ಆದಿಚುಂಚನಗಿರಿ ಆಸ್ಪತ್ರೆಯಿಂದ ಸೀಳುತುಟಿ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ, ವಸತಿ ಊಟ ಉಚಿತ

Published : Oct 19, 2026, 07:29 PM IST
adichunchanagiri Hospital

ಸಾರಾಂಶ

ಶ್ರೀ ಆದಿಚುಂಚನಗಿರಿ ಆಸ್ಪತ್ರೆಯಿಂದ ಸೀಳುತುಟಿ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಘೋಷಣೆ ಮಾಡಿದೆ. ಊಟ, ವಸತಿ ಸೇರಿದಂತೆ ಶಸ್ತ್ರಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ. ಸೀಳುತುಟಿ ನ್ಯೂನ್ಯತೆ ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.

ಹಾಸನ (ಅ.19) ಶ್ರೀ ಆದಿಚುಂಚನಗಿರಿ ಆಸ್ಪತ್ರೆ ಮಹತ್ವದ ಘೋಷಣೆ ಮಾಡಿದೆ. ಅಕ್ಟೋಬರ್ 26ರಿಂದ ಸೆಪ್ಟೆಂಬರ್ 5ರವರೆಗೆ ಸೀಳುತುಟಿ ನ್ಯೂನ್ಯತೆ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಘೋಷಿಸಿದೆ. ಉಚಿತ ಶಸ್ತ್ರಚಿಕಿತ್ಸೆ ಜೊತೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರ ಸದುಪಯೋಗ ಪಡಿಸಿಕೊಳ್ಳಲು ನಾಗಮಂಗಲ ಶ್ರೀ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರುಗಳಾದ ಡಾ ನವೀನ್,ಧರ್ಮೇಂದ್ರ ಹಾಗೂ ಪ್ರಸನ್ನ ಮನವಿ ಮಾಡಿದ್ದಾರೆ.

ಅಮೇರಿಕಾದ ನುರಿತ ವೈದ್ಯಕೀಯ ತಂಡದ ಸಹಯೋಗದೊಂದಿಗೆ ಈ ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆಯ ಸೇವೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಗೆ ಬರುವವರಿಗೆ ವಸತಿ ಮತ್ತು ಊಟಕ್ಕೂ ಉಚಿತ ವ್ಯವಸ್ಥೆ ಮಾಡಲಾಗಿದೆ. ಮೂರು ತಿಂಗಳ ವಯಸ್ಸಿನ ಮೇಲ್ಪಟ್ಟ ಎಲ್ಲಾ ಸೀಳುತುಟಿ ನ್ಯೂನ್ಯತೆ ಹೊಂದಿರುವ ಮಕ್ಕಳು ಈ ಉಚಿತ ಶಸ್ತ್ರಚಿಕಿತ್ಸೆಯ ಲಾಭ ಪಡೆಯಬಹುದು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಸೀಳುತುಟಿ ನ್ಯೂನ್ಯತೆ ಹೊಂದಿರುವ ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ಉಚಿತ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚಿನ ಮಕ್ಕಳಿಗೆ ಲಾಭವಾಗಲಿದೆ. ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಶಸ್ತ್ರಚಿಕಿತ್ಸೆ ನೆರವಾಗಲಿದೆ ಎಂದು ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರಾದ ಡಾ. ನವೀನ್, ಡಾ. ಧರ್ಮೇಂದ್ರ ಮತ್ತು ಡಾ. ಪ್ರಸನ್ನ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನಾಗಮಂಗಲದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಸರ್ಜರಿ

ಈ ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆ ನಾಗಮಂಗಲದ ಶ್ರೀ ಆದಿಚುಂಚನಗಿರಿ ಆಸ್ಪತ್ರೆಯಿಂದ ನೀಡಲಾಗುತ್ತದೆ. ಅಕ್ಟೋಬರ್ 26 ರಿಂದ ನವೆಂಬರ್ 5ರವರೆಗೆ ಈ ಸೇವೆ ಲಭ್ಯವಿರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಯುಧ ಪೂಜೆಗೆ ಕಾವೇರಿ ನೀರು ಬಳಕೆ ಮಾಡಿದರೆ ಹುಷಾರ್, ಬರೋಬ್ಬರಿ 5 ಸಾವಿರ ರೂ ದಂಡ ಎಚ್ಚರಿಕೆ
ಕಬ್ಬು ರೈತರ ಹೋರಾಟಕ್ಕೆ ತಾತ್ಕಾಲಿಕ ತೆರೆ: 2 ಬೇಡಿಕೆ ಈಡೇರಿಕೆ ಹೊಣೆ ಜೋಶಿ ಹೆಗಲಿಗೆ