ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶಿಫಾರಸು

By Sathish Kumar KHFirst Published May 31, 2023, 5:15 PM IST
Highlights

ಮೃತದೇಹಗಳ ಮೇಲಿನ ಅತ್ಯಾಚಾರ ಹಾಗೂ ವಿಕೃತಿಗೆ ಶಿಕ್ಷೆ ಕೊಡುವಂತಹ ನಿಟ್ಟಿನಲ್ಲಿ ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಕರ್ನಾಟಕ ಹೈಕೋರ್ಟ್‌ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಬೆಂಗಳೂರು (ಮೇ 31): ಮೃತದೇಹಗಳ ಮೇಲಿನ ಅತ್ಯಾಚಾರ ಹಾಗೂ ವಿಕೃತಿಗೆ ಶಿಕ್ಷೆ ಕೊಡುವಂತಹ ನಿಟ್ಟಿನಲ್ಲಿ ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಅತ್ಯಾಚಾರ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಶಿಫಾರಸ್ಸು ಮಾಡಿದೆ. 

ಜಾಗತಿಕವಾಗಿ ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಮೃತದೇಹಗಳ ಮೇಲಿನ ವಿಕೃತಿಗೆ ಶಿಕ್ಷೆಯಿದೆ. ಜೀವನದ ಹಕ್ಕಿನಲ್ಲಿ ಮೃತ ದೇಹದ ಘನತೆಯ ಹಕ್ಕು ಕೂಡ ಸೇರಿದೆ. ಆದ್ದರಿಂದ ಮುಂದಿನ 6 ತಿಂಗಳಲ್ಲಿ ಐಪಿಸಿ (ಅತ್ಯಾಚಾರ- Rape) ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ ನಾಯಕ್ ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ (Karnataka High Court Division Bench) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಖ್ಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ (IPC Section 377) ವ್ಯಾಪ್ತಿಗೆ ಮೃತದೇಹದ ಮೇಲಿನ ಅತ್ಯಾಚಾರವೂ ಸೇರಬೇಕು ಎಂದು ನಿರ್ದೇಶನ ನೀಡಿದೆ.

Shocking! ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್‌ ಲಾಕ್‌! ನೆರೆಯ ದೇಶದಲ್ಲಿ ಇದೆಂತಾ ದುಸ್ಥಿತಿ..

ಅತ್ಯಾಚಾರ ಪ್ರಕರಣದ ಹಿನ್ನೆಲೆಯೇನು?: ರಾಜ್ಯದ ತುಮಕೂರಿನ ಯುವತಿಯೊಬ್ಬಳ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ ನಾಯಕ್ ಟಿ ಅವರಿದ್ದ ನ್ಯಾಯಪೀಠವು, ಮೃತದೇಹದ ಮೇಲಿನ ಅತ್ಯಾಚಾರಕ್ಕೆ (necrophilia) ಶಿಕ್ಷೆ ನೀಡಲು ಸದ್ಯಕ್ಕೆ ಕಾನೂನು ಇಲ್ಲ. ಆದ್ದರಿಂದ ಕೊಲೆ ಅಪರಾಧಕ್ಕೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಈ ಪ್ರಕರಣದಲ್ಲಿ ಆರೋಪಿಯು ಮೊದಲು ಸಂತ್ರಸ್ತೆಯನ್ನು ಕೊಂದು ನಂತರ ದೇಹದೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿದ್ದ ಎಂಬುದು ಪ್ರಕರಣವಾಗಿದೆ. ತುಮಕೂರಿನ ರಂಗರಾಜು ಅಲಿಯಾಸ್ ವಾಜಪೇಯಿ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ಆದರೆ, ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಯಾವುದೇ ಕಾನೂನು ಇಲ್ಲದಂತಾಗಿದ್ದು, ಶಿಕ್ಷೆ ಇಲ್ಲದಂತಾಗಿದೆ.

ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಿ: ದೇಶದಲ್ಲಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಮೃತ ದೇಹದ ಮೇಲೆ ಅತ್ಯಾಚಾರದ ಘಟನೆಗಳು ನಡೆದಿವೆ. ಇಂಥ ಕೃತ್ಯಗಳ ತಡೆಗಾಗಿ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. 6 ತಿಂಗಳಲ್ಲಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು (Install CCTV in mortuaries) ಎಂದೂ ನ್ಯಾಯಪೀಠ ಶಿಫಾರಸು ಮಾಡಿದೆ. ಜತೆಗೆ ಶವಾಗಾರಗಳಲ್ಲಿ ಶುಚಿತ್ವ ಕಾಪಾಡಲೂ ನಿರ್ದೇಶನವನ್ನು ನೀಡಿದೆ.

click me!