ಅವರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ ‘ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್’ ದಾಖಲೆಯನ್ನು ಪ್ರದಾನ ಮಾಡಿದರು.
ಈ ದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವರ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಜೊತೆಗೆ ಅಮೆರಿಕದ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಮಂಗಳವಾರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.
ಇದನ್ನೂ ಓದಿ: ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ
ಅಮೆರಿಕದ ಸಂಸತ್ತಿನ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ ಎಎಂಇಸಿ ಯುಎಸ್‌ಎ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್‌ಚಂದ್ರ ಕರ್ಣ ಸಾಕ್ಷಿಯಾದರು.
ಇದನ್ನೂ ಓದಿ: Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್‌ಗೆ ಮರುಜೀವ ನೀಡಿದ ಸರ್ಕಾರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ