ಎಐಬಿಇ ಎಕ್ಸಾಂ ಪಾಸಾಗದೆ ವಕೀಲಿಕೆ ನಡೆಸ್ತಿರೋರಿಗೆ ಬಿಗ್ ಶಾಕ್! ಹೈಕೋರ್ಟ್ ಮಹತ್ವದ ಆದೇಶವೇನು?

Kannadaprabha News   | Kannada Prabha
Published : Oct 20, 2026, 07:15 AM IST
Karnataka HC

ಸಾರಾಂಶ

ಕಾನೂನು ಪದವಿ ಮುಗಿಸಿ 2 ವರ್ಷದೊಳಗೆ ಎಐಬಿಇ ಪರೀಕ್ಷೆ ಪಾಸಾಗದೆ ವಕೀಲಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದೆ. ಇಂತಹವರನ್ನು ಗುರುತಿಸಲು 45 ದಿನಗಳಲ್ಲಿ ಸೂಕ್ತ ಡಿಜಿಟಲ್ ವ್ಯವಸ್ಥೆ ರೂಪಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರು (ಅ.20): ಕಾನೂನು ಪದವಿ ಪೂರೈಸಿ ವಕೀಲಿ ವೃತ್ತಿಗೆ ನೋಂದಣಿ ಮಾಡಿಕೊಂಡ ನಂತರದ 2 ವರ್ಷದಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗದೆ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವಕೀಲರನ್ನು ಗುರುತಿಸಿ, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು 45 ದಿನಗಳಲ್ಲಿ ಸೂಕ್ತ ವ್ಯವಸ್ಥೆ ರೂಪಿಸುವಂತೆ ಹೈಕೋರ್ಟ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ನಿರ್ದೇಶಿಸಿದೆ.

ಏನಿದು ಪ್ರಕರಣ?

2011ರಲ್ಲಿ ವಕೀಲರಾಗಿ ನೋಂದಣಿಯಾದ ವ್ಯಕ್ತಿಯೊಬ್ಬರು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಸುಮಾರು 11 ವರ್ಷಗಳ ಕಾಲ ವಕೀಲಿಕೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್ ಅವರು ಈ ಆದೇಶ ಮಾಡಿದೆ.

ವಕೀಲರಾಗಿ ನೋಂದಣಿ ಬಳಿಕ ಎಐಬಿಇ ಪರೀಕ್ಹೆ ಪಾಸಾಗುವುದು ಕಡ್ಡಾಯ

ವಕೀಲರನ್ನು ನೋಂದಾಯಿಸುವುದಷ್ಟೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರ್ತವ್ಯವಲ್ಲ. ವಕೀಲಿಕೆ ನಡೆಸಲು ಅರ್ಹರಾಗಿರುವವರು ಮತ್ತು ಅರ್ಹರಲ್ಲದವರ ದಾಖಲೆ ನಿರ್ವಹಿಸುವುದೂ ಅದರ ಕರ್ತವ್ಯ. ವಕೀಲರಾಗಿ ನೋಂದಣಿ ಮಾಡಿಕೊಂಡ ಬಳಿಕ ಎರಡು ವರ್ಷಗಳೊಳಗೆ ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ನಿಗದಿತ ಅವಧಿಯಲ್ಲಿ ಪರೀಕ್ಷೆ ಪಾಸಾಗದ ವಕೀಲರನ್ನು ಗುರುತಿಸಲು ಪರಿಣಾಮಕಾರಿ ವ್ಯವಸ್ಥೆ ಅಗತ್ಯ. ಹಾಗಾಗಿ, ಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇಂತಹ ವ್ಯಕ್ತಿಗಳು ವಕೀಲಿಕೆ ಮುಂದುವರಿಸುತ್ತಿದ್ದರೆ, ಅವರನ್ನು ಗುರುತಿಸಲು ನಿರ್ದಿಷ್ಟ ವ್ಯವಸ್ಥೆ ರೂಪಿಸಿ, ಪತ್ತೆಹಚ್ಚಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್ ಹೇಳಿದ್ದೇನು?

ವಕೀಲರ ನೋಂದಣಿ ದಿನಾಂಕ ಮತ್ತು ಎರಡು ವರ್ಷಗಳ ಗಡುವು ಮುಕ್ತಾಯವಾಗುವ ದಿನಾಂಕವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ನೋಂದಣಿಯಾದರೂ ವಕೀಲಿಕೆ ಮುಂದುವರಿಸಲು ಅಗತ್ಯ ಅರ್ಹತೆ ಪಡೆಯದ ವಕೀಲರನ್ನು ಪರಿಷತ್ತು ಗುರುತಿಸಬೇಕು. ಕಾನೂನುಬಾಹಿರ ವಕೀಲಿಕೆ ತಡೆಯಲು ಅಂಥವರ ಪಟ್ಟಿ ಸಿದ್ಧಪಡಿಸಿ, ಅವರ ನೋಂದಣಿ ಅಮಾನತುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು. ವಕೀಲರೊಬ್ಬರು ನೋಂದಣಿಯಾದ ಎರಡು ವರ್ಷಗಳೊಳಗೆ ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಆ ವಿಚಾರವನ್ನು ವ್ಯವಸ್ಥೆಯು ತಕ್ಷಣವೇ ಪರಿಷತ್ತಿನ ಗಮನಕ್ಕೆ ತರುವಂತಿರಬೇಕು. ಆ ಮೂಲಕ ಸಂಬಂಧಪಟ್ಟ ವಕೀಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಬೇಕು ಎಂದು ಕರ್ನಾಟಕ ವಕೀಲ ಪರಿಷತ್ತಿಗೆ ಪೀಠ ನಿರ್ದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು, ಹಂಪಿ, ಮಡಿಕೇರಿಗೆ ವಿಮಾನಯಾನ; 150 ಎಕರೆ ಭೂಮಿ ಗುರುತಿಸಿದ ಸರ್ಕಾರ
Karnataka News Live: ಎಐಬಿಇ ಎಕ್ಸಾಂ ಪಾಸಾಗದೆ ವಕೀಲಿಕೆ ನಡೆಸ್ತಿರೋರಿಗೆ ಬಿಗ್ ಶಾಕ್! ಹೈಕೋರ್ಟ್ ಮಹತ್ವದ ಆದೇಶವೇನು?