ಕೊರೋನಾ 2ನೇ ಅಲೆ: ರಾಜ್ಯದಲ್ಲಿ ಟಫ್ ರೂಲ್ಸ್, ಮದ್ವೆ ಸಭೆ, ಸಮಾರಂಭಕ್ಕೆ ಇಷ್ಟೇ ಜನ ಇರ್ಬೇಕ್

Published : Mar 12, 2021, 09:06 PM ISTUpdated : Mar 12, 2021, 09:25 PM IST
ಕೊರೋನಾ 2ನೇ ಅಲೆ: ರಾಜ್ಯದಲ್ಲಿ ಟಫ್ ರೂಲ್ಸ್, ಮದ್ವೆ ಸಭೆ, ಸಮಾರಂಭಕ್ಕೆ ಇಷ್ಟೇ ಜನ ಇರ್ಬೇಕ್

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಸಭೆ, ಸಮಾರಂಭಕ್ಕೆ ಇಂತಿಷ್ಟೇ ಜನ ಸೇರಬೇಕೆಂದು ನಿಯಮ ಮಾಡಲಾಗಿದೆ. 

ಬೆಂಗಳೂರು, (ಮಾ.12): ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತೆ ಹೆಚ್ಚುತ್ತಿದೆ. ಈ ಹಿಂದೆ ದಿನಕ್ಕೆ 300-400 ಪಾಸಿಟಿವ್ ಪಕರಣಗಳು ವರದಿಯಾಗುತ್ತಿದ್ದವು. ಆದ್ರೆ, ಇದೀಗ ಆ ಸಂಖ್ಯೆ ಡಬ್ಬಲ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 ಕೊರೋನಾ ಎರಡನೇ ಅಲೆಯ ಭೀತಿ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಟಫ್ ರೂಲ್ಸ್ ಜಾರಿಯಾಗಿದೆ. ಸಭೆ, ಸಮಾರಂಭಕ್ಕೆ ಇಂತಿಷ್ಟೇ ಜನ ಸೇರಬೇಕೆಂದು ನಿಯಮ ಮಾಡಲಾಗಿದೆ. 

ಕೊರೊನಾ 'ಮಹಾ' ಸ್ಫೋಟ, ಲಾಕ್‌ಡೌನ್‌ ಮೊರೆ ಹೋದ ನಾಗಪುರ, ರಾಜ್ಯಕ್ಕೂ ತಪ್ಪಿಲ್ಲ ಕಂಟಕ

ಇದರ ಅಡಿಯಲ್ಲಿ ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮದಲ್ಲಿ 500 ಜನ ಅತಿಥಿಗಳು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಜೊತೆಗೆ, ಹಾಲ್‌ಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಜನ, ತೆರೆದ ಪ್ರದೇಶದಲ್ಲಿ ಬರ್ತ್‌ಡೇ ಆಚರಣೆಗೆ 100 ಜನ, ಹಾಲ್‌ಗಳಲ್ಲಿ ಬರ್ತ್‌ಡೇ ಆಚರಿಸಿದರೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇದಲ್ಲದೆ, ಅಂತ್ಯಕ್ರಿಯೆಯಲ್ಲಿ 50 ಜನ ಮಾತ್ರ ಭಾಗಿಯಾಗಬೇಕು. ತೆರೆದ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗೆ 500 ಜನರು, ತೆರೆದ ಪ್ರದೇಶದಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ 500 ಜನ ಭಾಗಿಯಾಗಬಹುದು ಎಂದು ಆರೋಗ್ಯ ಇಲಾಖೆ ಟಫ್ ರೂಲ್ಸ್ ಜಾರಿ ಮಾಡಿದೆ. 

ನೆರೆ ರಾಜ್ಯಗಳಲ್ಲಿ ಕೊರೋನಾ ಕೇಸ್​ಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ. ಇದರ ಜೊತೆಗೆ, ಹಳೇ ಕೊವಿಡ್ ಟೆಸ್ಟ್‌ ಆದೇಶ ಪರಿಷ್ಕೃತಗೊಳಿಸಿದ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಆದೇಶ ಪರಿಷ್ಕೃತಗೊಳಿಸಿದೆ. ಇದರನ್ವಯ, ಜಿಲ್ಲೆಗಳಲ್ಲಿ ದಿನ ನಿತ್ಯ ಕೊರೊನಾ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

ಕೊರೊನಾ ಹೆಚ್ಚಳ: ಬೆಂಗಳೂರಿನಲ್ಲಿ ಟಫ್ ರೂಲ್ಸ್..?

ಅಂತೆಯೇ, ಬೆಂಗಳೂರು ನಗರ, BBMP ವ್ಯಾಪ್ತಿಯಲ್ಲಿ 40 ಸಾವಿರ ಟೆಸ್ಟ್, ಮೈಸೂರು ಜಿಲ್ಲೆಯಲ್ಲಿ ದಿನ ನಿತ್ಯ 5 ಸಾವಿರ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಅಷ್ಟೇ ಅಲ್ಲ, ಬೆಳಗಾವಿ ಜಿಲ್ಲೆಯಲ್ಲಿ 3 ಸಾವಿರ ಟೆಸ್ಟ್‌, ಕೊಡಗು 1 ಸಾವಿರ, ದಕ್ಷಿಣ‌ ಕನ್ನಡದಲ್ಲಿ 3 ಸಾವಿರ ಟೆಸ್ಟ್, ಉಡುಪಿ 2 ಸಾವಿರ, ತುಮಕೂರು ಜಿಲ್ಲೆಯಲ್ಲಿ 3,500, ವಿಜಯಪುರ 2 ಸಾವಿರ ಟೆಸ್ಟ್​ಗಳ ಗುರಿಯನ್ನು ನಿಗದಿ ಮಾಡಲಾಗಿದೆ. ಬೆಂಗಳೂರು, ಬಳ್ಳಾರಿ, ಮೈಸೂರು, ದಾವಣಗೆರೆ, ವಿಜಯಪುರ, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ಬೀದರ್, ಉಡುಪಿ, ಕಲಬುರಗಿ, ತುಮಕೂರು ಜಿಲ್ಲೆಗಳಲ್ಲಿ ಕಠಿಣ‌ ಕ್ರಮ ಜರುಗಿಸಲಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ RTPCR ಟೆಸ್ಟ್ ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿತರನ್ನು ಕಡ್ಡಾಯವಾಗಿ ಪತ್ತೆ ಹಚ್ಚಬೇಕು. ಸಂಪರ್ಕಿತರ ಪತ್ತೆ ಕಾರ್ಯ ಕಡ್ಡಾಯವಾಗಿ 1:20 ಇರಬೇಕು ಎಂದು ಆರೋಗ್ಯ ಇಲಾಖೆ ರೂಲ್ಸ್​ ಜಾರಿಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ